Monday, April 14, 2025

Latest Posts

‘ಅಧರ್ಮ ಅಳಿಸಲು ಶ್ರೀಕೃಷ್ಣನ ಅವತಾರದಂತೆ ನರೇಂದ್ರ ಮೋದಿಯವರು ದೇಶದಲ್ಲಿ ಇದ್ದಾರೆ’

- Advertisement -

Kolar: ಕೋಲಾರ: ಹಿಂದೂ ಧರ್ಮದ ವಿರುದ್ಧ ಮಾತನಾಡಿದರೆ ಪಾಕಿಸ್ತಾನ ಪರ ಇರುವವರು ನಮಗೆ ಮತ ಹಾಕುತ್ತಾರೆ ಅಂತ ಕೆಲವರು ಅನ್ಕೊಂಡಿದ್ದಾರೆ. ಬಿಜೆಪಿ ಹಿಂದೂಪರ ಇದ್ದು, I.N.D.I.A ಒಕ್ಕೂಟ ಪಾಕಿಸ್ತಾನ ಪರ ಹೋಗ್ತಿದೆ ಎಂದು ಸನಾತನ ಧರ್ಮದ ಕುರಿತು ಮಾತನಾಡಿರುವ ಉದಯನಿಧಿ ಸ್ಟಾಲಿನ್ ವಿರುದ್ಧ ಸಂಸದ ಮುನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬಿಇ ಎಂಎಲ್ ನಲ್ಲಿ ನವೀಕರಿಸಿದ ರೈಲ್ವೆ ನಿಲ್ದಾಣ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತದಲ್ಲಿ 800 ವರ್ಷ ಆಳ್ವಿಕೆ ನಡೆಸಿದ ಮಹಮದ್ ಘಜ್ನಿ ಕೈಯಿಂದಲೇ ಹಿಂದೂ ಧರ್ಮ ನಾಶ ಮಾಡಲು ಆಗಲಿಲ್ಲ. ಈಗ ಹಿಂದೂ ಧರ್ಮ ಮತ್ತಷ್ಟು ಬಲಿಷ್ಠವಾಗಿದೆ. ಈಗ ಹಿಂದೂ ಧರ್ಮವನ್ನು ಶೇಕ್ ಮಾಡಲೂ ಆಗುವುದಿಲ್ಲ. ಅಧರ್ಮ ಅಳಿಸಲು ಶ್ರೀಕೃಷ್ಣನ ಅವತಾರದಂತೆ ನರೇಂದ್ರ ಮೋದಿಯವರು ದೇಶದಲ್ಲಿ ಇದ್ದಾರೆ. ಆಲಿಬಾಬಾ 40 ಕಳ್ಳರ ತಂಡದ ಇಂಡಿಯಾ ಒಕ್ಕೂಟಕ್ಕೆ ಅಂತ್ಯಕಾಲ ಹತ್ತಿರದಲ್ಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಈಗಲೇ ಬಲಿಷ್ಠವಾಗಿದ್ದಾರೆ. ಮುಂದೆಯೂ ಪ್ರಧಾನಿ ಮೋದಿ ಅವರು ಬಲಿಷ್ಠರಾದರೆ ಸನಾತನ ಧರ್ಮ ಮತ್ತು ಆರ್ ಎಸ್ ಎಸ್ ಮತ್ತಷ್ಟು ಬಲಿಷ್ಠವಾಗುತ್ತೆ ಅಂತ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಇನ್ನು ಸ್ಟಾಲಿನ್ ಅವರ ತಾಯಿ ಶಿವಭಕ್ತೆ ಆಗಿದ್ದಾರೆ ಹಾಗೆ ಅವರ ತಂದೆಯು ಸಾಯಿಬಾಬಾಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಮೊದಲು ಸ್ಟಾಲಿನ್ ಅವರು ಅವರ ತಂದೆ ತಾಯಿಯನ್ನು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು.

ಭ್ರಷ್ಟಾಚಾರವನ್ನ ಮರೆಮಾಚಲು ಇಂಡಿಯಾ ಅಂತ ಹೆಸರಿಟ್ಟುಕೊಂಡಿದ್ದಾರೆ:
ಇನ್ನು ಇದೇ ವೇಳೆ ಮಾತನಾಡಿದ ಸಂಸದರು, ರಿಪಬ್ಲಿಕ್ ಆಫ್ ‌ಭಾರತ್ ಎಂದು ಮುರು ನಾಮಕರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಮೊದಲು ಈಸ್ಟ್ ಇಂಡಿಯಾ ಕಂಪನಿ ಎಂದು ನಾಮಕರಣ ಮಾಡಿದ್ದರು. ಆದರೆ ಈಗ ಭಾರತ ಎಂದರೆ ಇಡೀ ವಿಶ್ವದಲ್ಲೇ ಗೊತ್ತು. ಭಾರತ ಎಂದರೆ ಹಿಂದೂಸ್ತಾನ. ಯುಪಿಎ ಸರ್ಕಾರವಿದ್ದಾಗ ಯುಪಿಎ 1, ಯುಪಿಎ 2 ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿದ್ದರು. ಅದನ್ನು ಮರೆಮಾಚಲು ಇಂಡಿಯಾ ಎಂದು ಹೆಸರಿಟ್ಟಿದ್ದಾರೆ. ಈ ಕಳ್ಳಕಾಕರು ಇಂಡಿಯಾ ಅಂತ ಹೆಸರಿಟ್ಟುಕೊಳ್ಳುವುದು ಬೇಡ. ಅದಕ್ಕೆ ಭಾರತ್ ಎಂದು ಹೆಸರಿಟ್ಟರೆ ಯಾರು ವಿರೋಧ ಮಾಡುವುದಿಲ್ಲ. ಇಂಡಿಯಾ ಬದಲು ಭಾರತ್ ಎಂದು ಹೆಸರಿಡಲು ಅಡ್ಡಿಯಿಲ್ಲ ಎಂದು ತಿಳಿಸಿದ್ರು. ಇಂಡಿಯಾ ಅಂತ ಯುಪಿಎ ಹೆಸರು ಇಟ್ಟುಕೊಂಡಿದ್ದಾರೆ. ಅದು ತಪ್ಪು ಅದನ್ನು ತೆಗೆದು ಹಾಕಿ ಈಸ್ಟ್ ಇಂಡಿಯಾ ಎಂದು ನಾಮಕರಣ ಮಾಡಿಕೊಂಡರೆ ಚೆನ್ನಾಗಿ ಇರುತ್ತದೆ ಎಂದರು.

Janmashtami Special: ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನೇಕೆ ನೈವೇದ್ಯ ಮಾಡುತ್ತಾರೆ..?

Janmashtami Special: ಕೃಷ್ಣ ಒಂದೇ ಜಗದ್ಗುರುಂ ಅಂತಾ ಹೇಳಲು ಕಾರಣವೇನು..?

Janmashtami Special: ಶ್ರೀಕೃಷ್ಣನನ್ನು ಗುರುವಾಯೂರಪ್ಪ ಎಂದು ಪೂಜಿಸಲು ಕಾರಣವೇನು..?

- Advertisement -

Latest Posts

Don't Miss