ಹಾಸನ: ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಯಾರು ದೃತಿಗೆಡುವುದು ಬೇಡ. ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರಕಾರವಿದ್ದು, ಕ್ಷೇತ್ರದ ಅಭಿವೃದಿ ಕಡೆ ಗಮನ ಕೊಡೋಣ ಎಂದು ಪರಾಜಿತ ಶಾಸಕ ಅಭ್ಯರ್ಥಿ ಮುರುಳಿ ಮೋಹನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಸಕಲೇಶಪುರ ವಿಧಾನಸಭಾ ಕ್ಷೇತ್ರದ ಜನ ನನಗೆ ೪೨,೮೦೦ ಮತಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷದ ನಮ್ಮ ಕಾರ್ಯಕರ್ತರು ಹಗಲು ಇರುಳು ಶ್ರಮಪಟ್ಟಿದ್ದಾರೆ. ನಮ್ಮ ಪಕ್ಷದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ರವರು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹಾಸನ ಉಸ್ತುವಾರಿ ಸಂಸದ ಡಿ.ಕೆ. ಸುರೇಶ್ ಹೆಚ್.ಡಿ.ಸಿ.ಸಿ. ಅಧ್ಯಕ್ಷರಾದ ಲಕ್ಷ್ಮಣ್ ರವರು ಸೇರಿದಂತೆ ರಾಷ್ಟ್ರದ ರಾಜ್ಯದ ಜಿಲ್ಲೆಯ ಮತ್ತು ಕ್ಷೇತ್ರದ ಎಲ್ಲಾ ನಾಯಕರುಗಳಿಗೆ ಮುಖಂಡರುಗಳಿಗೆ ಮತ್ತು ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ನನ್ನ ಕ್ಷೇತ್ರದ ಜನರು ಹೆದರುವ ಅವಶ್ಯಕತೆ ಇಲ್ಲ ಕಾರಣ ನಾನು ನಿರಂತರವಾಗಿ ಕಾರ್ಯಕರ್ತರು ಮತ್ತು ಜನರೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತೇನೆ. ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಸರ್ಕಾರದ ಜೊತೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡು ಕ್ಷೇತ್ರದ ಮತ್ತು ಜಿಲ್ಲೆಯ ಅಭಿವೃದ್ಧಿಗೆ ತೊಡಗಿಸಿಕೊಳ್ಳುತ್ತೇನೆ. ನನ್ನ ಕಾರ್ಯಕರ್ತರಿಗೆ ಮತ್ತು ಜನರಿಗೆ ಸದಾ ಕಾಲ ಕ್ಷೇತ್ರದಲ್ಲಿ ಉಳಿದುಕೊಂಡು ಸಮಸ್ಯೆ ಬಗ್ಗೆ ತಿಳಿಸಿದರೆ ನಾನು ಪ್ರಾಮಾಣಿಕ ವಾಗಿ ಸ್ಪಂದಿಸುತ್ತೇನೆ. ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಕಷ್ಟ ಸುಖ ಎಲ್ಲದರಲ್ಲೂ ಭಾಗಿಯಾಗುತ್ತೇನೆ. ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ, ಭದ್ರತೆ, ರಕ್ಷಣೆ, ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇನೆ. ಪಕ್ಷದ ಎಲ್ಲಾ ಕಾರ್ಯಕರ್ತರು ಮುಖಂಡರು ಒಗ್ಗಟ್ಟಾಗಿ ಸಾರ್ವಜನಿಕರ ಕೆಲಸಗಳನ್ನ ಮಾಡೋಣ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೊಂದಿಗೂ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಸಲೀಂ ಕೊಲ್ಲಹಳ್ಳಿ, ಎಡೆಹಳ್ಳಿ ಆರ್. ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಎನ್. ರಾಮಚಂದ್ರು, ವಕೀಲರು ಗಿರೀಶ್, ಮುಖಂಡರಾದ ಬೈಕೆರೆ ದೇವರಾಜು ಇತರರು ಉಪಸ್ಥಿತರಿದ್ದರು.
ಡಿ.ಕೆ.ಶಿವಕುಮಾರ್ ಸಿಎಂ ಆಗಲು ತಮ್ಮ ಬೆಂಬಲ ವ್ಯಕ್ತಪಡಿಸಿದ ಹಲವು ಮಠದ ಸ್ವಾಮೀಜಿಗಳು
ರಾಜಕೀಯ ಮರೆತು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಹೆಚ್.ಪಿ. ಸ್ವರೂಪ್




