Hubli News: ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ತಂದೆ ನಿರಂಜನಯ್ಯ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಮಗಳ ಕೊಲೆ ಪ್ರಕರಣದ ತನಿಖೆ ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರದಿಂದ ನಮ್ಮ ಮಗಳ ಕೊಲೆಗೆ ನ್ಯಾಯ ಸಿಗುವುದಿಲ್ಲ. ಮಗಳ ಕಳೆದುಕೊಂಡ ಬಳಿಕ ತ್ವರಿತವಾಗಿ ನ್ಯಾಯ ಕೋಡಿಸುವುದಾಗಿ ಹೇಳಿದ ಸರ್ಕಾರ. ಕೊಲೆ ನಡೆದು 9 ತಿಂಗಳಾದ್ರೂ ಯಾವುದೇ ನ್ಯಾಯ ಸಿಗುವ ಭರವಸೆ ಸಿಗುತ್ತಿಲ್ಲ. ಶ್ರೀ ರಾಮ ಸೇನೆ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ ಅವರು ಹೇಳುತ್ತಿರುವುದು ನಿಜ. ಮಗಳ ಕೊಲೆ ಪ್ರಕರಣದ ಹಿಂದೆ ಪ್ರಭಾವಿ ಕೈವಾಡವಿರುವುದು ನಿಜ. ಸ್ಥಳೀಯ ಕಾಂಗ್ರೆಸ್ ಶಾಸಕರ ಕೈ ವಾಡ ಇರುವುದು ಸತ್ಯ ಎಂದು ನಿರಂಜನಯ್ಯ ಆರೋಪಿಸಿದ್ದಾರೆ.
ನಾನು ಈ ಹಿಂದೆ ಸ್ಥಳೀಯ ಶಾಸಕರ ಕ್ಷೇತ್ರದಿಂದ ಎಂಎಲ್‌ಎ ಟಿಕೆಟ್ ಕೇಳಿದೆ. ಅದನ್ನೇ ರಾಜಕೀಯ ದ್ವೇಷದಿಂದ ನನ್ನ ಮಗಳ ಹತ್ಯೆ ಮಾಡಿಸಿದ್ದಾರೆ. ಫಾಸ್ಟ್ರ್ಯಾಕ್ ಕೋರ್ಟ ಮೂಲಕ ನ್ಯಾಯ ಕೊಡಿಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಒಂಬತ್ತು ತಿಂಗಳ ಮುಗಿದ್ರೂ ಒಂದು ಹಿಯರಿಂಗ್ ಇನ್ನೂ ನಡೆದಿಲ್ಲ. ಸಿಎಂ ಹಾಗೂ ಗೃಹ ಸಚಿವರ ಭೇಟಿಗೂ ನನಗೆ ಸ್ಥಳೀಯ ಶಾಸಕರು ಅಡ್ಡಿ ಮಾಡುತ್ತಲೇ ಬರುತ್ತಿದ್ದಾರೆ. ಸುರ್ಣಸೌಧ ಸೇರಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹಲಾವರು ಬಾರಿ ಅಡ್ಡಿ ಪಡಿಸಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನಿಗೆ ಈ ಅನ್ಯಾಯವಾಗಿದೆ ಎಂದು ನಿರಂಜನಯ್ಯ ಅಸಮಾಧಾನ ಹೊರಹಾಕಿದ್ದಾರೆ..
ನನ್ನ ಮಗಳ ಕೊಲೆ ಮಾಡಿದ ಆರೋಪಿ ಫಯಾಜ್ ಬೆಳಗಾವಿ ಜೈಲಿಗೆ ಟ್ರಾನ್ಸಫರ್ ಕೇಳಿದ್ದಾನೆ. ಇದರ ಹಿಂದೆ ಪ್ರಭಾವಿಗಳ ಕೈವಾಡವಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕರು ಮನೆಗೆ ಬಂದು ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು. ಭರವಸೆ ಇಲ್ಲಿಯವರೆಗೂ ನನಗೆ ಈಡೇರಿಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು. ಈ ಪ್ರಕರಣ ಸಿಬಿಐಗೆ ನೀಡಿದ್ದರೆ ಪ್ರಕರಣದ ಹಿಂದಿರುವ ಪ್ರಭಾವಿ ಮುಖವಾಡ ಕಳಚಿ ಬೀಳುತ್ತದೆ. ಈ ಪ್ರಕರಣ ಸಿಬಿಐಗೆ ನೀಡಲು ಒತ್ತಾಯಿ ಹೋರಾಟದ ಯೋಚನೆ ಮಾಡುತ್ತೇನೆ ಇನ್ನು ಎಂದು ನಿರಂಜನಯ್ಯ ಹಿರೇಮಠ ಹೇಳಿದ್ದಾರೆ.