Thursday, June 19, 2025

Latest Posts

ಇದು ಪ್ರಪಂಚದ ದುಬಾರಿ ಬೆಲೆಯ ಪ್ರಾಣಿ, ಪಕ್ಷಿ ಮತ್ತು ಕೀಟಗಳು..

- Advertisement -

ಇಂದಿನ ಕಾಲದಲ್ಲಿ ಕೆಲ ಜನರು ಸರಿಯಾಗಿ ಊಟ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ತಮ್ಮ ಸಾಕು ಪ್ರಾಣಿಗೆ ಚೆನ್ನಾಗಿ ದುಡ್ಡು ಖರ್ಚು ಮಾಡ್ತಾರೆ. ಅದಕ್ಕೆ ಶ್ಯಾಂಪು, ಸೋಪುಸ ಬಾಚಣಿಕೆ, ಆಹಾರ ಎಲ್ಲದಕ್ಕೂ ಸಾವಿರ ಸಾವರ ರೂಪಾಯಿ ಹಣ ಖರ್ಚು ಮಾಡೋಕ್ಕೆ ಅವರು ರೆಡಿ ಇರ್ತಾರೆ. ಇಂಥ ಪ್ರಾಣಿ ಪ್ರಿಯರಿಗೆಂದೇ ಇಂದು ನಾವು, ಪ್ರಪಂಚದ ಹೆಚ್ಚಿನ ಬೆಲೆ ಪ್ರಾಣಿಯ ಪರಿಚಯ ಮಾಡಿಸಲಿದ್ದೇವೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..

  1. ಅಫ್ಘಾನ್ ಹೌಂಡ್. ಇದು ಅಫ್ಘಾನಿಸ್ತಾನದಲ್ಲಿ ಕಂಡು ಬರುವ ಶ್ವಾನ. ತಲೆ ಮತ್ತು ಕೈ ಕಾಲುಗಳಿಗೆ ಉದ್ದುದ್ದ ರೋಮ ಹೊಂದಿರುವ ಈ ನಾಯಿ, ಬೇಟೆಯಾಡುವುದರಲ್ಲಿ ನಿಸ್ಸೀಮವಂತೆ. 50ರಿಂದ 80 ಸಾವಿರ ರೂಪಾಯಿವರೆಗೆ ಈ ನಾಯಿಯನ್ನ ಮಾರಾಟ ಮಾಡಲಾಗತ್ತೆ.
  2. ಸ್ಟ್ಯಾಗ್ ಬೀಟಲ್‌. ನೀವು ನಾಯಿ, ಬೆಕ್ಕು, ದನ ಕರುಗಳನ್ನ ಸಾಕುವುದನ್ನು ನೋಡಿರ್ತೀರಿ. ಆದ್ರೆ ನೀವು ಯಾವತ್ತಾದ್ರೂ, ಯಾರಾದ್ರೂ ಕೀಟವನ್ನ ಸಾಕುವುದನ್ನ ಕೇಳಿದ್ದೀರಾ..? ಆದ್ರೆ ಈ ಸ್ಟ್ಯಾಗ್ ಬೀಟಲ್ ಅನ್ನೋ ಕೀಟವನ್ನ, ವಿದೇಶಿಗರು ಸಾಕುತ್ತಾರೆ. ವಿಚಿತ್ರವಾಗಿರುವ ಈ ಕೀಟದ ಬೆಲೆ 9 ಸಾವಿರ ಡಾಲರ್. ಜಪಾನ್‌ನಲ್ಲಿ ಹೆಚ್‌ಚಾಗಿ ಕಂಡು ಬರುವ ಈ ಕೀಟವನ್ನ, ಜನ ಸಾಕೋಕ್ಕೆ ಇಷ್ಟಪಡುತ್ತಾರೆ.
  3. ಹೈಸಿಂತ್ ಮಕಾವ್. ಗಿಳಿಯ ಪ್ರಜಾತಿಯಾಗಿರುವ ಈ ಪಕ್ಷಿ, ಕಲರ್‌ಫುಲ್‌ ಆಗಿ, ಸುಂದರವಾಗಿರತ್ತೆ. ಸೆಂಟ್ರಲ್ ಸೌತ್ ಅಮೆರಿಕಾದಲ್ಲಿ ಕಂಡು ಬರುವ ಈ ಪಕ್ಷಿಯ ಬೆಲೆ, 10 ಸಾವಿರ ಡಾಲರ್ ಆಗಿದೆ. ಇದರ ಕೊಂಕು ಬಲಿಷ್ಠವಾಗಿದ್ದು, ಗಟ್ಟಿಯಾದ ಆಹಾರವನ್ನ ಸಹ ಇದು ಸುಲಭವಾಗಿ ಕಚ್ಚಿ ತಿನ್ನತ್ತೆ. ಇದರ ಉದ್ದ ,ಕೂಡ, ಉಳಿದ ಗಿಳಿಗಳಿಗಿಂತ ಉದ್ದವಾಗಿರುತ್ತದೆ.

