Sunday, May 11, 2025

Latest Posts

‘ಕಾಂಗ್ರೆಸ್ ಪಕ್ಷದವರಿಗೆ ತಾಕತ್ತಿದ್ರೆ ರಿಸರ್ವೇಷನ್, ಭಜರಂಗದಳ ಟಚ್ ಮಾಡಲಿ ನೋಡೋಣ’

- Advertisement -

ಕೋಲಾರ: ಮೀಸಲಾತಿ ರದ್ದು ಮಾಡ್ತೀವಿ ಅಂತ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ತಾಕತ್ತಿದ್ದರೆ ಮೀಸಲಾತಿ ಹಾಗೂ ಭಜರಂಗದಳವನ್ನು ಮುಟ್ಟಿ ನೋಡಲಿ. ನಮಗೆ ತಾಕತ್ತಿತ್ತು ಅದಕ್ಕೆ ಪಿಎಫ್ ಐ ಬ್ಯಾನ್ ಮಾಡಿದ್ವಿ. ನಮಗೆ ತಾಕತ್ತು ಇತ್ತು ರಾಮ ಮಂದಿರ ನಿರ್ಮಾಣ ಮಾಡಿದ್ವಿ. ನಮಗೆ ತಾಕತ್ತು ಇದ್ದಿದ್ದರಿಂದಲೇ ತ್ರಿಬಲ್ ತಲಾಕ್ ಬ್ಯಾನ್ ಮಾಡಿದ್ವಿ. ಆರ್ಟಿಕಲ್ 370ರದ್ದು ಮಾಡಿದ್ವಿ. ಕಾಂಗ್ರೆಸ್ ಪಕ್ಷದವರಿಗೆ ತಾಕತ್ತಿದ್ರೆ ರಿಸರ್ವೇಷನ್ ಟಚ್ ಮಾಡಲಿ ನೋಡೋಣ ಎಂದು ಸಂಸದ ಮುನಿಸ್ವಾಮಿ ಸವಾಲೆಸೆದರು.

ಕೋಲಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಚುನಾವಣಾ ಪ್ರಣಾಳಿಕೆ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಮುನಿಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಒಳ ಮೀಸಲಾತಿ ಮಾಡುತ್ತೇವೆಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದರು. ಆದ್ರೆ ಈವರೆಗೂ ಅದನ್ನು ಟಚ್ ಮಾಡಿಲ್ಲ. 60 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಜನ ನೋಡಿದ್ದಾರೆ. ಕಾಂಗ್ರೆಸ್ ನವರು ಹೇಳುವುದನ್ನು ಮಾಡುವುದಿಲ್ಲ ಎಂದು ಎಲ್ಲರಿಗೂ ಗೊತ್ತಿದೆ ಎಂದರು.

ಆರೋಪ ಸಾಬೀತಾದರೆ ವಾಚ್ ಮನ್ ಕೆಲಸ ಮಾಡುತ್ತೇನೆ ಅಂತ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದ್ದರು. ಎಸ್ ಎನ್ ಸಿಟಿಗಾಗಿ 17 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿದೆ. ನಮ್ಮ ಕೋಲಾರದ ಮನೆ ಬಳಿ ನಾನು ಯಾರನ್ನೂ ವಾಚ್ ಮನ್ ನೇಮಿಸಿಲ್ಲ. ಅವರು ಬರುತ್ತಾರೆಂದು ಕಾಯುತ್ತಿದ್ದೇನೆ ಎಂದರು. ನಾನು ಎಸ್ ಮುನಿಸ್ವಾಮಿ ಎಸ್ ಅಂದ್ರೆ ನಮ್ಮ ತಂದೆ ಸಾದಪ್ಪ. ಆದ್ರೆ ಬಂಗಾರಪೇಟೆ ಶಾಸಕರಿಗೆ ಎರಡು ಇನ್ಷಿಯಲ್ ಇದೆ‌. ಒಂದು ಕೆ.ಎನ್. ನಾರಾಯಣಸ್ವಾಮಿ ಮತ್ತೊಂದು ಎಸ್.ಎನ್. ನಾರಾಯಣಸ್ವಾಮಿ. ಹಾಗಾದ್ರೆ ಕೆಎನ್ ಅಂದ್ರೆ ಏನು? ಎಸ್ ಎನ್ ಅಂದ್ರೆ ಏನು? ಎಂದು ಸಂಸದ ಮುನಿಸ್ವಾಮಿ ಪ್ರಶ್ನಿಸಿದರು.

ಇನ್ನು ಕಾಂಗ್ರೆಸ್ ಅಭ್ಯರ್ಥಿಗಳಾದ ನಂಜೇಗೌಡ, ಎಸ್.ಎನ್. ನಾರಾಯಣಸ್ವಾಮಿ, ರೂಪಕಲಾ ಅವರ ವಿಚಾರದಲ್ಲಿ ನಾನು ಮಾಡಿರುವ ಆರೋಪಗಳು ನನ್ನ ವೈಯಕ್ತಿಕ ಅಲ್ಲ. ಅವರ ಕ್ಷೇತ್ರದಲ್ಲಿ ಸ್ಥಳೀಯರು ಮಾಡಿರುವ ಆರೋಪಗಳನ್ನೇ ನಾನು ಹೇಳಿದ್ದೇನೆ.

ಈ ಬಾರಿ ಹಣಬಲ, ತೋಳ್ಬಲದಿಂದ ಚುನಾವಣೆ ನಡೆಯುತ್ತಿದೆ. 60 ವರ್ಷಗಳಿಂದ ಕೇಂದ್ರ ಸರ್ಕಾರದ ಹಣವನ್ನು ತಿಂದಿರುವುದರಿಂದ ಕಾಂಗ್ರೆಸ್ ಪಕ್ಷದವರ ಬಳಿ ಹೆಚ್ಚು ಹಣ ಇದೆ. ನಾಲ್ಕು ತಲೆಮಾರುಗಳಿಗಾಗುವಷ್ಟು ಹಣ ಮಾಡಿಕೊಂಡಿದ್ದೇವೆ ಎಂದು ರಮೇಶ್ ಕುಮಾರ್ ಅವರೇ ಹೇಳಿದ್ದಾರೆ. ನಾವು ಸುಳ್ಳು ಹೇಳಿ ಮತ ಕೇಳುವ ಅಭ್ಯಾಸ ಇಲ್ಲ. ಪ್ರಧಾನಿ ಮೋದಿ ಅವರು ಮಾಡಿರುವ ಕೆಲಸಗಳನ್ನ ಹೇಳಿ ಮತಗಳನ್ನು ಕೇಳುತ್ತಿದ್ದೇವೆ ಎಂದರು.

- Advertisement -

Latest Posts

Don't Miss