Movie News: ತೆಲುಗು ನಟರಾದ ರಾಣಾ ದಗ್ಗುಬಾಟಿ ಮತ್ತು ನಟ ವೆಂಕಟೇಶ್ ವಿರುದ್ಧ ಕೇಸ್ ದಾಖಲಾಗಿದೆ. ಕೋರ್ಟ್ ತಡೆಯಾಜ್ಞೆ ಇದ್ದರೂ ಕೂಡ, ಆದೇಶ ಮೀರಿ ಡೆಕ್ಕನ್ ಕಿಚನ್ ಹೊಟೇಲ್ ನೆಲಸಮ ಮಾಡಿದ ಕಾರಣ, ನಟರ ಮೇಲೆ ದೂರು ದಾಖಲಾಗಿದೆ.
ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಫಿಲ್ಮ್‌ಸಿಟಿಯಲ್‌ಲಿನ ಡೆಕ್ಕನ್ ಕಿಚನ್ ಹೊಟೇಲ್ ಕೋರ್ಟ್‌ನಿಂದ ತಡೆಯಾಜ್ಞೆ ನೀಡಲಾಗಿತ್ತು. ಆದರೂ ಕೂಡ ಹೊಟೇಲ್ ನೆಲಸಮ ಮಾಡಿರುವ ಕಾರಣ, ನಟ ವೆಂಕಟೇಶ್ ಎ1, ರಾಣಾ ದಗ್ಗುಬಾಟಿ ಎ2, ಅಭಿರಾಮ್ ದಗ್ಗುಬಾಟಿ ಎ3, ಸುರೇಶ್ ಬಾಬು ಎ4 ಆರೋಪಿಗಳು ಎಂದು ಎಫ್‌ಐಆರ್ ದಾಖಲಾಗಿದೆ.
ನಂದಕುಮಾರ್ ಎಂಬುವವರು ನೀಡಿರುವ ದೂರಿನ ಅನ್ವಯ ವೆಂಕಟೇಶ್, ರಾಣಾ ದಗ್ಗುಬಾಟಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಈ ಮೊದಲು ನಂದಕುಮಾರ್ ಮತ್ತು ರಾಣಾ, ವೆಂಕಟೇಶ್ ಮಧ್ಯೆ ಹೊಟೇಲ್ ಇರುವ ಜಾಗಕ್ಕಾಗಿ ಜಟಾಪಟಿ ನಡೆದಿತ್ತು. ಅದಕ್ಕಾಗಿ ನಂದಕುಮಾರ್ ದೂರು ನೀಡಿದ್ದು, ಕೋರ್ಟ್‌ನಲ್ಲಿ ವಿಚಾರಣೆ ನಡೆದು ಹೊಟೇಲ್ ನೆಲಸಮ ಮಾಡಬಾರದು ಎಂದು ತಡೆಯಾಜ್ಞೆ ನೀಡಿತ್ತು. ಆದರೂ ಕೂಡ ನಟರು ಹೊಟೇಲ್ ನೆಲಸಮ ಮಾಡಿ, ಪೇಚಿಗೆ ಸಿಲುಕಿದ್ದಾರೆ.