ಬೆಂಗಳೂರು: ದೇಸಿ ಕ್ರಿಕೆಟ್ ಟೂರ್ನಿಯ ಸಾಮ್ರಾಟ ಮುಂಬೈ ಮತ್ತು ಮಧ್ಯಪ್ರದೇಶ ತಂಡಗಳು ಪ್ರಸಕ್ತ ರಣಜಿ ಟೂರ್ನಿಯ ಫೈನಲ್ ತಲುಪಿದೆ.
ಜೂ.22ರಂದು ಚಿನ್ನಸ್ವಾಮಿ ಮೈದಾನದಲ್ಲಿ ಮುಖಾಮುಖಿಯಾಗಲಿವೆ.
ಶನಿವಾರ ಮುಕ್ತಾಯವಾದ ಸೆಮಿಫೈನಲ್‍ನಲ್ಲಿ ಮುಂಬೈ ತಂಡ ಉತ್ತರ ಪ್ರದೇಶ ತಂಡದ ವಿರುದ್ಧ ಡ್ರಾ ಸಾಧಿಸಿತು.ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಫೈನಲ್‍ಗೆ ಲಗ್ಗೆ ಹಾಕಿತು. ರಣಜಿ ಟೂರ್ನಿಯಲ್ಲಿ ಮುಂಬೈ 47ನೇ ಬಾರಿಗೆ ಫೈನಲ್ ಪ್ರವೇಶಿಸಿತು.
662 ರನ್‍ಗಳ ಮುನ್ನಡೆಯೊಂದಿಗೆ ಐದನೆ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಮುಂಬೈ ತಂಡ ಸಾರಫಾರಾಜ್ ಖಾನ್ (ಅಜೇಯ 59)ಹಾಗೂ ಮುಲಾನಿ (ಅಜೇಯ 51) ಮಧ್ಯಾಹ್ನದವರೆಗೂ ಬ್ಯಾಟಿಂಗ್ ಮುಂದುವರೆಸಿದರು.
ನಂತರ ಉಭಯ ತಂಡದ ನಾಯಕರು ಪಂದ್ಯವನ್ನು ಡ್ರಾ ಮಾಡಲು ನಿರ್ಧಸಿದರು. ಮುಂಬೈ 2ನೇ ಇನ್ನಿಂಗ್ಸ್‍ನಲ್ಲಿ 4 ವಿಕೆಟ್ ನಷ್ಟಕ್ಕೆ 533 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಮತ್ತೊಂದು ಸೆಮಿಫೈನಲ್‍ನಲ್ಲಿ ನಿರೀಕ್ಷೆಯಂತೆ ಮಧ್ಯಪ್ರದೇಶ ತಂಡ ಬಂಗಾಳ ವಿರುದ್ಧ 174 ರನ್‍ಗಳ ಗೆಲುವು ಪಡೆಯಿತು. ಇದರೊಂದಿಗೆ 23 ವರ್ಷಗಳ ಬಳಿಕ ಮಧ್ಯಪ್ರದೇಶ ತಂಡ ರಣಜಿ ಫೈನಲ್ ತಲುಪಿದೆ.
ಸೊಗಸಾದ ಬೌಲಿಂಗ್ ಪ್ರದರ್ಶಿಸಿದ ಸ್ಪಿನ್ನರ್ ಕಾರ್ತಿಕ್‍ಯೇಯಾ ಎರಡನೆ ಇನ್ನಿಂಗ್ಸ್‍ನಲ್ಲಿ 5 ವಿಕೆಟ್ ಪಡೆದು ಮಿಂಚಿದರು. ಬಂಗಾಳ 2ನೇ ಇನ್ನಿಂಗ್ಸ್‍ನಲ್ಲಿ 175 ರನ್‍ಗಳಿಗೆ ಆಲೌಟ್ ಆಯಿತು.