ಬೆಂಗಳೂರು: ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ಸಿಗರ ವಿರುದ್ಧ ವಾಗ್ದಾಳಿ ಮಾಡಿದ್ದು, ರಾಜ್ಯದ ಜನರು ಮೈಮರೆತರೆ, ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರ ರಚನೆಯಾಗತ್ತೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಭಜರಂಗದಳ ನಿಷೇಧ ಮಾಡಲಾಗತ್ತೆ ಎಂಬ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ನಾನೂ ಕೂಡ ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ಕೂಲಂಕುಶವಾಗಿ ನೋಡಿದೆ. ಅದನ್ನು ನೋಡಿದ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ನಮಗೆ ಯಾವ ಸ್ಥಿತಿ ಬರಲಿದೆ ಅಂತಾ, ಕರ್ನಾಟಕದ ಜನತೆಗೂ ಗೊತ್ತಾಗಿದೆ. ನನಗೂ ಗೊತ್ತಾಗಿದೆ. ಶಿವನ ಬೆಟ್ಟವನ್ನ ಏಸು ಬೆಟ್ಟವಾಗಿ ಪರಿವರ್ತನೆ ಮಾಡಿದಂಥ ಡಿ.ಕೆ.ಶಿವಕುಮಾರ್, ಹನುಮಂತನ ಜನ್ಮದಿನವನ್ನ ಪ್ರಶ್ನೆ ಮಾಡುವಂಥ ಸಿದ್ದರಾಮಯ್ಯನವರಿಂದ, ಇವರಿಬ್ಬರಿರುವ ಕಾಂಗ್ರೆಸ್ಸಿನಿಂದ ಇನ್ನೇನನ್ನು ನಿರೀಕ್ಷೆ ಮಾಡಲಿಕ್ಕೆ ಸಾಧ್ಯ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಸ್ವಾಮಿ ಸಿದ್ದರಾಮಯ್ಯನವರೇ, ಡಿ.ಕೆ.ಶಿವಕುಮಾರ್ ಅವರೇ, ಭಜರಂಗಿಯ ಬಗ್ಗೆ ಮಾತನಾಡುವ ನಿಮ್ಮ ನವರಂಗಿ ಆಟಗಳ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತು. ಒಂದು ವೇಳೆ ಕರ್ನಾಟಕದ ಜನ ಮೈಮರೆತರೆ, ನಿಮ್ಮ ಪ್ರಣಾಳಿಕೆಯಲ್ಲಿ ಬರುವ ಗ್ಯಾರಂಟಿಗಳ ಜೊತೆಗೆ, ಕರ್ನಾಟಕಕ್ಕೆ ಸಿಗುವ ಗ್ಯಾರಂಟಿ ಏನಂದ್ರೆ, ಕರ್ನಾಟಕದಲ್ಲಿ ಸ್ಥಾಪನೆಯಾಗುವಂಥದ್ದು, ವಸಾಮಾ ಬಿನ್ ಲಾಡೆನ್, ಮುಲ್ಲಾ ಉಮರ್ ನೇತೃತ್ವದ ತಾಲಿಬಾನಿ ಸರ್ಕಾರ. ಎರಡನೇಯ ಗ್ಯಾರಂಟಿ ಅಂದ್ರೆ, ಹಿಂದೂಗಳಿಗಿರುವ ರಿಸರ್ವೇಷನ್‌ನನ್ನು ಸಾಬರಿಗೆ ಕೊಡ್ತಾರೆ. ಮೂರನೇಯ ಗ್ಯಾರಂಟಿ ಅಂದ್ರೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡ್ತೀವಿ ಎಂದು ಹೇಳಿದ್ದೀರಿ. ಅಂದ್ರೆ ಗಝನಿ ಮಹಮ್ಮದ್, ಗೋರಿ ಮಹಮ್ಮದ್, ಟಿಪ್ಪುಸುಲ್ತಾನ್ ಅವರನ್ನ ವೈಭವೀಕರಣ ಮಾಡುವ ಪಠ್ಯ ಪುಸ್ತಕ ತರುತ್ತೀರಿ ಎಂದು ಪ್ರತಾಪ್ ವಾಗ್ದಾಳಿ ಮಾಡಿದ್ದಾರೆ.
ಇನ್ನು ಪಿಎಫ್ಐ ಬ್ಯಾನ್ ಮಾಡುತ್ತೇವೆ ಎಂದು ಹೇಳಿದ್ದೀರಿ. ನಾವು ಅದಾಗಲೇ ಪಿಎಫ್‌ಐ ಬ್ಯಾನ್ ಮಾಡಿಯಾಗಿದೆ. ಸತ್ತವನನ್ನ ಇನ್ನೇನು ಹೊಡಿಯಕ್ಕಾಗತ್ತೆ..? ಪಿಎಫ್ಐ ಬ್ಯಾನ್ ಮಾಡುತ್ತೇವೆ ಅಂತಾ ಹೇಳಿ, ಭಜರಂಗ ದಳವನ್ನ ಬ್ಯಾನ ಮಾಡಲು ಹೊರಟಿದ್ದೀರಿ ಎಂದು ಕಾಂಗ್ರೆಸ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
‘ಕಷ್ಟ ಬಂದಾಗ ಮೋದಿ ಕರ್ನಾಟಕಕ್ಕೆ ಬರಲ್ಲ, ಚುನಾವಣೆ ಬಂದಾಗ ಬರುತಾರೆ, ಕೈ ಬೀಸಿ ಹೋಗುತ್ತಾರೆ’
‘ಅಯೋಧ್ಯೆಯಲ್ಲಿ ರಾಮ ಮಂದಿರ, ಅಂಜನಾದ್ರಿಯಲ್ಲಿ ಹನುಮ ಮಂದಿರ ನಿರ್ಮಾಣ ನಮ್ಮ ಧ್ಯೇಯ’