Sunday, September 8, 2024

Latest Posts

ನಿಗೂಢ ರೋಗಕ್ಕೆ 40 ಸಾವು…!

- Advertisement -

ಉತ್ತರಪ್ರದೇಶ: ಉತ್ತರಪ್ರದೇಶದ ಫಿರೋಜಾಬಾದ್ ನಲ್ಲಿ ನಿಗೂಢ ರೋಗಕ್ಕೆ 30ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಒಟ್ಟು 40 ಮಂದಿ ಬಲಿಯಾಗಿದ್ದಾರೆ.  ಇನ್ನು ಫಿರೋಜಾಬಾದ್ ಮೆಡಿಕಲ್ ಕಾಲೇಜಿನಲ್ಲಿ 137 ಮಂದಿ ಮಕ್ಕಳು ಈ ನಿಗೂಢ ರೋಗಕ್ಕೆ ತುತ್ತಾಗಿದ್ದು ಅವರ ಪೈಕಿ 72 ಮಕ್ಕಳ ತೀವ್ರ ಅಸ್ವಸ್ಥಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾರೆ.

ಇನ್ನು ಮೇಲ್ನೋಟಕ್ಕೆ ಎಲ್ಲಾ ರೋಗಿಗಳಲ್ಲೂ ಪ್ಲೇಟ್ ಲೆಟ್ಸ್ ಸಂಖ್ಯೆಯಲ್ಲಿ ಇಳಿಕೆ, ತೀವ್ರ ಜ್ವರ ಸೇರಿದಂತೆ ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಳ್ತಿದ್ರೂ ಕೂಡ ಇದು ರೂಪಾಂತರ ಗೊಂಡಿರೋ ವೈರಸ್ ನಿಂದ ಹರಡುತ್ತಿರೋ ರೋಗ ಅನ್ನೋದು ವೈದ್ಯರ ಅಭಿಪ್ರಾಯ. ಇನ್ನು ರೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸಮಪರ್ಕ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಸಿಎಂ ಯೋಗಿ ಆದಿತ್ಯನಾಥ್ ವೈದ್ಯರಿಗೆ ತಿಳಿಸಿದ್ದಾರೆ. ಈ ನಿಗೂಢ ರೋಗ ಹರಡುತ್ತಿರೋದಕ್ಕೆ ಕಾರಣವೇನು ಅನ್ನೋ ಬಗ್ಗೆಯೂ ಲಖನೌನ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ತಂಡ ಸಂಶೋಧನೆ ನಡೆಸ್ತಿದೆ. ಇನ್ನು ಈ ನಿಗೂಢ ಜ್ವರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈರ್ಮಲ್ಯತೆ ಕಾಪಾಡಿ ಅಂತ ಸಿಎಂ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ.

- Advertisement -

Latest Posts

Don't Miss