Political News: ಸಂಸದ ತೇಜಸ್ವಿ ಸೂರ್ಯ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾತನಾಡುವಾಗ ಭ್ರಷ್ಟಾಚಾರ ಮುಕ್ತ ಆಡಳಿತ ಅಸಾಧ್ಯವೆಂದು ಹೇಳಿದ್ದ ಕಾರಣಕ್ಕೆ, ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ್ದ ಸಿಎಂ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವುದು ಅಸಾಧ್ಯ. ಭ್ರಷ್ಟಾಚಾರ ಇಲ್ಲಾ ಅಂತಾ ಹೇಳಿದವರು ಯಾರು..? ಕಪ್ಪು ಕುರಿಗಳು ಸದಾ ಇರುತ್ತದೆ. ಆದರೆ ಭ್ರಷ್ಟಾಚಾರಿಗಳನ್ನು ಗುರುತಿಸಿ ಶಿಕ್ಷಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಇದೇ ಹೇಳಿಕೆಗೆ ಸಂಬಂಧಿಸಿದಂತೆ, ಸಂಸದ ತೇಜಸ್ವಿ ಸೂರ್ಯ ಅಸಮಾಧಾನ ಹೊರಹಾಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಭ್ರಷ್ಟಾಚಾರದ ಸಮರ್ಥನೆಗೆ ಇಳಿದಿರುವುದು ಇದೇ ಮೊದಲ ಬಾರಿಯೇನಲ್ಲ. ಹಿಂದಿನ ಬಾರಿ ಅಧಿಕಾರದಲ್ಲಿದ್ದಾಗ ಪ್ರಬಲ ಲೋಕಾಯುಕ್ತವನ್ನು ದುರ್ಬಲಗೊಳಿಸಿ, ACB ಎಂಬ ಹಲ್ಲು ಕಿತ್ತ ಹಾವಿನ ತರಹದ ಸಂಸ್ಥೆಯನ್ನು ನೇಮಕಗೊಳಿಸುವ ಮೂಲಕ ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ದರು ಎಂದು ಸಂಸದರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಲೋಕಾಯುಕ್ತವನ್ನು ಬಲಪಡಿಸುವ ನಿರ್ಧಾರ ಮಾಡಿದರೆ, ಪ್ರಸ್ತುತ ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಸಮರ್ಥನೆಗೆ ಇಳಿದಿರುವುದು ಕಾಂಗ್ರೆಸ್ ಪಕ್ಷದ ನೈಜ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.
ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಮತ್ತವರ ಕುಟುಂಬ ಕೇಸರಿಶಾಲು ಕಿತ್ತೆಸೆಯುವುದು ನಿಶ್ಚಿತ: ಸಿಎಂ
70 ವರ್ಷ ಕಾಂಗ್ರೆಸ್ ಏನು ಮಾಡಿದೆ? ಸಂತೋಷ್ ಲಾಡ್‌ಗೆ ಶೆಟ್ಟರ್ ಟಾಂಗ್
ಶಿವಾಜಿಯವರ 36 ಬಾಡಿಗಾರ್ಡ್ಗಳಲ್ಲಿ 13 ಜನ ಮುಸ್ಲಿಂ ಇದ್ರು: ಇತಿಹಾಸ ಬಿಚ್ಚಿಟ್ಟ ಸಂತೋಷ್ ಲಾಡ್