Friday, November 22, 2024

Latest Posts

ಸಚಿವ ಅಶ್ವಥ್ ನಾರಾಯಣರನ್ನು ಹಾಡಿ ಹೊಗಳಿದ ಸಂಸದ ಪ್ರತಾಪ್ ಸಿಂಹ..

- Advertisement -

ಮೈಸೂರು: ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಹಿನ್ನೆಲೆ‌. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿರುವ ಶ್ರೀ ಪುರುಷಾ ಸಮಾಧಿಯಲ್ಲಿ ಮೃತ್ತಿಕೆ ಸಂಗ್ರಹ ಮಾಡಲಾಯಿತು.  ಸಚಿವ ಡಾ.ಅಶ್ವಥ್ ನಾರಾಯಣ್ ಹಾಗೂ ಸಂಸದ ಪ್ರತಾಪ್ ಸಿಂಹ, ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೆಗೌಡ ಹಾಗೂ ಇತರರು ಮೃತ್ತಿಕೆ ಸಂಗ್ರಹ ಮಾಡಿದರು.

ಈ ವೇಳೆ ಮಾತನಾಡಿದ ಸಚಿವ ಡಾ. ಅಶ್ವಥ್ ನಾರಾಯಣ್, ಗಂಗರ ರಾಜವಂಶದ ರಾಜನಾಗಿದ್ದ ಶ್ರೀಪುರುಷ. ಶ್ರೀಪುರುಷ ವೀರಸಮಾಧಿಯಲ್ಲಿ ಆಶಿರ್ವಾದ ಪಡೆದಿದ್ದೇವೆ. ಶ್ರೀಪುರುಷನ ಆಶಿರ್ವಾದ ಪಡೆದು ನಾಡನ್ನು ಉತ್ತಮವಾಗಿ ಕಟ್ಟಲು ಅಶಿರ್ವಾದ ಪಡೆದಿದ್ದೇವೆ. ರಾಜ್ಯ ಪುಣ್ಯಕ್ಷೇತ್ರದಲ್ಲಿ ಮೃತ್ತಿಕೆ ಸಂಗ್ರಹ ಮಾಡುತ್ತಿದ್ದೇವೆ. ಇಂದು ರಾಜ್ಯೋತ್ಸವದಿನದಂದು ಇಲ್ಲಿ ಸಂಗ್ರಹ ಮಾಡಿದ್ದೇವೆ ಎಂದರು‌.

‘ಅಪ್ಪಿ ತಪ್ಪಿಯೂ ಭವಾನಿ ರೇವಣ್ಣ ಮನೆ ಹತ್ರ ಸರ್ಕಾರಿ ನೌಕರರು ಹೋಗ್ಬೇಡಿ’

ಇನ್ನು ಇದೇ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಅಶ್ವಥ್ ನಾರಾಯಣ್‌ರನ್ನು ಹೊಗಳಿದ್ದಾರೆ.  ಜಗತ್ತಿನ ಎಲ್ಲಾ ವಿಮಾನ ನಿಲ್ದಾಣಗಳಿಗೆ ಕೇವಲ ಹೆಸರಿಡುತ್ತಾರೆ. ಬೆಂಗಳೂರಿನ ವಿಮಾನ ನಿಲ್ದಾಣದ ಪಕ್ಕದಲ್ಲಿ ಕೆಂಪೆಗೌಡರ ಬೃಹತ್ ಪ್ರತಿಮೆ‌ ನಿರ್ಮಾಣವಾಗಿದೆ. ಇದರ ಕಲ್ಪನೆ ಕೊಟ್ಟಿದ್ದು ಸಚಿವರಾದ ಡಾ.ಅಶ್ವಥ್ ನಾರಾಯಣ್ ಅವರು. ಪ್ರತಿಮೆ ನಿರ್ಮಾಣದ ಜವಾಬ್ದಾರಿಯನ್ನ ಸಚಿವ ಅಶ್ವಥ್ ನಾರಾಯಣ್ ಗೌಡ ಹೊತ್ತಿದ್ದಾರೆ‌. ಪ್ರತಿಮೆ ನಿರ್ಮಾಣದ ಹಿಂದೆ ಅಶ್ವಥ್ ನಾರಾಯಣ್ ಹಾಗೂ ಯಡಿಯೂರಪ್ಪರ ಹೆಸರು ಶಾಶ್ವತವಾಗಿ ಇರಲಿದೆ‌ ಎಂದು ಪ್ರತಾಪ್ ಸಿಂಹ ಹೇಳಿದರು.

- Advertisement -

Latest Posts

Don't Miss