Bihar: ಪ್ರೀತಿ ಅನ್ನೋದು ಇತ್ತೀಚಿನ ದಿನಗಳಲ್ಲಿ ಯಾವ ರೀತಿಯ ಅರ್ಥ ಪಡೆದುಕೊಳ್ಳುತ್ತಿದೆ ಅಂದರೆ, ಚಿತ್ರ-ವಿಚಿತ್ರ ಲವ್ ಸ್ಟೋರಿಗಳನ್ನು ನಾವು ಕೇಳುತ್ತಿದ್ದೇವೆ. 80ರ ವೃದ್ಧನನ್ನು 16ರ ಯುವತಿ ವಿವಾಹವಾಗುವುದು. 40ರ ಮಹಿಳೆಯ ಮೇಲೆ 20ರ ಯುವಕನಿಗೆ ಪ್ರೇಮವಾಗುವುದು. ಹೀಗೆ ವಯಸ್ಸಿನ ಹಂಗೇ ಇಲ್ಲದೇ, ಪ್ರೇಮಾಂಕುರವಾಗುತ್ತದೆ.
ಆದ್ರೆ ಭಾರತದಲ್ಲಿ ಸಲಿಂಗ ಕಾಮಕ್ಕೆ ಅವಕಾಶ ಸಿಕ್ಕ ಬಳಿಕ, ಈ ರೀತಿಯ ಹಲವು ಲವ್ ಸ್ಟೋರಿಗಳು ನಮ್ಮ ಮುಂದೆ ಬರುತ್ತಿದೆ. ಅಂಥದ್ದೇ ಒಂದು ಸಲಿಂಗ ಕಾಮದ ಲವ್ ಸ್ಟೋರಿ ಬಿಹಾರದಲ್ಲಿ ನಡೆದಿದೆ. ಆದ್ರೆ ಇದೆಷ್ಟು ವಿಚಿತ್ರವಾಗಿದೆ ಅಂದ್ರೆ, ಅತ್ತೆಯೊಬ್ಬಳು ತನ್ನ ಪತಿಯನ್ನೇ ತ್ಯಜಿಸಿ, ಸೊಸೆಯನ್ನು ವಿವಾಹವಾಗಿದ್ದಾಳೆ.
ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸುಮನ್ ಎಂಬ ಮಹಿಳೆ ಶೋಭಾ ಎಂಬ ಸೊಸೆಗಾಗಿ ತನ್ನ ಪತಿಯನ್ನೇ ತೊರೆದಿದ್ದಾಳೆ. ಇವರಿಬ್ಬರು ಮೂರು ವರ್ಷಗಳ ಕಾಲ ತಾವಿಬ್ಬರು ಸಂಬಂಧದಲ್ಲಿದ್ದು, ಇದೀಗ ವಿವಾಹವಾಗಿದ್ದೇವೆ ಎಂದಿದ್ದಾರೆ.
ಶೋಭಾ ಸುಮನ್‌ಗೆ ಸಂಬಂಧದಲ್ಲಿ ಸೊಸೆಯಾಗಬೇಕು. ಇವರಿಬ್ಬರು ಮೂರು ವರ್ಷದಿಂದ ರಿಲೆಶನ್‌ಶಿಪ್‌ನಲ್ಲಿದ್ದಾರೆ. ಇದೀಗ ವಿವಾಹವಾಗಿದ್ದು, ಬೇರೆಯವರ ಮಾತನ್ನು ಕೇಳಿ ನಮ್ಮ ನೆಮ್ಮದಿ ಹಾಳು ಮಾಡಿಕೊಳ್ಳಲು ನಮಗೆ ಮನಸ್ಸಿರಲಿಲ್ಲ. ಹಾಗಾಗಿ ನಾವು ಗಟ್ಟಿ ನಿರ್ಧಾರ ಮಾಡಿ, ವಿವಾಹವಾಗಿದ್ದೇವೆ ಎಂದು ಇವರಿಬ್ಬರು ಹೇಳಿದ್ದಾರೆ.
बिहार के गोपालगंज से थोड़ा विचित्र मामला सामने आया है….
जहां मामी और भांजी के बीच प्यार हो गया और दोनों ने जन्म-जन्म तक साथ रहने की कसमें खा ली।
मामी- भांजी ने पुरे रिती रेवाज के साथ शादी कर ली….#SameSexMarriage pic.twitter.com/AyDSUzKZBb
— Afroz Alam (@AfrozJournalist) August 12, 2024