Sunday, December 22, 2024

Latest Posts

‘ಭಜರಂಗದಳ, ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದೀರಿ. ನಿಮ್ಮ ವಿನಾಶ ಕಾದಿದೆ. ‘

- Advertisement -

ಬೆಂಗಳೂರು: ಭಜರಂಗದಳ, ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದೀರಿ. ನಿಮ್ಮ ವಿನಾಶ ಕಾದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇದರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಭಜರಂಗದಳ ಮತ್ತು ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಂಸದೆ ಶೋಭಾ ಕರಂದ್ಲಾಜೆ, ಆರ್‌ಎಸ್ಎಸ್ನ ಒಂದು ಭಾಗ ಅಂದ್ರೆ ಅದು ಬಿಜೆಪಿ. ಇನ್ನೊಂದು ಭಾಗ ಅಂದ್ರೆ ಅದು ಭಜರಂಗದಳ. ಯುವಕರೆಲ್ಲ ಸೇರಿ, ದೇಶಭಕ್ತರನ್ನ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಭಜರಂಗದಳದವರು ದೇಶಭಕ್ತಿಯ ಕೆಲಸ ಮಾಡುವವರು.

ನೀವು ಕಾಂಗ್ರೆಸ್ಸಿಗರು ಭಜರಂಗದಳ ಮತ್ತು ಪಿಎಫ್ಐಯನ್ನ ಒಂದೇ ತಕ್ಕಡಿಯಲ್ಲಿಟ್ಟಿದ್ದೀರಿ. ಅಂದ್ರೆ ನಿಮ್ಮ ಉದ್ದೇಶ ಏನಿದೆ. ಒಂದು ದೇಶ ದ್ರೋಹಿ ಸಂಘಟನೆ. ಹಿಂದೂ ಯುವಕರ ಹತ್ಯೆಗೆ ಕಾರಣವಾದಂಥ ಸಂಘಟನೆ. ಬಾಂಬ್ ಬ್ಲಾಸ್ಟ್ ಮಾಡುವಂಥ ಸಂಘಟನೆ. ಹಿಂದೂ ಯುವತಿಯರನ್ನ ಲವ್ ಜಿಹಾದ್‌ ಹೆಸರಲ್ಲಿ ಮತಪರಿವರ್ತನೆ ಮಾಡುವಂಥ ಸಂಘಟನೆ.  ಇಂಥ ಸಂಘಟನೆಯ ಜೊತೆ, ದೇಶ ಭಕ್ತಿಯಿಂದ ಕೂಡಿರುವಂಥ. ದೇಶಕ್ಕಾಗಿ ಹೋರಾಡುತ್ತಿರುವಂಥ, ಭಜರಂಗದಳವನ್ನ ನೀವು ಹೋಲಿಕೆ ಮಾಡಿದ್ದೀರಿ. ಮತ್ತು ನಿಷೇಧದ ಮಾತನಾಡಿದ್ದೀರಿ. ನಿಮ್ಮ ವಿನಾಶ ಕಾದಿದೆ. ಭಜರಂಗದಳವನ್ನ ನಿಷೇಧ ಮಾಡಿ, ನಿಮ್ಮ ತಾಕತ್‌ನ್ನ ತೋರಿಸಿ.

ಡಿಕೆಶಿ ಹೆಲಿಕಾಪ್ಟರ್’ಗೆ ಹದ್ದು ಡಿಕ್ಕಿ: ಪ್ರಾಣಾಪಾಯದಿಂದ ಪಾರು

‘ನಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ. ನಿಮ್ಮ ಆಶೀರ್ವಾದ ಸದಾ ಇರಲಿ’

‘ಹೆಬ್ಬಾಳದಲ್ಲಿ ಬಿಜೆಪಿ ಬೆಂಬಲಿಸಿ: ದೌರ್ಜನ್ಯ ಮಾಡುವ ಶಾಸಕರನ್ನು ಸೋಲಿಸಿ’

- Advertisement -

Latest Posts

Don't Miss