Movie News: ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಶೀದ್ ಖಾನ್, ಕೊಲ್ಕತ್ತಾದ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ, ರಶೀದ್ ಸಾವನ್ನಪ್ಪಿದ್ದಾರೆ.
55 ವರ್ಷದ ರಶೀದ್ ಖಾನ್, ಹಿಂದಿಯ ಹಲವು ಸಿನಿಮಾಗಳಲ್ಲಿ ಹಾಡನ್ನು ಹಾಡಿದ್ದಾರೆ. ಜಬ್ ವಿ ಮೆಟ್ ಸಿನಿಮಾದ ಆವೋಗೆ ತುಮ್ ಓ ಸಾಜನಾ ಹಾಡು ಕೂಡ ಉಸ್ತಾದ್ ರಶೀದ್ ಖಾನ್ ಅವರೇ ಹಾಡಿದ್ದು. ಈ ಹಾಡು ಸಖತ್ ಫೇಮಸ್ ಆಗಿತ್ತು. ಬಳಿಕ ರಶೀದ್ ಪ್ರಸಿದ್ಧಿಯನ್ನು ಪಡೆದರು. ಬಳಿಕ ರಶೀದ್‌ಗೆ ಬಾಲಿವುಡ್‌ನಲ್ಲಿ ಸಾಕಷ್ಟು ಅವಕಾಶ ಸಿಕ್ಕಿದ್ದು, ರಿಶ್ತೆ ನಾಥೆ, ಇಶ್ಕ್ ಕಾ ರಂಗ್, ಚೀನೇರೇ ಮೋರಾ ಚೈನ್ ಸೇರಿ, ಹಲವು ಪ್‌ರಸಿದ್ಧ ಗೀತೆಗಳಿಗೆ ರಶೀದ್ ಕಂಠದಾನ ಮಾಡಿದ್ದರು.
ಹಲವು ದಿನಗಳಿಂದ ರಶೀದ್ ವೆಂಟಿಲೇಟರ್‌ನಲ್ಲಿದ್ದು, ಕ್ಯಾನ್ಸರ್‌ಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ತಿಂಗಳು ರಶೀದ್, ಉತ್ತಮ ರೆಸ್ಪಾನ್ಸ್ ಕೊಡುತ್ತಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆಂದು ಎಲ್‌ಲರೂ ಅಂದಾಜಿಸಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಅವರ ಆರೋಗ್ಯದ ಸ್ಥಿತಿ, ತೀರಾ ಹದಗೆಟ್ಟಿದ್ದು, ಇಂದು ಚಿಕಿತ್ಸೆ ಫಲಿಸದೇ, ರಶೀದ್ ಸಾವನ್ನಪ್ಪಿದ್ದಾರೆ.
ಇನ್ನು ರಶೀದ್ ಸಾವಿಗೆ, ಬೆಂಗಾಲ್ ಸಿಎಂ ಮಮತಾ ಬ್ಯಾನರ್ಜಿ ಸೇರಿ ಹಲವು ರಾಜಕೀಯ ಗಣ್ಯರು, ಸಿನಿಮಾ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಲಕ್ಷದ್ವೀಪದ ಅಭಿವೃದ್ಧಿಗೆ ಭಾರತಕ್ಕೆ ನಾವು ಸಾಥ್ ಕೊಡುತ್ತೇವೆ ಎಂದ ಇಸ್ರೇಲ್
“ಬೊಂಬಾಟ್ ಭೋಜನ”ಕ್ಕೆ ಸಾವಿರದ ಸಂಭ್ರಮ..ಮಕರ ಸಂಕ್ರಾಂತಿಯಿಂದ ನಾಲ್ಕನೇ ಆವೃತ್ತಿ ಆರಂಭ..
ಬಿಟಿಎಸ್ ಹುಚ್ಚು ನೆತ್ತಿಗೇರಿ ಕೋರಿಯಾಗೆ ಹೊರಟಿದ್ದ 8ನೇ ತರಗತಿ ವಿದ್ಯಾರ್ಥಿನಿಯರು.. ಆಮೇಲೇನಾಯ್ತು..?