ಹೆಜ್ಜಾಲ-ಚಾಮರಾಜನಗರ ಹೊಸ ರೈಲು ಮಾರ್ಗದ ಸದ್ಯದ ವಸ್ತುಸ್ಥಿತಿಯ ಬಗ್ಗೆ ಪ್ರಶ್ನಿಸಿದ ಸಂಸದೆ ಸುಮಲತಾ

Political News: ನವದೆಹಲಿಯಲ್ಲಿ ನಡೆಯುತ್ತಿರುವ ಲೋಕಸಭಾ ಕಲಾಪದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಪ್ರಧಾನಿಗಳಲ್ಲಿ ವಿನಂತಿಸಿದ್ದರು. ಇಂದು ಕೂಡ, ಹೊಸ ರೈಲ್ವೆ ಮಾರ್ಗದ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಶ್, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಈ ಬಗ್ಗೆ ಪ್ರಶ್ನಿಸಿದ್ದಾರೆ.

ಸಂಸದೆ ಸುಮಲತಾ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, 1997-98ನೇ ಸಾಲಿನಲ್ಲಿ ಘೋಷಣೆಗೊಂಡು ಇನ್ನೂ ನೆನೆಗುದಿಗೆ ಬಿದ್ದಿರುವ 142 ಕಿಲೋ ಮೀಟರ್ ವಿಸ್ತೀರ್ಣದ ಹೆಜ್ಜಾಲ-ಚಾಮರಾಜನಗರ ನಡುವಿನ ಹೊಸ ರೈಲು ಮಾರ್ಗದ ಸದ್ಯದ ವಸ್ತುಸ್ಥಿತಿಯ ಕುರಿತಂತೆ ಲೋಕಸಭೆಯ ಪ್ರಶ್ನೋತ್ತರ ವೇಳೆ ಮಾನ್ಯ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ವಿವರಣೆ ಕೇಳಿ, ಗಮನ ಸೆಳೆಯಲಾಯಿತು.

ಈ ರೈಲು ಮಾರ್ಗವು ಬೆಂಗಳೂರಿನಿಂದ ಚಾಮರಾಜನಗರ, ಹೆಜ್ಜಾಲ, ಮಳವಳ್ಳಿ, ಕೊಳ್ಳೆಗಾಲ ಹೀಗೆ ಮಂಡ್ಯ ಕ್ಷೇತ್ರದಲ್ಲೂ ಈ ಹೊಸ ಮಾರ್ಗ ಹಾದು ಹೋಗಲಿದ್ದು, ಮಂಡ್ಯ ಕ್ಷೇತ್ರದ ಜನರಿಗೂ ಇದರಿಂದ ಅನುಕೂಲವಾಗಲಿದೆ. ನಾನು ಕೇಳಲಾದ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರ ನೀಡಿದರು ಎಂದು ಬರೆದುಕೊಂಡಿದ್ದಾರೆ.

ಮಗಳು ಐರಾಳ ಬರ್ತ್‌ಡೇಯನ್ನು ಎಷ್ಟು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ ನೋಡಿ ರಾಕಿ ಭಾಯ್

ಸಂಸತ್ತಿನಲ್ಲಿ ಭದ್ರತಾ ಲೋಪ: ಲೋಕಸಭಾ ಕಲಾಪ ನಡೆಯುವಾಗಲೇ ಕಲರ್ ಬಾಂಬ್‌ ಸಿಡಿಸಿದ ಅನಾಮಿಕ

ಅಯ್ಯಪ್ಪಸ್ವಾಮಿ ದರ್ಶನವಿಲ್ಲದೇ ತೆರಳಿದ ಮಾಲಾಧಾರಿಗಳು: ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ವಿಫಲ

About The Author