Sunday, December 22, 2024

Latest Posts

ಹಿಂದೂ, ಮುಸಲ್ಮಾನ್ ‌ಮುಖಂಡರನ್ನ ಒಟ್ಟಿಗೆ ಸಭೆ ಕರೆದು ಮಾತನಾಡಿದ ಪ್ರೀತಂ ಆಡಿಯೋ ವೈರಲ್..

- Advertisement -

ಹಾಸನ: ಹಾಸನ‌ ಶಾಸಕ‌ ಪ್ರೀತಂಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಇದರಲ್ಲಿ ಪ್ರೀತಂ ತಮ್ಮ ಕಾರ್ಯಕರ್ತರ ಜೊತೆ ಮಾತನಾಡಿದ್ದಾರೆ. ಹಿಂದೂ, ಮುಸಲ್ಮಾನ್ ‌ಮುಖಂಡರನ್ನ ಒಟ್ಟಿಗೆ ಸಭೆ ಕರೆದು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದ್ದು,  ಯಾವ ವಾರ್ಡಲ್ಲಿ ಎಷ್ಟೆಷ್ಟು ಓಟ್ ಬರುತ್ತವೆ ಎಂಬ ಬಗ್ಗೆ ಪ್ರೀತಂ ಮಾಹಿತಿ ಪಡೆದಿದ್ದಾರಂತೆ.

ಪ್ರೀತಂಗೌಡ: ಚಿಕ್ಕನಾಳು ಬೂತಲ್ಲಿ ಎಷ್ಟು ಮತ ಬರುತ್ತಪ್ಪಾ..?

ಕಾರ್ಯಕರ್ತ: 450ಮತಗಳ ಇದೆ‌ ಅಣ್ಣ 250 ರಿಂದ 300 ಓಟ್ ಬರುತ್ತೆ.

ಪ್ರೀತಂಗೌಡ: ಹಂಗಾದ್ರೆ ಜೆಡಿಎಸ್ ಕಾಂಗ್ರೆಸ್ ಗೆ 50, 50 ಓಟ್ ಬರುತ್ತಾ..?

ಕಾರ್ಯಕರ್ತ: ಹೌದು ಅಣ್ಣ.

ಪ್ರೀತಂಗೌಡ: ಹಿಂದೂಸ್ ಓಟಿದೆ ಎಲ್ಲಾ ನಮಗೆ ಹಾಕ್ತಾರೆ ಅಂತ‌ ಬರ್ಕೊಂಡ್ರೆ ಅವರಿಗಿಂತ ‌ಕೆಟ್ಟ ಲೆಕ್ಕ‌ ನಿಮ್ಮದಾಗುತ್ತೆ. ನಾನು ನಿಮಗೆ ಮಾತ್ರ ಹೇಳ್ತಿಲ್ಲ ಅವರಿಗೂ(ಮುಸ್ಲಿಂ) ಹೇಳ್ತಿದ್ದೀನಿ‌ ನ್ಯಾಯ ಯಾರಿಗಾದ್ರೂ ನ್ಯಾಯಾನೆ. ಹಿಂದೂ ಆದ ಕೂಡಲೇ ಬಿಜೆಪಿಗೆ ಎಲ್ಲಾ ಹಾಕ್ತಾರೆ ಅನ್ನೋದನ್ನ ಕನಸಲ್ಲು ಯೋಚನೆ ಮಾಡಲ್ಲ. ಓಟು ಇಂಪ್ರುವೈಸ್ ಹೇಗೆ ಮಾಡ್ಬೇಕು ಪ್ಲಾನ್ ಮಾಡಿ. ಮ್ಯಾಕ್ಸಿಮಮ್ ನಾವು ಏನ್ ಮಾಡಬೇಕು ಅದನ್ನ ಮಾಡಬೇಕು. ಮುಸಲ್ಮಾನರ ಎದುರೇ ಹೇಳುತ್ತಿದ್ದೇನೆ ಏನ್ ಬೇಜಾರ್ ಮಾಡ್ಕೊಳಂಗಿಲ್ಲ.

