ಮಂಡ್ಯ: ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದಾರೆ. ‘ಕುಮಾರಸ್ವಾಮಿ ಅವರು ಒಬ್ಬ ದುರಾಹಂಕಾರಿ’ ಎಂದು ಸುಮಲತಾ ಹೇಳಿದ್ದಾರೆ.
ಮುಂದಿನ ವಾರ ಅಭಿಷೇಕ್ ಅಂಬರೀಶ್ ಪ್ರಚಾರಕ್ಕೆ ಬರ್ತಾರೆ. ಬಿಜೆಪಿಗೆ ಜನರ ಬೆಂಬಲ ಸಾಕಷ್ಟು ವ್ಯಕ್ತವಾಗ್ತಿದೆ. ಬಿಜೆಪಿಗೆ ಪಾಸಿಟಿವ್ ಸಿಕ್ತಿದೆ. ಎರಡೂ ಪಕ್ಷದ ಬಂಡಾಯದ ಪ್ಲಸ್ ಬಿಜೆಪಿಗೆ ಹಾಗುತ್ತೆ. ದೊಡ್ಡ ದೊಡ್ಡ ಸಾಮಾಜ್ರವೇ ಮುಳುಗಿಹೋಗಿದೆ. ಭದ್ರಕೋಟೆ ಅನ್ನೋದು ಹಾಸ್ಯಸ್ಪದ. ನಾವು ಮಾಡಿದ ಅಭಿವೃದ್ಧಿ ಮಾತ್ರ ಶಾಶ್ವತ ಎಂದು ಸುಮಲತಾ ಮಂಡ್ಯ ಜೆಡಿಎಸ್ ಭದ್ರಕೋಟೆ ಎಂಬ ಮಾತಿಗೆ ಟಾಂಗ್ ಕೊಟ್ಟಿದ್ದಾರೆ..
ಅಲ್ಲದೇ, ಅಶೋಕ್ ಜಯರಾಂ ಗೆ ಮೋಸ ಆಗಿದೆ. ಜನರು ಈ ಬಾರಿ ಅಶೋಕ್ ಜಯರಾಂ ಗೆ ಆಶೀರ್ವಾದ ಮಾಡ್ತಾರೆ. ನಮ್ಮ ಟಾರ್ಗೆಟ್ ಇಲ್ಲಿಯ ಭ್ರಷ್ಟಾಚಾರ. ಶ್ರೀರಂಗಪಟ್ಟಣ- ಪಾಂಡವಪುರದಲ್ಲಿ ಭ್ರಷ್ಟಾಚಾರ ನಡೆಯಿತ್ತಿದೆ. ಪುಟ್ಟರಾಜು ಮೇಲೆ ಸಿಬಿಐ ಕೆಸ್ ಇದೆ. ಈ ಅವಕಾಶಕ್ಕೆ ಜನರು ಕಾಯ್ತಿದ್ದಾರೆ. ಮಂಡ್ಯದಲ್ಲಿ ಒಳ್ಳೆಯ ವಾತಾವರಣ ಕಂಡು ಬರ್ತಿದೆ. ಒಳ್ಳೆಯ ಜನರು ರಾಜಕಾರಣ ಬರಬೇಕು ಅಂದ್ರೆ. ಸ್ವಚ್ಚವಾಗಬೇಕು. ಜೆಡಿಎಸ್ ಅಭ್ಯರ್ಥಿಯನ್ನ ಸೋಲಿಸೋದೆ ನನ್ನ ಅಜೆಂಡಾ ಎಂದು ಸುಮಲತಾ ಹೇಳಿದ್ದಾರೆ.
ಸುಮಲತಾ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಅವರು ಫೈಟ್ ಮಾಡ್ತಿರೋದು ಯಾರಿಗೆ? ಎರಡೂ ಪಕ್ಷ ಬಿಟ್ಟು ಸುಮಾಲತಾ ಬಗ್ಗೆ ಮಾತನಾಡ್ತಿದ್ದಾರೆ. ಕುಮಾರಸ್ವಾಮಿ ಅವರೇ ಹೇಳ್ತಾರೆ ಸುಮಾಲತಾ ಬಗ್ಗೆ ಮಾತನಾಡಲ್ಲ ಅಂತ. ದುರಹಂಕಾರದ ಶಾಸಕ ಅಂದ್ರೆ ರವೀಂದ್ರ ಶ್ರೀಕಂಠಯ್ಯ. ಜನರೇ ಅವರನ್ನ ಒಂದು ಊರಿನಲ್ಲಿ ಓಡಿಸಿದ್ದಾರೆ. ಅವರ ಪಕ್ಷದವರೇ ಹೇಳ್ತಿದ್ದಾರೆ ದುಡ್ಡ ಪಡೆದು ಟಿಕೆಟ್ ಕೊಟ್ಟಿದ್ದಾರೆ ಅಂತ ಬೆಂಕಿ ಹಚ್ಚುವ ಕೆಲಸವನ್ನ ಮಾಡ್ತಾರೆ. ಸುಮಾಲತಾ ಅಂದ್ರೆ ಕುಮಾರಸ್ವಾಮಿ ಗೆ ಭಯ ಎಂದು ಸುಮಲತಾ ವ್ಯಂಗ್ಯವಾಡಿದ್ದಾರೆ.
