ಸಂಸತ್ ಭವನದೆದುರು ಸುಮಕ್ಕ ಮಿಂಚಿಂಗ್…!

ನವದೆಹಲಿ: ಮಂಡ್ಯದಿಂದ ಸಂಸದೆಯಾಗಿ ಆಯ್ಕೆಯಾಗಿರೋ ಸುಮಲತಾ ಅಂಬರೀಶ್ ನವದೆಹಲಿಯ ಸಂಸತ್ ಭವನದೆದುರು ಫೋಟೋ ತೆಗೆಸಿಕೊಂಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿರೋ ಸುಮಲತಾ, ದೊಡ್ಡದೊಂದು ಪ್ರಯಾಣದಿಂದ ಪ್ರಜಾಪ್ರಭುತ್ವದ ಪವಿತ್ರ ದೇಗುಲಕ್ಕೆ ಬಂದು ತಲುಪಿರುವೆ. ಜೈ ಹಿಂದ್, ಜೈ ಕರ್ನಾಟಕ ಅಂತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಸಂಸದೆ ಸುಮಲತಾ ಅಂಬರೀಶ್ ಕಾವೇರಿ ನೀರು ಹಂಚಿಕೆ ವಿವಾದ ಸೇರಿದಂತೆ ಮತ್ತಿತರ ವಿಚಾರಗಳಲ್ಲಿ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿರೋ ಬಗ್ಗೆ ಮಂಡ್ಯ ಜನತೆ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ.

ಮೈತ್ರಿ ಸರ್ಕಾರ ಪತನವಾಗೋ ಸುಳಿವು ನೀಡಿದ್ರಾ ನಿಖಿಲ್..? ತಪ್ಪದೇ ಈ ವಿಡಿಯೋ ನೋಡಿ

About The Author