- Advertisement -
National Political News: ಈ ವರ್ಷ ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿದ್ದು, ಬರಗಾಲ ಆವರಿಸಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರು, ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು, ಮಮಂಡ್ಯ ಸಂಸದೆ ಸುಮಲತಾ ಅಂಬರೀಷ್ ವಿನಂತಿಸಿದ್ದಾರೆ.
ಲೋಕಸಭೆ ಕಲಾಪದ ಶೂನ್ಯವೇಳೆಯಲ್ಲಿ, ಬರಗಾಲದ ಬಗ್ಗೆ ಮಾತನಾಡಿರುವ ಸಂಸದೆ ಸುಮಲತಾ, ಕರ್ನಾಟಕದ ರೈತರ ಸಹಾಯಕ್ಕೆ ಪ್ರಧಾನಿ ಮೋದಿ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತವಾಗಿದ್ದು, ಬೆಳೆಗಳು ನಾಶವಾಗಿದೆ. ಹಲವರಿಗೆ ವಿಮೆ ಸಿಕ್ಕಿಲ್ಲ. ಹೀಗಾಗಿ ಈ ಕಷ್ಟಕ್ಕೆ ಸ್ಪಂದಿಸಿ, ಕರ್ನಾಟಕದ ರೈತರಿಗೆ, ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸಂಸದೆ ಸುಮಲತಾ ಅಂಬರೀಷ್ ವಿನಂತಿಸಿದ್ದಾರೆ.
ಈ ಬಗ್ಗೆ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ಲೋಕಸಭೆಯ ಶೂನ್ಯ ವೇಳೆಯಲ್ಲಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ಗಮನ ಸೆಳೆಯಲಾಯಿತು. ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತವಾಗಿದ್ದು, ಅಂದಾಜು 37 ಸಾವಿರ ಕೋಟಿ ಹಾನಿಯಾಗಿರುವ ಕುರಿತು ವಿವರಿಸಲಾಯಿತು.
ನನ್ನ ಮಂಡ್ಯ ಕ್ಷೇತ್ರದ ಬಹುತೇಕ ತಾಲೂಕುಗಳು ಬರದಿಂದ ತತ್ತರಿಸಿದ್ದು, ಶೇಕಡಾ 50 ರಿಂದ 70ರಷ್ಟು ಬೆಳೆ ಹಾನಿಯಾಗಿ, ರೈತರು ಸಂಕಷ್ಟಕ್ಕೆ ಸಿಲುಕಿರುವ ಹಾಗೂ ಮಳೆ ಬಾರದೇ ಇರುವ ಕಾರಣದಿಂದಾಗಿ ಕುಡಿಯುವ ನೀರಿಗೂ ಹಾಹಾಕಾರ ಎದ್ದಿರುವ ಕುರಿತು ಪ್ರಸ್ತಾಪ ಮಾಡಲಾಯಿತು.
ಮಾನ್ಯ ಪ್ರಧಾನ ಮಂತ್ರಿಗಳು ಕೂಡಲೇ ಬರಪೀಡಿತ ಪ್ರದೇಶಗಳಿಗೆ ಆರ್ಥಿಕ ಸಹಾಯ ಒದಗಿಸುವಂತಹ ಪ್ಯಾಕೇಜ್ ಗಳನ್ನು ಘೋಷಣೆ ಮಾಡುವ ಮೂಲಕ ಕರ್ನಾಟಕದ ಜನತೆಯ ಜೊತೆ ನಿಲ್ಲಬೇಕು ಎಂದು ವಿನಂತಿಸಿದೆ ಎಂದು ಸುಮಲತಾ ಬರೆದುಕೊಂಡಿದ್ದಾರೆ.
https://karnatakatv.net/as-party-president-i-must-treat-all-sections-of-people-equally-dcm-dk-shivakumar/
https://karnatakatv.net/dolly-ambassador-to-lidkar-cms-official-announcement/
- Advertisement -