Recipe: ಬೇಕಾಗುವ ಸಾಮಗ್ರಿ: 1 ಕಪ್ ಕಡ್ಲೆಬೇಳೆ, 1 ಈರುಳ್ಳಿ, 2 ಸ್ಪೂನ್ ಅಕ್ಕಿಹಿಟ್ಟು, 2ರಿಂದ 3ಹಸಿಮೆಣಸು, ಸಣ್ಣ ತುಂಡು ಶುಂಠಿ, ಜೀರಿಗೆ, ಇಂಗು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು 2 ತಾಸು ನೆನೆಸಿಡಿ. ಬಳಿಕ ನೀರು ಬಸಿದು, ಎರಡು ಸ್ಪೂನ್ ನೆನೆಸಿದ ಕಡಲೆ ಬೇಳೆ ತೆಗೆದು ಉಳಿದ ಕಡಲೆ ಬೇಳೆಯನ್ನು ನೀರು ಹಾಕದೇ ರುಬ್ಬಿ. ಇದಕ್ಕೆ ಎರಡು ಸ್ಪೂನ್ ಅಕ್ಕಿ ಹಿಟ್ಟು, ಸಣ್ಣಗೆ ಹೆಚ್ಚಿನ ಹಸಿಮೆಣಸಿನಕಾಯಿ, ಶುಂಠಿ, ಕೊಂಚ ಜಜ್ಜಿದ ಜೀರಿಗೆ, ಹಿಂಗು, ಉಪ್ಪು , ತೆಗೆದಿರಿಸಿದ ಕಡಲೆಬೇಳೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಅವಶ್ಯಕತೆ ಇದ್ದರೆ, ಕೊತ್ತೊಂಬರಿ ಸೊಪ್ಪು ಮತ್ತು ಈರುಳ್ಳಿ ಸೇರಿಸಬಹುದು.
10 ನಿಮಿಷದ ಬಳಿಕ, ಮಸಾಲೆ ವಡೆ ರೀತಿ, ಇದಕ್ಕೆ ಶೇಪ್ ಕೊಟ್ಟು, ಕಾದ ಎಣ್ಣೆಯಲ್ಲಿ ಕರಿದರೆ, ಚಟ್ಟಂಬಡೆ ರೆಡಿ. ಇದನ್ನು ಕೊಬ್ಬರಿ ಚಟ್ನಿಯೊಂದಿಗೆ ಸವಿಯಬಹುದು.
Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಥಾಯ್ ಪಪಾಯಾ ಸ್ಯಾಲೆಡ್