Tuesday, November 18, 2025

Latest Posts

ಬಹುಕೋಟಿ ಹಗರಣ: ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ನಾಯಕರ ಒತ್ತಾಯ..

- Advertisement -

Political News: ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಹಣ ಅಕ್ರಮ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ & ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕರು ರಾಜಭವನ್ ಚಲೋ ಆಯೋಜಿಸಿದ್ದರು.

ವಿಧಾನಸೌಧದಿಂದ ಪಾದಯಾತ್ರೆ ಮೂಲಕ ರಾಜಭವನಕ್ಕೆ ಬಿಜೆಪಿ ನಾಯಕರು ಧಾವಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ನಾಗೇಂದ್ರ ರಾಜೀನಾಮೆಗಾಗಿ ಒತ್ತಾಯಿಸಿದರು. ರಾಜ್ಯಪಾಲರು ಸಂವಿಧಾನಾತ್ಮಕ ಅಧಿಕಾರ ಬಳಸಿ ಈ ಸಚಿವರನ್ನು ವಜಾ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ಹಣಕಾಸು ಮಂತ್ರಿಯಾಗಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ಪ್ರಕರಣದ ಹೊಣೆಗಾರರಾಗಿದ್ದಾರೆ ಅವರೂ ಕೂಡ ಕೂಡಲೇ ರಾಜೀನಾಮೆ ನೀಡಬೇಕೆಂದು ಬಿಜೆಪಿಗರು ಒತ್ತಾಯಿಸಿದರು.

Joyal – karnataka tv

ಉತ್ತರಾಖಂಡನಲ್ಲಿ ಚಾರಣಿಗರ ದುರ್ಮರಣ: ಸಂತಾಪ ಸೂಚಿಸಿದ ಸಿಎಂ

ನಾನು ಕುಪ್ಪುಸ್ವಾಮಿ ಮಗ, ಕರುಣಾನಿಧಿ ಮಗ ಆಗಿದ್ದರೆ ಗೆಲ್ಲುತ್ತಿದ್ದೆ: ಸೋತರೆಂದು ಟೀಕಿಸಿದವರಿಗೆ ಅಣ್ಣಾಮಲೈ ತಿರುಗೇಟು

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ

- Advertisement -

Latest Posts

Don't Miss