Sunday, March 3, 2024

Latest Posts

‘ಕಾಂಗ್ರೆಸ್ ಜೊತೆ ಸೇರಿ ಸ್ಪೀಕರ್ ಪ್ರಜಾಪ್ರಭುತ್ವ ಹೊಸಕಿಹಾಕುತ್ತಿದ್ದಾರೆ’- ಸಂಸದೆ ಶೋಭಾ ಕರಂದ್ಲಾಜೆ ಕಿಡಿ

- Advertisement -

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳ ವಿಚಾರವಾಗಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಹಾಗೂ ವಿಧಾನಸಭಾ ಸ್ಪೀಕರ್ ವಿರುದ್ಧ ಕಿಡಿ ಕಾರಿದ್ದಾರೆ.

13 ಶಾಸಕರ ರಾಜೀನಾಮೆ ಪತ್ರಗಳ ಪೈಕಿ 8 ಮಂದಿಯ ರಾಜೀನಾಮೆ ಕ್ರಮಬದ್ಧವಾಗಿಲ್ಲವೆಂದಿರೋ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಮೇಲೆ ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರೋ ಶೋಭಾ- ‘ಜನರಿಂದ ಆಯ್ಕೆಯಾಗಿರೋ ಶಾಸಕರೇ ಕುಮಾರಸ್ವಾಮಿ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡು ರಾಜೀನಾಮೆ ನೀಡಿರೋದಾಗಿ ಒಪ್ಪಿಕೊಂಡಿದ್ದಾರೆ. ಆದ್ರೆ ಇದರ ಹೊರತಾಗಿಯೂ ಕಾಂಗ್ರೆಸ್ ಹಾಗೂ ಸ್ಪೀಕರ್ ರಮೇಶ್ ಕುಮಾರ್ ತಮ್ಮ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ, ಶಾಸಕರ ಹಕ್ಕುಗಳನ್ನು ಕಸಿದುಕೊಳ್ಳೋ ಮೂಲಕ ಪ್ರಜಾಪ್ರಭುತ್ವವನ್ನು ಅಕ್ಷರಶಃ ಹೊಸಕಿಹಾಕುತ್ತಿದ್ದಾರೆ’ ಅಂತ ಹೇಳಿದ್ದಾರೆ.

ಕೈ ಚೆಲ್ಲಿತಾ ಕಾಂಗ್ರೆಸ್..? ಕುಮಾರಸ್ವಾಮಿ ಮುಂದೇನ್ ಮಾಡ್ತಾರೆ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=3djEWZSv3MM

- Advertisement -

Latest Posts

Don't Miss