Political News: ಸಚಿವ ಭೈರತಿ ಸುರೇಶ್, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ, ಸಿಎಂ ಸಿದ್ದರಾಮಯ್ಯ ಪತ್ನಿಯ ರಕ್ಷಣೆಗೆ ನಿಂತಿದ್ದಾರೆಂದು ಆರೋಪಿಸಲಾಗಿದೆ.
ಮುಡಾ ಸೈಟುಗಳ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು, ಎಷ್ಟೋ ವರ್ಷಗಳ ಹಿಂದೆ ನೀಡಿದ್ದ ಭೂಮಿಯ ಬದಲಾಗಿ, 2021ರಲ್ಲಿ ಕೋಟಿ ಕೋಟಿ ರೂಪಾಯಿಯ ಸೈಟ್ ಪಡೆದಿದ್ದಾರೆ.
ಈ ಪ್ರಕರಣದಲ್ಲಿ ಭೈರತಿ ಸುರೇಶ್, ಸಿಎಂ ಪತ್ನಿಯ ರಕ್ಷಣೆಗೆ ನಿಂತಿದ್ದಾರೆಂದು, ಆರ್‌ಟಿಐ ಕಾರ್ಯಕರ್ತರು ಗಂಭೀರವಾಗಿ ಆರೋಪಿಸಿದ್ದಾರೆ. ಆರ್‌ಟಿಐ ಕಾರ್ಯಕರ್ತ ಗಂಗರಾಜು ಈ ಬಗ್ಗೆ ಆರೋಪಿಸಿದ್ದು, ಈ ಹಗರಣದಲ್ಲಿ ಹಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಅಲ್ಲದೇ ಪಾರ್ವತಿ ಅವರಿಗೆ ನೀಡಿದ ಜಾಗವನ್ನು 2021ರ ಅನುಪಾತದಡಿ ನೀಡಲಾಗಿದ್ದು, ಅವರ ರಕ್ಷಣೆ ಮಾಡುವುದಕ್ಕಾಗಿ, 2 ವರ್ಷದ ಅನುಪಾತದಡಿಯ ಮಂಜೂರಾತಿ ಅಮಾನತು ಮಾಡುವಂತೆ ಸಚಿವ ಭೈರತಿ ಸುರೇಶ್ ಸೂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.