Thursday, December 26, 2024

Latest Posts

ನಿನ್ನ ತೊಂದರೆಗಳಿಗೆ ನೀನೆ ಪರಿಹಾರ ಹುಡುಕು ನೆಪ ಹೇಳಬೇಡ

- Advertisement -

moral story

ಒಂದು ಬಲ್ಲಟಗಿ ಎನ್ನುವ ಗ್ರಾಮ ಅಲ್ಲಿ ದುರುಗಪ್ಪ ಎನ್ನುವನಿಗೆ ಒಬ್ಬನೆ ಒಬ್ಬ ಮಗನಿದ್ದ ಅವನ ಹೆಸರು ಮಾರುತಿ .ಈ ಮಾರುತಿ ಓದಿನಲ್ಲಿ ತುಂಬ ಮುಂದೆಇದ್ದ ಅವನನ್ನು ಇನ್ನ ಚೆನ್ನಾಗಿ ಓದಿಸಬೇಕು ಎಂದುಕೊಂಡು ರಾಯಚೂರು ಎನ್ನುವ ಪಟ್ಟಣಕ್ಕೆ ಬಂದು  ಅಲ್ಲಿ ಒಂದು ಕಾಸಗಿ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಾ ಮಗನನ್ನು ಓದಿಸಲು ತಯಾರಾದರು

ಒಮ್ಮೆ ಮಾರುತಿಯ  ತಂದೆ ದಿಉರುಗಪ್ಇಪನಿಗೆ ಇದ್ದಕ್ಕಿದ್ದ ಹಾಗೆ ಹುಷಾರು ತಪ್ಪಿತು. ಅದಕ್ಕಾಗಿ ಮಅರುತಿ  ಅಪ್ಪನನ್ನು ನೋಡಿಕೊಳ್ಳಲು ಶಾಲೆಗೆ ಮೂರು ದಿನ ರಜೆ ಹಾಕಿದ. ಅದೇ ಸಮಯದಲ್ಲಿಅವನಿಗೆ ಪರೀಕ್ಷೆಗಳು ಹತ್ತಿರದಲ್ಲಿದ್ದವು. ಅವನಿಗೆ ಯಾರು ಸಹ ಹಿಂದಿನ ತರಗತಿಯಲ್ಲಿ ನಡೆದ ಪಾಠಗಳ ನೋಟ್‌ ಪುಸ್ತಕ ಕೊಡಲಿಲ್ಲ. ಅವನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನಿದ್ದ. ಇದರಿಂದಾಗಿ ಅವನಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು.

