Monday, September 9, 2024

Latest Posts

ಸಮೀಕ್ಷೆ ನೋಡಿದ್ರೆ ನನಗೆ ಅನುಮಾನ ಬರುತ್ತೆ- ಸಂಸದ ಖರ್ಗೆ

- Advertisement -

ಕಲಬುರಗಿ: ಚುನಾವಣೋತ್ತರ ಫಲಿತಾಂಶದಲ್ಲಿ ಸತ್ಯಾಂಶ ಇಲ್ಲ. ಈ ಚುನಾವಣೆ ಪೂರ್ವ ನಿಯೋಜನೆಯಂತೆ ನಡೆದಿದೆ ಅಂತ ಅನುಮಾನ ಬರುತ್ತಿದೆ ಎಂದು ಸಂಸದ ಮಲ್ಲಿಕಾರ್ಖುನ ಖರ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಚುನಾವಣಾ ವೇಳೆ ಮತ ಯಂತ್ರದಲ್ಲಿ ಗೋಲ್ ಮಾಲ್ ನಡೆದಿದೆ ಅನ್ನೋ ಅನುಮಾನ ವಿಪಕ್ಷಗಳಿಗೆ ಇತ್ತು, ಆದ್ರೆ ಇದೀಗ ಚುನಾವಣಾ ಸಮೀಕ್ಷಾ ವರದಿ ನೋಡಿದ ಮೇಲೆ ಈ ಅನುಮಾನ ದಟ್ಟವಾಗಿದ ಅಂತ ಖರ್ಗೆ ಸಂಶಯ ವ್ಯಕ್ತಪಡಿಸಿದರು.

ನಮ್ಮ ಬಳಿ ಇರೋ ಸಮೀಕ್ಷಾ ವರದಿಯೇ ಬೇರೇ. ಆದ್ರೆ ಇತರೆ ವರದಿಗಳೆಲ್ಲಾ ಬಿಜೆಪಿ ಪರ ಇದೆ.  ರಾಜ್ಯದಲ್ಲಿ ಕಾಂಗ್ರೆಸ್ ಕನಿಷ್ಠ 8-10 ಸ್ಥಾನ ಪಡೆಯಲಿದೆ. ಒಂದು ವೇಳೆ ಕಾಂಗ್ರೆಸ್ ತುಂಬಾ ಕಡಿಮೆ ಸ್ಥಾನ ಪಡೆದರೆ ಇವಿಎಂನಲ್ಲೇ ಗೋಲ್ ಮಾಲ್ ಆಗಿದೆ ಎಂದರ್ಥ ಅಂತ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ಮೊದಲಿನಿಂದಲೂ ಪದೇ ಪದೇ, ಕಾಂಗ್ರೆಸ್ 40 ದಾಟಲ್ಲ ಎನ್ನುತ್ತಿದ್ದಾರೆ. ಅವರು ಹೇಳುವುದನ್ನ ನೋಡಿದರೆ ಮತ್ತೆ ಅನುಮಾನ ಬರುತ್ತೆ. ಚುನಾವಣಾ ಆಯೋಗ ಮೋದಿ ಅಣತಿಯಂತೆ ಕೆಲಸ ಮಾಡುತ್ತೆ ಅಂತ ಖರ್ಗೆ ಹರಿಹಾಯ್ದರು.

ಹಾಗೆ ನಮ್ಮೆಲ್ಲರ ಜೀವ ಮತಯಂತ್ರದಲ್ಲಿದೆ. ಇನ್ನೊಂದು ದಿನ ಕಾದರೆ ಏನಾಗಲಿದೆ ಅಂತ ತಿಳಿಯಲಿದೆ. ಆದ್ರೆ ನಮ್ಮ ಮಾಹಿತಿ ಪ್ರಕಾರ ನನ್ನ ಗೆಲುವು ನಿಶ್ಚಿತ ಅಂತ ಸಂಸದ ಖರ್ಗೆ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಫಲಿತಾಂಶ ಬಂದಮೇಲೆ ಬಿಎಸ್ ವೈ ಗೇಮ್ ಪ್ಲ್ಯಾನ್ ಏನು? ಈ ವಿಡಿಯೋದಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

https://www.youtube.com/watch?v=SJUB3qDd_8A
- Advertisement -

Latest Posts

Don't Miss