Friday, March 14, 2025

Latest Posts

ಕೌಟುಂಬಿಕ ಕಲಹಕ್ಕೆ ಹೆಂಡತಿಯ ಜೀವ ತೆಗೆದ ಪತಿರಾಯ..!

- Advertisement -

ಕಾರವಾರ : ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿಯೊರ್ವ ತನ್ನ ಪತ್ನಿಯನ್ನು ಬರ್ಬರವಾಗಿ ಕತ್ತು ಸೀಳಿ ಇರಿದು ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಠಾಣೆಯ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಭಟ್ಕಳ ತಾಲೂಕಿನ ಮುರುಡೇಶ್ವರ ನಿವಾಸಿ ನಂದಿನಿ ಲೋಕೇಶ ನಾಯ್ಕ(30) ಮೃತ ಮಹಿಳೆ. ಮೃತಳಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಶಿಲ್ಪಿ ಕೆಲಸ ಮಾಡುತ್ತಿದ್ದ ಲೋಕೇಶ ನಾಯ್ಕ ಮುರ್ಡೇಶ್ವರದ ನಾಡವರ ಕೇರಿ ನಿವಾಸಿ. ಸಬ್ಬತ್ತಿ ಕ್ರಾಸ್ ನಲ್ಲಿರುವ ಮನೆಯೊಂದರಲ್ಲೊ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತ್ನಿಯ ಕುತ್ತಿಗೆ ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ. ಗಾಯಗೊಂಡ ಮಹಿಳೆ ರಕ್ತದ ಮಡುವಿನಲ್ಲಿ ಹೊರಗೆ ಒಡಿಬಂದು ಬಿದ್ದಿದ್ದಳು. ಇದನ್ನು ಪಕ್ಕದ ಮನೆಯವರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಸಿಪಿಐ ವಸಂತ ಕಾಯ್ಕಿಣಿ ಮತ್ತು ಅವರ ತಂಡ ಬಲೆ ಬೀಸಿ ಆರೋಪಿ ಲೋಕೇಶ ನಾಯ್ಕನನ್ನು ಹೊಟೇಲೊಂದರಲ್ಲಿ ವಶಕ್ಕೆ ಪಡೆದಿದೆ.

ಪಿಎಸ್ ಐ ಮಂಜುನಾಥ, ಇತರ ಪೊಲೀಸ್‌ ಸಿಬ್ಬಂದಿ ನೇತೃತ್ವದಲ್ಲಿ ‌ಕಾರ್ಯಚರಣೆ ನಡೆದಿದೆ ಸುದ್ದಿ ತಿಳಿಯುತ್ತಿರುಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾವಣೆಗೊಂಡಿದ್ದಾರೆ. ಅಮ್ಮನನ್ನು ಕಳೆದುಕೊಂಡ ಮಕ್ಕಳ, ಹಾಗೂ ಕುಟುಂಬದವರ ರೋದನೆ ಮುಗಿಲು ಮುಟ್ಟಿತ್ತು. ಎಸ್ ಪಿ ವಿಷ್ಣುವರ್ಧನ್, ಡಿವೈ ಎಸ್ ಪಿ ಶ್ರೀಕಾಂತ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.

ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಉದ್ಯಮಿ..!

ನವರಾತ್ರಿ ಬನ್ನಿ ಪೂಜೆಗೆ ತೆರಳುವ ಮಹಿಳೆಯರನ್ನು ಟಾರ್ಗೆಟ್ ಮಾಡಿದ ಕಳ್ಳರು..!

ಕಳ್ಳರನ್ನು ಹಿಡಿಯುವವರು ಪೋಲಿಸರು. ಆದರೆ ಪೊಲಿಸರೇ ಕಳ್ಳರಾದಾಗ ಯಾರು ಹಿಡಿಯಬೇಕು?

- Advertisement -

Latest Posts

Don't Miss