Thursday, March 13, 2025

Latest Posts

ಮುಂಬೈ ಸರಣಿ ಬಾಂಬ್ ಸ್ಪೋಟದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ವಿದೇಶದಲ್ಲಿ ಅರೆಸ್ಟ್..

- Advertisement -

ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಭಯೋತ್ಪಾದಕ ಅಬುಬಕರ್‌ನನ್ನು ವಿದೇಶದಲ್ಲಿ ಬಂಧಿಸಲಾಗಿದೆ. ಈ ವರ್ಷ ಅಬುಬಕರ್ ಮತ್ತು ಇನ್ನಿತರು ಭಯೋತ್ಪಾದಕರು ಸೇರಿ, ಮುಂಬೈನ 12 ಕಡೆ ಬಾಂಬ್ ಸ್ಪೋಟ ಮಾಡಿದ್ದರು. ಇದರಲ್ಲಿ 257 ಜನ ಮೃತಪಟ್ಟಿದ್ದರು, ಮತ್ತು 700ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿತ್ತು.

ದುಬೈ ಮತ್ತು ಪಾಕಿಸ್ತಾನದಲ್ಲಿ ಅಬುಬಕರ್ ವಾಸಿಸುತ್ತಿದ್ದ. ಕೆಲವೊಮ್ಮೆ ದುಬೈನಲ್ಲಿದ್ದರೆ, ಮತ್ತೆ ಕೆಲವು ಬಾರಿ ಪಾಕಿಸ್ತಾನದ ಮನೆಯಲ್ಲಿರುತ್ತಿದ್ದ. 2019ರಲ್ಲಿ ಯುಎಇನಲ್ಲಿ ಆತನನ್ನು ಬಂಧಿಸಲಾಗಿತ್ತು. ಆದ್ರೆ ಜಾಮೀನು ಪತ್ರ ಸಿಕ್ಕ ಕಾರಣ ಬಿಡುಗಡೆಯಾಗುವುದರಲ್ಲಿ ಅಬುಬಕರ್ ಯಶಸ್ವಿಯಾಗಿದ್ದ. ದಾವುದ್ ಇಬ್ರಾಹಿಂನ ನಿಕಟವರ್ತಿಯಾಗಿದ್ದ ಅಬುಬಕರ್, ಮೊಹಮ್ಮದ್ ಮತ್ತು ಮುಸ್ತಫಾ ಎಂಬುವರೊಂದಿಗೆ ಸೇರಿ, ಬಟ್ಟೆ, ಆಭರಣಗಳ ಕಳ್ಳ ಸಾಗಣೆ ಮಾಡುತ್ತಿದ್ದನೆಂಬ ಆರೋಪವಿದೆ.

1997ರಲ್ಲಿ ಅಬುಬಕರ್ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಲಾಗಿತ್ತು. ಆಗಿನಿಂದ ಭಾರತೀಯ ಏಜನ್ಸಿಗಳು, ಅಬುಬಕರ್‌ನನ್ನು ಹುಡುಕುತ್ತಿದ್ದವು. ಇದೀಗ ಅಬುಬಕರ್ ಸಿಕ್ಕಿಬಿದ್ದಿದ್ದು, ಭಾರತೀಯ ಏಜನ್ಸಿಗಳು ಯಶಸ್ವಿಯಾಗಿದೆ. ಭಾರತೀಯ ಮಹಿಳೆಯನ್ನ ಮದುವೆಯಾಗಿದ್ದ ಅಬುಬಕರ್, ಇರಾನಿ ಮಹಿಳೆಯ ಜೊತೆ ಎರಡನೇಯ ಮದುವೆಯಾಗಿದ್ದಾನೆ. ಇದೀಗ ಅಬುಬಕರ್‌ನನ್ನು ದುಬೈ ಪೊಲೀಸರಿಂದ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ.  

- Advertisement -

Latest Posts

Don't Miss