4.. ಸವಾನಾ ಕ್ಯಾಟ್. ಬೆಕ್ಕು ಸಾಕೋದಂದ್ರೆ ಯಾರಿಗೆ ತಾನೇ ಇಷ್ಟ ಇರೋದಿಲ್ಲಾ ಹೇಳಿ. ಅದರ ಕ್ಯೂಟ್‌ನೆಸ್‌ಗೆ ಜನ ಮರುಳಾಗ್ತಾರೆ. ಇಂಥ ಮುದ್ದು ಪ್ರಾಣಿಗಳಲ್ಲಿ ಸವಾನಾ ಕ್ಯಾಟ್ ಕೂಡ ಒಂದು. ಡೊಮೆಸ್ಟಿಕ್ ಕ್ಯಾಟ್, ಆಫ್ರಿಕನ್ ಕ್ಯಾಟ್ ಸೇರಿ ಹುಟ್ಟಿದ ಬೆಕ್ಕೇ, ಸವಾನಾ ಕ್ಯಾಟ್. ಈ ಬೆಕ್ಕಿನ ಬೆಲೆ 20 ಸಾವಿರ ಡಾಲರ್‌.

  1. ಅರೇಬಿಯನ್ ಹಾರ್ಸ್. ಅರೇಬಿಯನ್ ಕುದುರೆಗಳು ನೋಡೋಕ್ಕಷ್ಟೇ ಚಂದವಲ್ಲ, ಬದಲಾಗಿ, ಇವು ಬುದ್ಧಿವಂತ ಕುದುರೆಗಳಾಗಿದೆ. ಈ ಕುದುರೆಯನ್ನ ಓಡಿಸಿದವರು ಹೇಳೋದೇನಂದ್ರೆ, ಇದರ ಮೇಲೆ ಕುಳಿತಾಗ, ನಾನು ಆಕಾಶದಲ್ಲಿ ಹಾರುತ್ತಿದ್ದೇನೆ ಎನ್ನಿಸಿತು, ಅಷ್ಟು ಎಂಜಾಯ್ ಮಾಡಿದೆ ಎನ್ನುತ್ತಾರೆ. ಈ ಕುದುರೆ, ಬೇರೆ ಕುದುರೆಗಿಂತ ವಿಭಿನ್ನವಾಗಿದ್ದು, ಇದರ ಬೆಲೆ 5ರಿಂದ 30 ಸಾವಿರ ಡಾಲರ್ ಆಗಿದೆ.
  2. ದಿ ವೈಟ್ ಲಯನ್. ಕಾಡಿನ ರಾಜಾ ಅಂತಾನೇ ಕರೆಯಲ್ಪಡುವ ಪ್ರಾಣಿ ಅಂದ್ರೆ ಸಿಂಹ. ಅದರಲ್ಲೂ ಬಿಳಿ ಸಿಂಹದ ಅಂದ ಚಂದವೇ ಬೇರೆ. ಗತ್ತೇ ಬೇರೆ. ಅಲ್ಲದೇ ಬಿಳಿ ಸಿಂಹ ಅಪರೂಪದ ಸಿಂಹವಾಗಿದ್ದು, ಇದರ ಬೆಲೆ 1 ಲಕ್ಷ 40 ಸಾವಿರ ಮಿಲಿಯನ್ ಆಗಿದೆ.

- Advertisement -

Latest Posts

Don't Miss