ಮಾರುತಿ ಇದಕ್ಕೆ ಬೇಸರ ಮಾಡಿಕೊಳ್ಳದೆ ಮಾರ್ಕ್ಸ್‌ ಕಾರ್ಡನ್ನು ಅಪ್ಪನಿಗೆ ತೋರಿಸಿದಾಗ ಅಪ್ಪ, ‘ಯಾಕಿಷ್ಟು ಕಡಿಮೆ ಅಂಕ ಬಂದಿದೆ. ನೀನು ನೂರಕ್ಕೆ ನೂರು ಅಂಕ ತೆಗೆದುಕೊ ಎಂದು ನಾನು ಹೇಳುವುದಿಲ್ಲ. ಆದರೆ ನೀನು ಶ್ರಮ ಹಾಕಿದಷ್ಟು ಅಂಕ ಬರುತ್ತದೆಯಲ್ಲವೇ?’ ಎಂದರು. ಅದಕ್ಕೆಮಾರುತಿ ‘ಹೌದು ಅಪ್ಪ, ನೀವು ಹೇಳುವುದೇನೋ ಸರಿ. ಆದರೆ ನಿಮಗೆ ಹುಷಾರಿಲ್ಲದ ಸಮಯದಲ್ಲಿ ನಾನು ನಿಮ್ಮನ್ನು ನೋಡಿಕೊಳ್ಳುವ ಸಲುವಾಗಿಶಾಲೆಗೆ ರಜೆ ಹಾಕಿದ್ದೆ . ಅಂದು ನಡೆದ ಪಾಠದ ನೋಟ್‌ ಪುಸ್ತಕವನ್ನು ನನಗೆ ಯಾರೂ ನೀಡಲಿಲ್ಲ. ನಾನೇನು ಮಾಡ್ಲಿ?’ ಎಂದ. ಅದಕ್ಕೆ ಅಪ್ಪ ‘ಅವರು ಯಾರೂ ಪುಸ್ತಕ ಕೊಡಲಿಲ್ಲ ಎಂದು ಹೀಗೆ ನೀನು ನೆಪ ಹೇಳಿ ಕೂರಬಾರದು. ನಿಮ್ಮ ಟೀಚರ್‌ಗೆ ಹೇಳಿ ಅವರಿಂದ ಹೇಳಿಸಿ ಪಡೆಯಬಹುದಿತ್ತಲ್ವ? ಟೀಚರ್‌ಗೆ ಕೇಳಲು ಭಯವಾದರೆ ನನ್ನನ್ನು ಕೇಳಬಹುದಿತ್ತು. ನಾನು ಬಂದು ನಿಮ್ಮ ಶಿಕ್ಷಕರಿಗೆ ಹೇಳುತ್ತಿದ್ದೆ’ ಎಂದರು.

ಅದಕ್ಕೆ ಮಾರುತಿ ‘ಹೌದಪ್ಪ, ನನಗಿದು ಹೊಳೆಯಲೇ ಇಲ್ಲ’ ಎಂದ. ಅದಕ್ಕೆ ತಂದೆ ‘ಇದು ಕೇವಲ ಓದಿಗೆ ಮಾತ್ರ ನಿನ್ನ ವಿದ್ಯಾಬ್ಯಾಸಕ್ಕೆ ಮಾತ್ರ ಸೀಮಿತವಾಗಬಾರದು . ಜೀವನದಲ್ಲೂಅಷ್ಟೆ. ಯಾರು ಕೂಡ ನೀನು ಕೆಲಸಕ್ಕೆ ಸಹಾಯ ಮಾಡುವುದಿಲ್ಲ, ಮತ್ತು  ಮುಂದುವರೆಯಲು ಆಸರೆ ಮತ್ತು ಸಹಾಯ ನೀಡುವುದಿಲ್ಲ. ನಾವೇ ಬುದ್ಧಿ ಉಪಯೋಗಿಸಿ ಪರಿಹಾರ ಕಂಡುಕೊಳ್ಳಬೇಕು. ಈ ಮಾತನ್ನು ಯಾವಾಗಲೂ ನೆನಪಿಟ್ಟುಕೋ’ ಎಂದರು. ಮಾರುತಿ ಅಂದಿನಿಂದ ನೆಪ ಹೇಳಿ ತಪ್ಪಿಸಿಕೊಳ್ಳುವುದನ್ನು ಬಿಟ್ಟು ಜಾಣ ವಿದ್ಯಾರ್ಥಿಯಾದ.

ಲಂಡನ್ನ ನ ಬಸವೇಶ್ವರ ಪ್ರತಿಮೆಗೆ ನಮಸ್ಕರಿಸಿದ ರಾಹುಲ್ ಗಾಂಧಿ

ಮುಖದ ಮೇಲಿನ ಡಾರ್ಕ್ ಸ್ಪಾಟ್ಸ್ ಕಡಿಮೆ ಮಾಡೋದು ಹೇಗೆ..?

ರಶ್ಮಿಕಾ ಮಂದಣ್ಣ ತುಂಡುಡುಗೆ ನೋಡಿ ನಟಿ ಉರ್ಫಿ ಜಾವೇದ್ ಗೆ ಹೋಲಿಸಿದ ನೆಟ್ಟಿಗರು…!

- Advertisement -

Latest Posts

Don't Miss