ಅಂಬರೀಶ್ ರಿಂದ ಏನು ಅನುಕೂಲ ಆಗಿಲ್ಲ ಅಂತ ಹೇಳ್ತಾರೆ. ಅಂಬರೀಶ್ ಬಗ್ಗೆ ಮಂಡ್ಯ ಜನರಿಗೆ ಗೊತ್ತು. ಏಳಕ್ಕೆ ಏಳು ಜೆಡಿಎಸ್ ಗೆಲ್ಲೊಕೆ ಅಂಬರೀಶ್ ಕಾರಣ. ಸಿಎಂ ಆಗೋಕು ಅವರೇ ಕಾರಣ. ಅಂಬರೀಶ್ ಬಗ್ಗೆ ಮಾತನಾಡುವುದು ದುರಹಾಂಕರಾದ ಮಾತು. ಮನೆಗೆ ಬಂದು ಊಟ ಮಾಡಿ ಅಂಬರೀಶ್ ಗೆ ಧನ್ಯವಾದ ಹೇಳಿದ್ರು. ಅಭಿಮಾನಿಗಳು ಕೊಟ್ಟ ಗೌರವ, ಇವರು ಯಾರು ಗೌರವ ಕೊಟ್ಟಿಲ್ಲ. ಅಭಿಮಾನಿಗಳ ಒತ್ತಡಕ್ಕೆ ಮಂಡ್ಯಕ್ಕೆ ಅಂಬರೀಶ್ ತಂದಿದ್ದು. ಇದು ಕ್ಷುಲ್ಲಕ ರಾಜಕಾರಣ ಇದು. ನಿಮ್ಮ ಸಾಧನೆ ಬಗ್ಗೆ ಮಾತನಾಡಿ, ಸುಮಾಲತಾ ಬಗ್ಗೆ ಮಾತನಾಡ್ತಿರಿ. ಮಂಡ್ಯಕ್ಕೆ ಏನು ಸಾಧನೆ ಇದೆ ನಿಮ್ಮದು? ಎಂದು ಸುಮಲತಾ ಪ್ರಶ್ನಿಸಿದ್ದಾರೆ.
ಅದನ್ನು ಮುಚ್ಚಿಹಾಕಲು ಸುಮಾಲತಾ ಅವರನ್ನ ಟಾರ್ಗೆಟ್ ಮಾಡ್ತಾರೆ ಅಷ್ಟೆ. ನಾವೇ ದೊಡ್ಡ ನಾಯಕರು ಅಂತ ಮೆರೆಯುತ್ತಿರುವವರನ್ನ ಬೆಳೆಸಿದು ಎಸ್.ಡಿ.ಜಯರಾಂ. ಟಿಕೆಟ್ ಕೊಡದೆ ಅನ್ಯಾಯ ಮಾಡಿದ್ರು. ಬಹಿರಂಗ ಸಭೆಯಲ್ಲಿ ಮಾತ್ರ ಮಾತನಾಡುವುದು ಅಷ್ಟೆ. ಲೋಕಸಭಾ ಚುನಾವಣೆಯಲ್ಲಿ ನಿಕಿಲ್ ಸೋಲ್ತಾರೆ. ತಕ್ಷಣವೇ ಯುವರಾಜ್ಯಾಧ್ಯಕ್ಷ ಕಿರೀಟ ಕೊಟ್ಟರು. ಯಾವ ಆಧಾರದ ಮೇಲೆ ಕೊಟ್ಟರಿ..? ಯಾವ ಯುವಕರು ಇರಲಿಲ್ವಾ ನಿಮ್ಮ ಪಕ್ಷದಲ್ಲಿ? ಯುವ ರಾಜ ಆಗಿ ಎಷ್ಟು ಸಭೆ ಮಾಡಿದ್ದಾರೆ? ಎಲ್ಲೂ ಸಭೆ, ಪಕ್ಷ ಸಂಘಟನೆ ಮಾಡಿಲ್ಲ, ಇದಕ್ಕೆ ರಾಮನಗರ ಟಿಕೆಟ್ ಗಿಫ್ಟ್ ಕೊಟ್ಟರು. ಜನರು ಇದಕ್ಕೆಲ್ಲ ಉತ್ತರ ಕೊಡ್ತಾರೆ. ಮಂಡ್ಯದಲ್ಲಿ 5 ಸ್ಥಾನ ಗೆದ್ದೆ ಗೆಲ್ತೇವೆ ಎಂದು ಸುಮಲತಾ ಸವಾಲೆಸೆದಿದ್ದಾರೆ.
ಶಿವರಾಮೇಗೌಡ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಶಿವರಾಮೇಗೌಡ ಕ್ಷಮೆ ಕೇಳಿದರು. ಯಾರೋ ಹೇಳ್ಸಿದ್ರು ನಾನು ಹೇಳಿದ್ದೆ. ಪಕ್ಷದ ನಾಯಕರು ಒತ್ತಡದಿಂದ ಮಾತನಾಡಿದ್ದೆ. ಮೂರು ವರ್ಷದ ಹಿಂದೆ ಕ್ಷಮೆಯಾಚನೆ ಮಾಡಿದ್ದಾರೆ. ಅವರ ಪತ್ನಿ ಪರ ಗೌರವ ಕೊಡ್ತಿದ್ದೇನೆ. ನಾನು ಸಪೋರ್ಟ್ ಮಾಡ್ತಿದ್ದೇನೆ ಅಷ್ಟೆ ಎಂದು ಸುಮಲತಾ ಸ್ಪಷ್ಟನೆ ಕೊಟ್ಟಿದ್ದಾರೆ.
‘ನೀನು ಗಂಡ್ಸೆ ಅಲ್ಲ ಅಂತೆಲ್ಲ ನನ್ನನ್ನ ಬೈದ್ರು. ನಾನು ಸಹಿಸಿಕೊಂಡೆ ಆದ್ರೆ…’
ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲೇ ಜೆಡಿಎಸ್ ವಿರುದ್ಧ ಸ್ವಾಭಿಮಾನದ ಅಸ್ತ್ರ.