Movie News: ಗುರುಕಿರಣ್. ಸ್ಯಾಂಡಲ್‌ವುಡ್ ಕಂಡ ಹೆಸರಾಂತ ಸಂಗೀತ ನಿರ್ದೇಶಕ, ಹಾಡುಗಾರ. ಕನ್ನಡ ಸಿನಿ ಪ್ರೇಮಿಗಳಿಗೆ ಕಿವಿ ಇಂಪು ಮಾಡುವ ಹಾಡು ಕೊಟ್ಟ ಖ್ಯಾತಿ ಇವರಿಗೆ ಸಲ್ಲತ್ತೆ. ಗುರುಕಿರಣ್ ಹಾಡಿದ ಹಾಡನ್ನು ಕೇಳಿಯೂ ಸುಮ್ಮನೆ ಕೂರುವ ಕನ್ನಡಿಗರು ಎಲ್ಲೂ ಸಿಗಲ್ಲ. ಯಾಕಂದ್ರೆ ಇವರ ಹಾಡಿನಲ್ಲಿರುವ ಕಿಕ್ ಅಂಥದ್ದು, ಎಂಥವರನ್ನೂ ಎದ್ದು ಒಂದು ಸ್ಟೆಪ್ ಹಾಾಕುವಂತೆ ಮಾಡತ್ತೆ.
ಇನ್ನು ಇವರು ಕಂಪೋಸ್ ಮಾಡಿರುವ ಹಾಡಿನ ಬಗ್ಗೆ ಹೇಳೋದಾದ್ರೆ, ಇತ್ತೀಚಿನ ದಿನಗಳಲ್ಲಿ ಟ್ರೆಂಡಿಂಗ್‌ನಲ್ಲಿರುವ ಹಾಡಾಗ, ಓ ನಲ್ಲ ನೀನಲ್ಲಾ, ಕರಿಮಣಿ ಮಾಲೀಕ ನೀ ನಲ್ಲ ಅನ್ನೋ ಹಾಡೇ, ಇವರ ಅತ್ಯದ್ಭುತ ಸಾಹಿತ್ಯ ರಚನೆಗೆ ಸಾಕ್ಷಿ. ಗುರುಕಿರಣ್ ಅವರು ತಮ್ಮ ಕಚೇರಿಯಲ್ಲೇ ಕರ್ನಾಟಕ ಟಿವಿಗೆ ಸಂದರ್ಶನ ನೀಡಿದ್ದು, ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಮ್ಯೂಸಿಕ್ ಜರ್ನಿ ಬಗ್ಗೆ ಮಾತನಾಡಲು ಶುರು ಮಾಡಿದ ಗುರುಕಿರಣ್ ಹೇಳಿದ್ದು, ನಾನು ಸಂಗೀತ ನಿರ್ದೇಶಕನಾಗಬೇಕು ಅಂತ ಅಂದುಕೊಂಡವನೇ ಅಲ್ಲ. ನನಗೆ ಸಿಂಗರ್ ಆಗಬೇಕು, ಹಾಡಬೇಕು ಅನ್ನೋ ಆಸೆ ಇತ್ತು. ಆದರೆ ಸಂಗೀತವೇ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ನಾನು ಚಿಕ್ಕವನಿರುವಾಗ, ಕ್ಯೂನಲ್ಲಿ ನಿಂತು ಸಿನಿಮಾ ನೋಡಿ, ಯಾವ ಸೆಲೆಬ್ರಿಟಿಗಳ ಅಭಿಮಾನಿಯಾಗಿದ್ದೆನೋ, ಅಂಥವರ ಜೊತೆ ಚರ್ಚೆ ಮಾಡಿ, ಹಾಡು ಬರೆಯುವ , ಹಾಡು ಹಾಡುವ ಅವಕಾಶವೆಲ್ಲ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಗುರುಕಿರಣ್ ಅವರು ಸೈನ್ಸ್ ತೆಗೆದುಕೊಂಡು, ಮೆಡಿಕಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡು, ಡಾಕ್ಟರ್ ಆಗುವ ಕನಸು ಕಾಣುತ್ತಿದ್ದರು. ಅವರ ತಾಯಿಗೂ ಕೂಡ ಮಗ, ಡಾಕ್ಟರ್ ಆಗಬೇಕು ಅನ್ನುವ ಆಸೆ ಇತ್ತು. ಆದರೆ ಕಾಲೇಜಿನಲ್ಲಿ ನಡೆದ ಕೆಲ ಘಟನೆಗಳು, ಮ್ಯೂಸಿಕ್ ಮೇಲೆ ಇಂಟ್ರೆಸ್ಟ್ ಬರುವ ಹಾಗೆ ಮಾಡಿತ್ತು. ಅದೇ ಕುತೂಹಲ, ಇಂದು ಸ್ಯಾಂಡಲ್‌ವುಡ್‌ಗೆ ಓರ್ವ ಅದ್ಭುತ ಹಾಡುಗಾರ ಮತ್ತು ಸಂಗೀತ ನಿರ್ದೇಶಕನನ್ನು ಕೊಟ್ಟಿದ್ದು.
ಗುರುಕಿರಣ್ ಅವರ ಕಚೇರಿ ಹೇಗಿದೆ..? ಅವರು ಯಾವ ಕಾರ್ ಬಳಸುತ್ತಾರೆ..? ಅವರಿಗೆ ಎಷ್ಟೆಲ್ಲ ಪ್ರಶಸ್ತಿ ಬಂದಿದೆ..? ಹೀಗೆ ಇನ್ನಷ್ಟು ಇಂಟ್ರೆಸ್ಟಿಂಗ್ ವಿಷಯ ತಿಳಿಯೋಕ್ಕೆ ಈ ವೀಡಿಯೋ ನೋಡಿ.