Hassan News: ಹಾಸನ: ಪ್ರತಿ ಮದ್ಯದಂಗಡಿಯಲ್ಲೂ ಎಂ.ಆರ್.ಪಿ. ಧರದಲ್ಲಿ ಮಾರಾಟ ಮಾಡುವ ಬಗ್ಗೆ ಫಲಕ ಹಾಕಬೇಕು ಬೇಡಿಕೆಯನ್ನಿಟುಕೊಂಡು ಹೋರಾಟ ನಿರಂತರವಾಗಿರುತ್ತದೆ. ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲು ಜನಾಂದೋಲನ ರೂಪಿಸಲಾಗುವುದು ಮತ್ತು ಹಾಸನ ಅಬಕಾರಿ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶ್ ಗೌಡ ಬೋರನಹಳ್ಳಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಹಾಸನ ಜಿಲ್ಲೆಯ ಮದ್ಯಪಾನ ಪ್ರಿಯರ ಮತ್ತು ದೀನ ದಲಿತರು, ಕಾರ್ಮಿಕರಿಗೆ ಮಾರಕವಾಗಿರುವ ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿಯ ಮೇಲೆ ಕಾನೂನು ಕ್ರಮಕೈಗೊಂಡು ಅಮಾನತ್ತಿನಲ್ಲಿಟ್ಟು ತನಿಖೆ ಕೈಗೊಂಡು ವರ್ಗಾವಣೆಗೊಳಿಸಿ ಬೇರೆ ಜಾಗಕ್ಕೆ ನಿಯುಕ್ತಿಗೊಳಿಸಬೇಕು. ಮದ್ಯ ಮಾರಾಟದ ಅಂಗಡಿಗಳಲ್ಲಿ ಪ್ರತಿದಿನ ದರಪಟ್ಟಿ ಅಳವಡಿಸಬೇಕು ಎಂದು ಆಗ್ರಹಿಸಿ ಫೆಬ್ರವರಿ ೨೮ ರಂದು ಅಬಕಾರಿ ಆಯುಕ್ತರ ಕಚೇರಿ ಆಯುಕ್ತರ ಕಚೇರಿಯಲ್ಲಿ ನಡೆದ ಪ್ರತಿಭಟನೆ ವೇಳೆ ಈ ಘಟನೆ ನಡೆದಿದ್ದು ನ್ಯಾಯಸಮ್ಮತ ಹೋರಾಟ ಹತ್ತಿಕ್ಕುವ ಹುನ್ನಾರ ನಡೆದಿದೆ ಎಂದು ದೂರಿದರು.
ಇನ್ನು ಎಣ್ಣೆ ಖರೀದಿ ಮಾಡುವಾಗ ಎಂ.ಆರ್.ಪಿ. ಧರಕ್ಕಿಂತ ಹೆಚ್ಚಿನ ಬೆಲೆ ಕೇಳಿದರೇ ಮಧ್ಯಪ್ರಿಯರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು. ದರ ಪಟ್ಟಿ ಅಳವಡಿಕೆ ಮಾಡುವಂತೆ ಆಗ್ರಹಿಸಿ ಕಾನೂನು ಬದ್ದವಾಗಿ ನಡೆದ ಹೋರಾಟದ ವೇಳೆ ಅಬಕಾರಿ ಇಲಾಖೆಯ ಆಯುಕ್ತರು ಬೇಡಿಕೆಗಳ ಈಡೇರಿಸುವ ಸಲುವಾಗಿ ಮನವಿ ಮಾಡಲು ಬಂದರೇ ನಮ್ಮ ವಿರುದ್ದ ಏರು ಧ್ವನಿಯಲ್ಲಿ ಮಾತನಾಡಿ, ಪ್ರತಿಭಟನಾಕಾರರ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ. ಆದರೆ ಅವರಿಗೂ ಮೊದಲೇ ಅಧಿಕಾರಿ ವಿರುದ್ದ ನಾವು ದೂರು ನೀಡಿದ್ದರೂ ನಮ್ಮ ದೂರನ್ನು ಪೊಲೀಸರು ಪರಿಗಣಿಸಿಲ್ಲ ಎಂದು ಹೇಳಿದರು.
ಮದ್ಯದ ಅಂಗಡಿಗಳಲ್ಲಿ ದರಪಟ್ಟಿ ಅಳವಡಿಸಿ ಎಂ.ಎಸ್.ಐ.ಎಲ್ ಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆಯಬಾರದು, ಜೊತೆಗೆ ಬಹುತೇಕ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯುತ್ತಿದ್ದು, ಹೆಚ್ಚಿನ ಹಣ ಯಾರ ಪಾಲಾಗುತ್ತಿದೆ ಎಂಬ ಬಗ್ಗೆ ತನಿಖೆ ಆಗಬೇಕು. ಜೊತೆಗೆ ನಮ್ಮ ಮೇಲೆ ನಡೆದ ಗಲಾಟೆ ವಿಚಾರವಾಗಿ ಅಬಕಾರಿ ಇಲಾಖೆಯ ಕಚೇರಿಯಲ್ಲಿನ ಸಿಸಿಟಿವಿ ಕ್ಯಾಮರಾ ವೀಡಿಯೋಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ೩೮ ಸಾವಿರ ಕೋಟಿ ಸರ್ಕಾರಕ್ಕೆ ಆದಾಯ ನೀಡುತ್ತಿರುವ ಅಬಕಾರಿ ಇಲಾಖೆ ಈವರೆಗೆ ಒಂದೇ ಒಂದು ಸ್ವಂತ ಕಟ್ಟಡ ಹೊಂದಿಲ್ಲ. ಜೊತೆಗೆ ಕೆಲವು ಕಡೆ ಮನಬಂದಂತೆ ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ಕಂಡು ಬಂದಿದ್ದು, ಈ ಬಗ್ಗೆ ಕೂಡ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಇಂತಹ ಅವ್ಯವಹಾರ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ಪ್ರಧಾನ ಕಾರ್ಯದರ್ಶಿ ರಾಮಸ್ವಾಮಿ, ಸಂಘಟನಾ ಕಾರ್ಯದರ್ಶಿ ಎ.ಎಂ. ಸಿದ್ದೇಶ್, ಬೇಲೂರು ತಾಲೂಕು ಅಧ್ಯಕ್ಷ ತೋಟೇಶ್ ತಗರೆ, ಪ್ರಕಾಶ್ ಇತರರು ಉಪಸ್ಥಿತರಿದ್ದರು.
ಗೂಗಲ್ ಪೇ, ಫೋನ್ ಪೇ ಮೇಲೂ ಚುನಾವಣಾ ಆಯೋಗ ಕಣ್ಗಾವಲು ಇರಿಸಲಿದೆ: ರಾಜೀವ್ ಕುಮಾರ್
ಕಾಂಗ್ರೆಸ್ ಒಳಗೊಳಗೇ ಟ್ಯಾಂಕರ್ ಮಾಫಿಯಾಗಳಿಗೆ ಬೆಂಬಲ ನೀಡಿ ದುಡ್ಡು ಹೊಡೆಯುತ್ತಿದೆ: ಪ್ರೀತಂಗೌಡ




