Movie Review: ಆಪದ್ಭಾಂಧವನಾಗಿ ಬರುವ ‘ಭಗೀರ’ನಿಗೆ ಬಹುಪರಾಕ್ ಎಂದ ಪ್ರೇಕ್ಷಕರು

Sandalwood News: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಭಗೀರ ರಿಲೀಸ್ ಆಗಿದ್ದು, ಶ್ರೀಮುರುಳಿ ನಟನೆಗೆ ಎಲ್ಲರೂ ಬಹುಪರಾಕ್ ಎಂದಿದ್ದಾರೆ. ಡಾ.ಸೂರಿಯವರು ಈ ಸಿನಿಮಾವನ್ನು ನಿರ್ದೇಶಿಸಿದ್ದು, ಹೊಂಬಾಳೆ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ.

ಉಗ್ರಂ ಬಳಿಕ ಅದೇ ರೀತಿಯ ಕಿಕ್ ಕೊಡುವ ಮಾಸ್ ಸಿನಿಮಾ ಅಂದ್ರೆ ಅದು ಭಗೀರ. ಮೊದಲಾರ್ಧದಲ್ಲಿ ಸಖತ್ ಎಂಟರ್‌ಟೈನ್‌ಮೆಂಟ್ ಇದ್ದು, ದ್ವಿತಿಯಾರ್ಧದಲ್ಲಿ ಕಥೆಗೆ ಟ್ವಿಸ್ಟ್ ಸಿಗುತ್ತದೆ. ಶ್ರೀಮುರರುಳಿ ಈ ಸಿನಿಮಾದಲ್ಲಿ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ದಕ್ಷ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ. ಓರ್ವ ಪೊಲೀಸ್ ಅಧಿಕಾರಿ, ಮುಖವಾಡ ಧರಿಸಿ ರೌಡಿಗಳನ್ನು ಮಟ್ಟ ಹಾಕಿದ್ರೆ, ಯಾವ ರೀತಿಯ ಫಲಿತಾಂಶ ಬರುತ್ತೆ ಅನ್ನೋದೇ ಸಿನಿಮಾ ಕಥೆ.

ಈಗಾಗಲೇ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಶ್ರೀಮುರುಳಿ ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಾರಿಯೂ ಭಾವ ಶ್ರೀಮುರುಳಿಗಾಗಿ, ಬಾಮೈದ ಪ್ರಶಾಂತ್ ನೀಲ್ ಕಥೆ ಬರೆದಿದ್ದು, ಅನಗತ್ಯ ಬಿಲ್ಡಪ್ ಇಲ್ಲದ ಸಿನಿಮಾ ಇದಾಗಿದೆ.

ಇನ್ನು ಶ್ರೀಮುರುಳಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದು, ಸುಧಾರಾಣಿ, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ರಂಗಾಯಣ ರಘು, ಗರುಡ ರಾಮ್, ಪ್ರಮೋದ್ ಶೆಟ್ಟಿ ಸೇರಿ ದೊಡ್ಡ ತಾರಾಗಣವೇ ಇದೆ.

About The Author