Thursday, November 7, 2024

Latest Posts

‘ಗ್ಯಾರಂಟಿ ಹೆಸರಲ್ಲಿ ಮಂಕುಬೂದಿ ಎರಚಿದ್ದಾರೆ: ಸಾಲ ಮನ್ನಾ ವಿಚಾರದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ’

- Advertisement -

Kolar News: ಕೋಲಾರ: ಇಂದು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕೋಲಾರದ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಪಂಚಾಯತ್ ವತಿಯಿಂದ ಆಯೋಜನೆ ಮಾಡಲಾಗಿತ್ತು. ಕೋಲಾರ ಸಂಸದ ಎಸ್ ಮುನಿಸ್ವಾಮಿ ನೇತೃತ್ವದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಮಾಡಲಾಯಿತು.

ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರು:

ಜಿಲ್ಲಾಡಳಿತ ವತಿಯಿಂದ ಆಯೋಜನೆ ಮಾಡಿದ್ದ ಯೋದ ದಿನಾಚರಣೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳೇ ಗೈರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ಕೊತ್ತೂರು ಮಂಜುನಾಥ್, ಪರಿಷತ್ ಸದಸ್ಯರಾದ ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ, ಎಸ್ ಪಿ  ನಾರಾಯಣ್ ಸೇರಿದಂತೆ ಬಹುತೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರಾಗಿದ್ದರು. ಕಳೆದ ಬಾರಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಕೋಲಾರದಲ್ಲಿ ನಡೆದ ಯೋಗ ದಿನಾಚರಣೆ ಕಳೆಗುಂದಿತ್ತು.

ಕಾಂಗ್ರೆಸ್ ನವರಿಂದ ಯೋಗ ದಿನಾಚರಣೆಯಲ್ಲೂ ದ್ವೇಷದ ರಾಜಕಾರಣ:

ವಿದ್ಯಾರ್ಥಿಗಳ ಜೊತೆ ಯೋಗಾಭ್ಯಾಸ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ, ಕಳೆದ ವರ್ಷಕ್ಕಿಂತ ಈ ಬಾರಿ ಬಹಳ ವಿಜೃಂಭಣೆಯಿಂದ ಮಾಡುವ ಉದ್ದೇಶವಿತ್ತು. ಬಿಜೆಪಿ ಸರ್ಕಾರ ಇದ್ದಾಗ ಪ್ರೋತ್ಸಾಹ ಸಿಕ್ಕಿತ್ತು, ಆದ್ರೆ ಕಾಂಗ್ರೆಸ್ ಸರ್ಕಾರ ಬಂದಾಗ ಯಾವುದೇ ಪ್ರೋತ್ಸಾಹ ಸಿಕ್ಕಿಲ್ಲ. ಉಸ್ತುವಾರಿ ಸಚಿವರು ನಿಗದಿ ಮಾಡಿದ ಸ್ಥಳದಲ್ಲೇ ಯೋಗಾಭ್ಯಾಸ ಮಾಡಿದ್ವಿ. ಆದ್ರೆ ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ಕಾಂಗ್ರೆಸ್ ಪಕ್ಷದಿಂದ ಯಾರೂ ಬಂದಿಲ್ಲ. ಗೈರು ಹಾಜರಿ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಗ್ಯಾರಂಟಿ ಹೆಸರಲ್ಲಿ ಜನರಿಗೆ ಮಂಕುಬೂದಿ ಎರಚಿದ್ದಾರೆ:

ಕಾಂಗ್ರೆಸ್ ಗೆದ್ದಿರುವ 135 ಸೀಟುಗಳ ಮೇಲೆ ನನಗೆ ಸಂಶಯ ಬರ್ತಿದೆ. ಕಾಂಗ್ರೆಸ್ ನವರಿಗೆ ಯೋಗ್ಯತೆ ಇದ್ದರೆ ಚುನಾವಣೆಗೂ ಮುನ್ನ ಘೋಷಿಸಿದಂತೆ 10 ಕೆಜಿ ಅಕ್ಕಿ ಫ್ರೀ ಕೊಡಲು. ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿ. ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳನ್ನು ಹಾಕುವುದು ನೋಡಿದ್ರೆ ಜನರನ್ನ ಯಾಮಾರಿಸಿ ಮಂಕುಬೂದಿ ಎರಚಿದ್ದಾರೆ ಎಂದು ಕಿಡಿಕಾರಿದರು. ಬೇರೆ ಬೇರೆ ರಾಜ್ಯಗಳಿಂದ ಖರೀದಿಸಿ ಅಕ್ಕಿ ಕೊಡಲಿ, ಇಲ್ಲದಿದ್ದರೆ ಜನರ ಅಕೌಂಟ್ ಗೆ ಹಣ ಹಾಕಲಿ. ಹಿಂದೆ ಹೇಗೆ ಬ್ರಿಟಿಷರು ಒಡೆದು ಹಾಳುವ ನೀತಿ ಮಾಡುತ್ತಿದ್ದರೋ ಹಾಗೇ ಕಾಂಗ್ರೆಸ್ ಪಕ್ಷದವರೂ ಸಹ ಅತ್ತೆ ಸೊಸೆ ನಡುವೆ ಜಗಳ ತಂದಿಟ್ಟಿದ್ದಾರೆ.

ಸಾಲ ಮನ್ನಾ ವಿಚಾರದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ:

ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರೇ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದ್ರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಎಂಎಲ್ ಸಿ ಅನಿಲ್ ಕುಮಾರ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಬೇನಾಮಿ ಅಕೌಂಟ್ ಗಳನ್ನು ಸೃಷ್ಟಿ ಮಾಡಿ ನೂರಾರು ಕೋಟಿ ಹಗರಣಗಳು ನಡೆದಿವೆ.‌ ಸಾವಿರಾರು ನಕಲಿ ಸಂಘಗಳ ಹೆಸರಲ್ಲಿ ಲೋನ್ ತೆಗೆದುಕೊಂಡಿದ್ದಾರೆ. ಈಗ ಕಾಂಗ್ರೆಸ್ ನವರೇ ಮಹಿಳೆಯರ ಕೈಯಲ್ಲಿ ಸಾಲ ಮನ್ನಾ ಮಾಡುವಂತೆ ಒತ್ತಡ ಹಾಕಿಸುತ್ತಿದ್ದಾರೆ. ಬರುವ ಹಣವನ್ನು ಹಂಚಿಕೊಳ್ಳಲು ಅನಿಲ್ ಕುಮಾರ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

“ಕೊರಗಜ್ಜ” ಚಿತ್ರಕ್ಕೆ 3ನೇ ಬಾರಿ ಕ್ಲೈಮ್ಯಾಕ್ಸ್ ರೀ ಶೂಟ್: ಹಾಲಿವುಡ್ ತಂತ್ರಜ್ಞರಿಂದ ಗ್ರಾಫಿಕ್ಸ್ ಟಚ್

ಯೋಗದಿಂದ ರೋಗ ದೂರ: ವಿಶ್ವ ಯೋಗದಿನಕ್ಕೆ ಕೇಂದ್ರ ಸಚಿವ ಜೋಶಿ ಚಾಲನೆ

ಕೆರೆಗೆ ಬಿದ್ದು ಮಹಿಳೆಯ ಆತ್ಮಹತ್ಯೆ: ಶಿರಗುಪ್ಪಿ ಕೆರೆಯಲ್ಲಿ ಘಟನೆ

- Advertisement -

Latest Posts

Don't Miss