Thursday, June 19, 2025

Latest Posts

Movie News: ವಿಷ್ಣುವರ್ಧನ್ ದಿನಚರಿ ಬಹಳ ಕಟ್ಟುನಿಟ್ಟಾಗಿತ್ತು: ಹೆಚ್.ಆರ್.ಭಾರ್ಗವ್

- Advertisement -

Movie News: ನಿರ್ದೇಶಕರಾದ ಹೆಚ್.ಆರ್. ಭಾರ್ಗವ್ ಅವರು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿಮಾ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ.

ಶೂಟಿಂಗ್‌ಗೆ ಏನೇನು ಬೇಕೋ, ಅದನ್ನೆಲ್ಲ ನಾವು ಪ್ರೊಡ್ಯುಸರ್ ಬಳಿ ಮೊದಲೇ ಕೇಳುತ್ತಿದ್ದೆ. ಶೂಟಿಂಗ್ ನಡೆಯುವ ವೇಳೆ ಡಿಮ್ಯಾಂಡ್ ಇಟ್ಟ ಘಟನೆಯೇ ಇಲ್ಲ. ನಾನು ಯಾರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರಲಿಲ್ಲ. ಎಲ್ಲರಿಗೂ ಗೌರವ ನೀಡಿ, ಗೌರವ ಪಡೆಯುತ್ತಿದೆ. ಆದರೂ ನನ್ನನ್ನು ಕಂಡರೆ ಹೆದರುತ್ತಿದ್ದರು ಎಂದು ಹೆಚ್.ಆರ್.ಭಾರ್ಗವ್ ತಮ್ಮ ನಿರ್ದೇಶನದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇನ್ನು ಡಾ.ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರ ಸಿನಿಮಾವನ್ನು ಹೆಚ್ಚಾಗಿ ಡೈರೆಕ್ಟ್ ಮಾಡಿದ್ದು ಅಂದ್ರೆ, ಅದು ಇದೇ ನಿರ್ದೇಶಕರಾದ ಭಾರ್ಗವ್ ಅವರು. ಹಾಾಗಾಗಿ ರಾಜಣ್ಣ ಮತ್ತು ವರದಣ್ಣನ ಬಗ್ಗೆ ಸಿಕ್ಕಾಪಟ್ಟೆ ನೆನಪುಗಳನ್ನು ಭಾರ್ಗವ್ ಅವರು ಹಂಚಿಕೊಂಡಿದ್ದಾರೆ.

ವಿಷ್ಣುವರ್ಧನ್ ಅವರು ಅಣ್ಣಾವ್ರ ಬಲಗೈಯಂತಿದ್ದರಂತೆ. ರಾಜ್‌ಕುಮಾರ್‌ಗೆ ಕೊಡಬೇಕಾಗಿದ್ದ ಸಿನಿಮಾ ಪೇಮೆಂಟ್‌ ವಿಷ್ಣುವರ್ಧನ್ ಅವರು ತೆಗೆದುಕೊಂಡು, ಅಣ್ಣಾವ್ರ ಕೈಗೆ ಕೊಡುತ್ತಿದ್ದರಂತೆ. ಅಲ್ಲದೇ, ಅವರ ಸಿನಿಮಾದಲ್ಲಿ, ಅಣ್ಣಾವ್ರ ಬೇಕು ಬೇಡಗಳನ್ನು ವಿಷ್ಣು ವರ್ಧನ್ ಅವರೇ ನೋಡಿಕೊಳ್ಳುತ್ತಿದ್ದರಂತೆ. ಇವರ ಇನ್ನಷ್ಟು ಅನುಭವದ ಮಾತುಗಳನ್ನು ಕೇಳಲು ಈ ವೀಡಿಯೋ ನೋಡಿ.

- Advertisement -

Latest Posts

Don't Miss