Hosakote News : ಮಾಜಿ ಸಚಿವ ಹಾಲಿ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.ನನ್ನ ಅವಧಿಯಲ್ಲಿ ಅನುಮೋದನೆಗೆ ಬಂದ 38 ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಈಗ ಚಾಲನೆ. ಕಾಮಗಾರಿಗೆ ಚಾಲನೆ ನೀಡಲಿ ಆದರೆ ಯಾರ ಅವಧಿಯಲ್ಲಿ ನಡೆದಿದೆ ಎಂಬುದು ಜನರಿಗೆ ತಿಳಿಸಲಿ.
ಬಳಕೆಗೆ ಯೋಗ್ಯವಲ್ಲದ ನೀರು ಎಂದು ಆರೋಪಿಸಿದ ಸಂಸದ ಬಚ್ಚೇಗೌಡರು ಈಗ ನಾವು ಬಿಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಹೊಸಕೋಟೆ ತಾಲ್ಲೂಕಿನ 38 ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಅಂದಿನ ಸಿದ್ದರಾಮಯ್ಯ ಹಾಗೂ ಸಮ್ಮಿಶ್ರ ಸರಕಾರ ಅನುದಾನ ಬಿಡುಗಡೆ ಮಾಡಿದ್ದು.ಈಗಿನ ಶಾಸಕರು ನಾನು ಈ ಭಾಗಕ್ಕೆ ನೀರು ತರಲು ಪ್ರಯತ್ನಿಸುತ್ತಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ.
ಸಂಸದ ಬಚ್ಚೇಗೌಡರಿಗೆ ಮೈಯೆಲ್ಲಾ ಕಪ್ಪು ಚುಕ್ಕೆ ಎಂ ಟಿ ಬಿ ನಾಗರಾಜ್ ನಮ್ಮ ತಂದೆ 50 ವರ್ಷದ ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡಿದ್ದಾರೆ ಎಂಬ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣೆಗೆ ನಿಂತ ಸಂದರ್ಭದಲ್ಲಿ ಭೂತ್ ರಿಗಿಂಗ್ ಮಾಡಿ ಚುನಾವಣೆ ಎದುರಿಸಿರುವುದು, ಸರಕಾರಿ ದಲಿತರ ಜಮೀನು ಕಬಲಿಸಿರುವುದು ಕಪ್ಪು ಚುಕ್ಕೆ ಅಲ್ಲವೇ.ಮಾಜಿ ಸಚಿವ ಹಾಲಿ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.