Summer Special: ಬೇಸಿಗೆಯಲ್ಲಿ ನಾವು ಎಂಥ ಸಲಾಡ್ ತಿನ್ನಬೇಕು ಅಂತಾ ಕೇಳಿದರೆ, ಹಲವರು ಸೌತೇಕಾಯಿ, ಈರುಳ್ಳಿ, ಟೊಮೆಟೋ ಸಲಾಡ್ ಅಂತಲೇ ಹೇಳುತ್ತಾರೆ. ಆದರೆ ಇದರೊಂದಿಗೆ ನೀವು ಬೇರೆ ಬೇರೆ ಸಲಾಡ್ ಮಾಡಿ ಸೇವಿಸಬಹುದು. ಹಾಗಾಗಿ ಇಂದು ನಾವು ಥಾಯ್ ಪಪಾಯಾ ಸ್ಯಾಲೆಡ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಥಾಯ್ ಪಪಾಯಾ ಸ್ಯಾಲೆಡ್: ಇದನ್ನು ಪಪ್ಪಾಯಿ ಕಾಯಿಯಿಂದ ತಯಾರಿಸುತ್ತಾರೆ. ಪಪ್ಪಾಯಿ ಕಾಯಿ ತಿಂದರೆ, ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲಾ, ಅಥವಾ ನಿಮಗೆ ಅಲರ್ಜಿ ಎಂದಾದಲ್ಲಿ ನೀವು ಇದನ್ನು ಸೇವಿಸಬೇಡಿ. ಕೆಲವರಿಗೆ ಮುಟ್ಟಿನ ಸಮಸ್ಯೆ ಇರುವುದರಿಂದ ಪಪ್ಪಾಯಿ ಕಾಯಿ ಸೇವನೆ ಮಾಡಲು ಅನುಮತಿ ಇರುವುದಿಲ್ಲ. ಅಂಥವರು ಈ ಸಲಾಡ್ ಸೇವಿಸದೇ ಇರುವುದು ಉತ್ತಮ.
ಇದಕ್ಕಾಗಿ ಮೊದಲು ಒಂದು ದೊಡ್ಡ ಬೌಲ್ ತೆಗೆದುಕೊಂಡು ಪಪ್ಪಾಯಿ ಕಾಯಿ ಅರ್ಧ ತುಂಡರಿಸಿ, ಅದರ ಸಿಪ್ಪೆ ತೆಗೆದು, ತುರಿಯಿರಿ. ನಿಮಗೆ ಸೇಮ್ ಥಾಯ್ ಪಪ್ಪಾಯಾ ಸ್ಯಾಲೇಡ್ ಬೇಕಂದ್ರೆ, ನೀವು ಪಪ್ಪಾಯಿ ಕಾಯಿಯನ್ನು ಉದ್ದೂದ್ದಕ್ಕೆ ತುರಿಯಬೇಕು. ಇದರೊಂದಿಗೆ ಒಂದು ಕ್ಯಾರೇಟ್ ಕೂಡ ತುರಿಯಿರಿ. ಜೊತೆಗೆ ಬೇಸಿಗೆಯ ಹಣ್ಣು ಮಾವಿನ ಹಣ್ಣನ್ನ ಕೂಡ ಕತ್ತರಿಸಿ, ಸೇರಿಸಿ. ಕೊಂಚ ಕೊತ್ತೊಂಬರಿ ಸೊಪ್ಪು ಇರಲಿ. ಈಗ ಇದರೊಂದಿಗೆ ಶೇಂಗಾ ಸಾಸ್ ಕೂಡ ಸೇರಿಬೇಕು.
ಇದಕ್ಕಾಗಿ ನೀವು 2 ಟೇಬಲ್ ಸ್ಪೂನ್ ನೆನೆಸಿದ ಶೇಂಗಾವನ್ನು ಮಿಕ್ಸಿ ಜಾರ್‌ಗೆ ಹಾಕಿ, 1 ಸ್ಪೂನ್ ನಿಂಬೆರಸ, ಚಿಕ್ಕ ಹಸಿಮೆಣಸಿನಕಾಯಿ ತುಂಡು, ಅರ್ಧ ಸ್ಪೂನ್ ಸೇಂಧವ ಲವಣ, 1 ಸ್ಪೂನ್ ಬೆಲ್ಲದ ಪುಡಿ, ಎರಡು ಸ್ಪೂನ್ ನೀರು ಹಾಕಿ, ಪೇಸ್ಟ್ ತಯಾರಿಸಿ. ಇದನ್ನು ಸಲಾಡ್‌ಗೆ ಸೇರಿಸಿ ಮಿಕ್ಸ್ ಮಾಡಿ. ಒಂದು ಪ್ಲೇಟ್‌ಗೆ ಇದನ್ನು ಹಾಕಿ, ಮೇಲಿನಿಂದ ಹುರಿದ ಶೇಂಗಾ ಬೀಜವನ್ನು ಗಾರ್ನಿಷ್ ಮಾಡಿದ್ರೆ, ಥಾಯ್ ಪಪಾಯಾ ಸಲಾಡ್ ರೆಡಿ..
ಅತ್ಯುತ್ತಮ ಡ್ರೈಫ್ರೂಟ್ಸ್, ವೆರೈಟಿ ಖರ್ಜೂರ ಬೇಕಂದ್ರೆ, ಬೆಂಗಳೂರಿನ ಈ ಅಂಗಡಿಗೆ ಹೋಗಿ..
ರಕ್ತ ನಿಂತಲ್ಲೇ ನಿಂತರೆ ಏನಾಗತ್ತೆ..? ಉಗುರಿನ ಬದಿಗಳನ್ನು ಕತ್ತರಿಸುತ್ತಿದ್ದೀರಾ..?