Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ತೊಗರಿ ಬೇಳೆ, 5 ಟೊಮೆಟೋ, 3 ಹಸಿಮೆಣಸು, ಕಾಳುಮೆಣಸು, ಕರಿಬೇವು, ಶುಂಠಿ, ಜೀರಿಗೆ, ಕೊತ್ತೊಂಬರಿ ಸೊಪ್ಪು, ಬೆಳ್ಳುಳ್ಳಿ, ರಸಂ ಪುಡಿ, ಅರಿಶಿನ, ಬೆಲ್ಲ, ಹಿಂಗು, ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು, ಕುಕ್ಕರಲ್ಲಿ ಮೂರರಿಂದ ನಾಲ್ಕು ವಿಶಲ್ ಕೂಗಿಸಬೇಕು. ಬಳಿಕ, ಮಿಕ್ಸಿ ಜಾರ್‌ಗೆ 5ರಿಂದ 6 ಕಾಳುಮೆಣಸು, ಅರ್ಧ ಸ್ಪೂನ್ ಜೀರಿಗೆ, ಕೊಂಚ ಕರಿಬೇವು, ಕೊತ್ತೊಂಬರಿ ಸೊಪ್ಪು, 5 ಎಸಳು ಬೆಳ್ಳುಳ್ಳಿ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.
ಈಗಾಗಲೇ ಬೇಯಿಸಿದ ಬೇಳೆಗೆ, 5 ಟೊಮೆಟೋ ತುಂಡು, ಹಸಿಮೆಣಸಿನಕಾಯಿ, 1 ಸ್ಪೂನ್ ರಸಂ ಪುಡಿ, ಅರಿಶಿನ ಉಪ್ಪು, ಜಜ್ಜಿದ ಶುಂಠಿ, ನೀರು ಹಾಕಿ, ಬೇಯಿಸಿ. ಬಳಿಕ ಈಗಾಗಲೇ ತರಿ ತರಿಯಾಗಿ ರುಬ್ಬಿಕೊಂಡ ಮಿಶ್ರಣ, ಬೆಲ್ಲ ಹಾಕಿ, ಮತ್ತಷ್ಟು ಕುದಿಸಿ.
ಈಗ ಒಂದು ಒಗ್ಗರಣೆ ಸೌಟಿಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಹಿಂಗು ಹಾಕಿ, ಒಗ್ಗರಣೆ ಕೊಟ್ಟರೆ, ಬಿಸಿ ಬಿಸಿ ಟೊಮೆಟೋ ರಸಂ ರೆಡಿ.
Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಥಾಯ್ ಪಪಾಯಾ ಸ್ಯಾಲೆಡ್