ನನ್ನ ಅಂತ್ಯಕ್ರಿಯೆ ಯಾವತ್ತೋ ಅಂದೆ ಹಾನಗಲ್ಲಿನಿಂದ ನನ್ನ ಬಿಳ್ಕೊಡುಗೆ: ಶಾಸಕ ಶ್ರೀನಿವಾಸ್ ಮಾನೆ

Haveri News: ಹಾವೇರಿ: ಹಾವೇರಿಯ ಹಾನಗಲ್ ಪಟ್ಟಣದ ತಮ್ಮ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಶ್ರೀನಿವಾಸ ಮಾನೆ, ನನ್ನ ಅಂತ್ಯಕ್ರಿಯೆ ಯಾವತ್ತೋ ಅಂದೆ ಹಾನಗಲ್ಲಿನಿಂದ ನನ್ನ ಬಿಳ್ಕೊಡುಗೆ. ಹಾನಗಲ್ ನನ್ನೂರು ಎಂದು ಅಪ್ಪಿ ಬಂದಿದ್ದೇನೆ ಎಂದಿದ್ದಾರೆ.

ಜನ ಪ್ರೀತಿಯಿಂದ ನನ್ನ ಜೊತೆ ನಿಂತಿದ್ದಾರೆ ಅವರು ಒಪ್ಪುವ ರೀತಿ ಕೆಲಸ ಮಾಡುತ್ತಿದ್ದೇನೆ ಬೀಳ್ಕೊಡುಗೆಗೆ ನಾನು ಸರ್ಕಾರಿ ನೌಕರನ್ನಲ್ಲ. ರಾಜಕೀಯಕ್ಕೆ ಕೊನೆ ಇಲ್ಲ ಭಗವಂತನನ್ನ ಆಯಸ್ಸು ಎಷ್ಟು ಅಂತ ಬರೆದಿದ್ದಾನೆ ಅಲ್ಲಿಯವರೆಗೆ ಕಾಯಬೇಕು. ನನ್ನ ಅಂತಕ್ರಿಯೆ ಯಾವತ್ತೂ ಅಂದೆ ನನ್ನ ಬಿಳ್ಕೊಡುಗೆ ಯಾಗಿರಲಿ ಎಂದು ನ್ಯಾಯವಾದಿ ಸಂದೀಪ್ ಪಾಟೀಲ್ ವಿರುದ್ಧ ಶಾಸಕ ಶ್ರೀನಿವಾಸ ಮಾನೆ ವಾಗ್ದಾಳಿ ನಡೆಸಿದ್ದಾರೆ.

ನಾನು ಸಚಿವ ಆಗಬಾರದು ಎಂದು ಹೇಳುವ ನಮ್ಮೂರು ನಮ್ಮವರು ರೂವಾರಿ ಹೇರೂರು ಗ್ರಾಮದಲ್ಲಿ
ಇತ್ತೀಚಿಗಷ್ಟೆ ನಡೆದ ಸಮಾರಂಭವೊಂದರಲ್ಲಿ ದೇವರಲ್ಲಿ ನಾನು ಸಚಿವನಾಗಲಿ ಎಂದು ಬೇಡಿಕೊಂಡಿದ್ದನ್ನು ನೆನಪಿಸುತ್ತೇನೆ. ಈಗೇಕೆ ಇಂತ ಕೆಟ್ಟ ಕನಸು ಕಟ್ಟಿದರು. ಇವರೇನು ನನ್ನ ಹೈಕಮಾಂಡ್ ಅಲ್ಲ, ಸಚಿವ ಸ್ಥಾನ ತೀರ್ಮಾನಿಸುವರೂ ಇವರಲ್ಲ. ದೇವರು ಆಶೀರ್ವದಿಸಿ ವರಿಷ್ಠರು ಗುರುತಿಸಿದರೆ ಯಾರೇ ತಿಪ್ಪರಲಾಗ
ಹಾಕಿದರೂ ಸಚಿವ ಸ್ಥಾನ ತಪ್ಪಿಸಲು ಆಗುವುದಿಲ್ಲ. ಆಗದಿದ್ದರೂ ದುಃಖವಿಲ್ಲ ಎಂದು ಶಾಸಕ ಮಾನೆ ಸಂದೀಪ್ ಪಾಟೀಲ್ ಅವರಿಗೆ ತಿರುಗೇಟು ನೀಡಿದರು.

About The Author