ಎಲ್ಲಾ ಮುಸಲ್ಮಾನರೂ ಬಿಜೆಪಿ ವಿರುದ್ಧವಾಗಿ ಒಂದ್ ಸೈಡ್ ಮಾಡೋಣ ಅಂತಾ ಹೋಗ್ತಿದ್ದಾರೆ. ನಮಗೇನ್ ಬಂದಿದೆ‌ ನೀವ್ ಯಾಕೆ ದಳಕ್ಕೆ‌ ಹಾಕ್ತೀರಾ ಅಂತ‌ ಹೇಳ್ಬೇಕು..? ಜೆಡಿಎಸ್‌ನವರು ಹೇಳೋದು ಹಂಗೇ ತಾನೆ..? ಅವರ(ಮುಸ್ಲಿಂ) ಮುಂದೇನೆ ಹೇಳ್ತಿದ್ದೀನಿ ಹಂಗೆ ಹೇಳಿ ನೀವು. ನಮಗೆ ಓಟ್ ಬೇಕು ಫೈನಲ್ ಆಗಿ ಅಷ್ಟೇ. ಇಲ್ಲಿ ಸೇರಿರೋರೆಲ್ಲಾ ನಮ್ಮ ಹಿತೈಷಿಗಳೇ ತಾನೆ..? ಕ್ಯಾ ಸಾಲಾಬ್ ಬೈ..? ಅದಕ್ಕೆ ನೀವೇನ್ ಮಾಡಬೇಕು ಅದನ್ನ ಮಾಡಿ .

ನಮ್ ತಲೇಲಿ‌ ಒಂದೇನೇನೆ ಪ್ರೀತಂ ಅಣ್ಣ ಗೆಲ್ಲಬೇಕು. ನಮಗೆ ಹಿಂದೂಗಳೂ ಅಣ್ಣ ತಮ್ಮಂದಿರೇ, ಮುಸ್ಲಿಂರು ಅಣ್ಣ ತಮ್ಮಂದಿರೇ. ನಾನು ಯಾವತ್ತೂ ಜೀವನದಲ್ಲಿ ಬೇಧ ಭಾವ ಮಾಡಿಲ್ಲ ಮಾಡದು ಇಲ್ಲ. ಹಿಂದೆ ಮುಂದೆ ಮಾತಾಡ್ದೆ ಇರೋದಕ್ಕೇ ಇಬ್ಬರನ್ನು(ಹಿಂದೂ ಮುಸ್ಲಿಂ) ಒಟ್ಟಿಗೆ ಕೂರಿಸಿ ಮಾತನಾಡುತ್ತಿದ್ದೇನೆ. ಸಪರೇಟಾಗಿ ಮುಸಲ್ಮಾನ್ ಬೈ ಆವೋ ಅಂತಾ ಕೂರಿಸಿ, ನಂತರ ಹಿಂದೂಗಳ ಹತ್ರ ಮಾತನಾಡೋ ಅವಶ್ಯಕತೆ ಇಲ್ಲ.

ಇದೆಲ್ಲದಕ್ಕೂ ಮಂಚೆ ಹೇಳ್ತೀನಿ ಈ ಸೋ ಕಾಲ್ಡ್‌ ಲೀಡರ್ಸ್ ಯಾರಿದ್ದಾರೆ. ಯಾವ ಮುಸಲ್ಮಾನ್ ಲೀಡರ್ಸ್ ನಮ್ಮ ಜೊತೆ ಇದ್ದಾರೆ . ಅವರಿಗೆ ತಮ್ಮ ಹೆಂಡತೀರ ಓಟು ಹಾಕಿಸೋದಕ್ಕೂ ಆಗೋದಿಲ್ಲ. ಪ್ರೀತಂ ಮುಂದೆ ಬಂದು ಫೋಸ್ ಕೊಡ್ತವ್ನೆ ಅವರಿಗೆ ಶಕ್ತಿ ಇಲ್ಲ. ಅವರ ಹೆಂಡ್ತೀರ ಓಟ್ ಫಸ್ಟ್ ಹಾಕಿಸ್ಲಿ . ಆಮೇಲೆ ಬಿಜೆಪಿಗೆ ಹತ್ತು ಇಪ್ಪತ್ತು ಓಟ್ವ ಹಾಕುಸ್ಲಿ ಅಂತಾ ಸ್ವಪ್ನ ಕಟ್ಟೆ ಹತ್ರ ಮಾತಾಡ್ತಿದ್ದಾರೆ ಎಂದು ಪ್ರೀತಂ ಆಡಿಯೋದಲ್ಲಿ ಮಾತನಾಡಿದ್ದಾರೆ.

ಡಿಕೆಶಿ ಹೆಲಿಕಾಪ್ಟರ್’ಗೆ ಹದ್ದು ಡಿಕ್ಕಿ: ಪ್ರಾಣಾಪಾಯದಿಂದ ಪಾರು

‘ನಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ. ನಿಮ್ಮ ಆಶೀರ್ವಾದ ಸದಾ ಇರಲಿ’

‘ಹೆಬ್ಬಾಳದಲ್ಲಿ ಬಿಜೆಪಿ ಬೆಂಬಲಿಸಿ: ದೌರ್ಜನ್ಯ ಮಾಡುವ ಶಾಸಕರನ್ನು ಸೋಲಿಸಿ’

 

- Advertisement -

Latest Posts

Don't Miss