Movie News: ಮಲಯಾಳಂ ಚಿತ್ರರಂಗದಂತೆ ಹೇಮಾ ಸಮಿತಿ ರೀತಿಯ ಕಮಿಟಿಯೊಂದನ್ನು ಇಲ್ಲೂ ಮಾಡಬೇಕು ಎಂಬ ಆಗ್ರಹದ ಹಿನ್ನೆಲೆಯಲ್ಲಿ, ಸೋಮವಾರ ಫಿಲ್ಮ್ ಚೇಂಬರನಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಪರ-ವಿರೋಧ ಚರ್ಚೆಗಳು ನಡೆದವು. ಅಷ್ಟೇ ಅಲ್ಲ, ಕಮಿಟಿ ರಚನೆಗೆ ಕೆಲವರ ವಿರೋಧವೂ ನಡೆಯಿತು. ಫೈರ್ ಸಂಸ್ಥೆ ಮೂಲಕ ಆಗಮಿಸಿದ್ದ ನಟಿ ನೀತು ಶೆಟ್ಟಿ, ಈ ವೇಳೆ ಅಲ್ಲಿದ್ದವರ ಮೇಲೆ ಅಸಮಾಧಾನಗೊಂಡರು. ಅವರು ಅಲ್ಲಿ ಹೇಳಿಕೊಂಡಿದ್ದಿಷ್ಟು.
” ಸಭೆಯಲ್ಲಿ ನಮಗೆ ಬೆಲೆಯೇ ಇಲ್ಲ. ನಮ್ಮ ಮಾತನ್ನು ಯಾರೂ ಕೇಳುತ್ತಿಲ್ಲ. ಅದೇನೆ ಇದ್ದರೂ, ನಾವು ನಮ್ಮ ಪ್ರಯತ್ನ ಬಿಡಲ್ಲ. ಕಮಿಟಿ ಮಾಡಿದ್ರೆ ಬ್ಯುಸಿನೆಸ್ ಗೆ ಎಫೆಕ್ಟ್ ಆಗುತ್ತೆ ಅನ್ನೋ ಉತ್ತರ ವಾಣಿಜ್ಯ ಮಂಡಳಿ ನೀಡಿದೆ. ಈಗಾಗಲೇ ಸಾಕಷ್ಟು ದೂರುಗಳು ಫೈರ್ ಸಂಸ್ಥೆಗೆ ಬಂದಿವೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆಗುತ್ತಿದೆ. ನಾನು ಮಾತಾಡಲು ಹೋದರೆ, ನನ್ನ ಬಾಯಿ ಮುಚ್ಚಿಸುತ್ತಾರೆ. ಕೆಲವರಿಗೆ ಕಮಿಟಿ ಬೇಕಿದೆ, ಇನ್ನೂ ಕೆಲವರಿಗೆ ಬೇಕಿಲ್ಲ. 35ವರ್ಷದಿಂದ ಒಂದೂ ಸಿನಿಮಾ ಮಡದೇ ಇರೋ ನಿರ್ಮಾಪಕನಿಗೆ ಕಮಿಟಿ ಬೇಡ. ನಾನು ಫೈರ್ ಸಂಸ್ಥೆಯಿಂದ ಬಂದಿದ್ದೇನೆ ಅಂತಲೇ ಅವರಿಗೆ ಅಸಮಾಧಾನ. ಇದು ಕೇವಲ ಹೀರೋಯಿನ್ ಗೆ ಆಗುವ ಸಮಸ್ಯೆಯಲ್ಲ. ಎಲ್ಲರಿಗೂ ಕೂಡ ತೊಂದರೆ ಆಗ್ತಾಯಿದೆ. ಮಹಿಳಾ ಆಯೋಗದ ಅಧ್ಯಕ್ಷರು ಈಗಾಗಲೇ ಪಾಸ್ ಕಮಿಟಿ ಮಾಡುವುದಾಗಿ ಹೇಳಿದ್ದಾರೆ. ನಾನು ಅವರನ್ನ ಫಾಲೋ ಮಾಡ್ತೇನೆ. ಫೈರ್ ಸಂಸ್ಥೆ ಅಹಿಂಸಾ ಚೇತನ್ ಅವರು ನನ್ನನ್ನೇ ಇಲ್ಲಿಗೆ ಕಳಿಸಿದ್ದಾರೆ. ಪಾಶ್ ಕಮಿಟಿ ಆಗಬೇಕು ಅನ್ನೋದು ಗೆಜೆಟ್ ಅಲ್ಲೇ ಇದೆ. ಇವತ್ತಿನ ಸಭೆಯಲ್ಲಿ ಸಮಸ್ಯೆ ಕೇಳಬೇಕು ಅಂತ ಬಂದಿರೋದು ಮೇಡಮ್. ಮಾತನಾಡಲು ಅವಕಾಶ ಕೊಡಿ ಅಂತ ನೀತು ಶೆಟ್ಟಿ ಹೇಳಿದರು.
ಮೊದಲು ಇದೆಲ್ಲ ಏನು ಇಲ್ಲ ಅಂತ ಕೆಲವರು ಹೇಳಿದರು. ನನಗೆ ಆಗಿರುವ ಸಮಸ್ಯೆ ಬಗ್ಗೆ ನಾನು ಒಪೆನ್ ಆಗಿ ಮಾತನಾಡಿದ್ದೀನಿ. ನನಗೆ ಮಾತನಾಡಲು ಬಿಡುತ್ತಿಲ್ಲ. ಆದರೂ ಸಹ ಮಾತನಾಡಿದ್ದೀನಿ. ಸಾ.ರಾ. ಗೋವಿಂದ್ ಅವರು ನನ್ನನ್ನ ಹತ್ತಿಕ್ಕುವ ಕೆಲಸ ಮಾಡಿದರು. ಇಂಡಸ್ಟ್ರಿಯಲ್ಲಿ ಸಮಸ್ಯೆ ಇದೆ. ಚಿಕ್ಕ ಚಿಕ್ಕ ವಿಷಯಗಳು ಇವೆ. ಸೀನ್ ತೆಗೆಯುವಾಗ ಕೆಟ್ಟದಾಗಿ ಮಾತನಾಡ್ತಾರೆ. ಕಿರುಕುಳ ನೀಡುತ್ತಾರೆ. ಅದನ್ನು ಹೇಳಿದರೂ ಕೇಳುತ್ತಿಲ್ಲ. ನಿರ್ಮಾಪಕರು ಮಾತನಾಡೋಕೆ ಬಿಡಲಿಲ್ಲ ಇಲ್ಲಿ ಮಾತನಾಡಲು ಅವಕಾಶ ಇಲ್ಲ ಅನ್ನುವುದಾದರೆ ಸಭೆ ಯಾಕೆ ಬೇಕು. ಇಲ್ಲಿ ಮಾತನಾಡಲು ಬಿಡಲ್ಲ ಅಂದರೆ, ನಾನು ಬೇರೆ ಹತ್ರ ಹೋಗ್ತಿನಿ. ನನಗೆ ಪಾಶ್ ಬಗ್ಗೆ ನಂಬಿಕೆ ಇದೆ. ನಾನು ನನ್ನ ಸಮಸ್ಯೆ ಬಗ್ಗೆ ಹೇಳಿದರೆ ವಿರೋಧದ ಮಾತುಗಳು ಕೇಳಿಬರುತ್ತವೆ ಎನ್ನುತ್ತಾರೆ ನೀತು.