Haveri: ನಮ್ಮೂರು ನಮ್ಮವರು ನಕಲಿ ಹೋರಾಟಗಾರರು ಎಷ್ಟು ಸಮಾಜಸೇವೆ ಮಾಡಿದ್ದಾರೆ?: ಮಾನೆ ಪ್ರಶ್ನೆ

Haveri News: ಹಾವೇರಿಯ ಹಾನಗಲ್ ಪಟ್ಟಣದ ತಮ್ಮ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಶ್ರೀನಿವಾಸ ಮಾನೆ, ಸಂದೀಪ್ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಮ್ಮೂರು ನಮ್ಮವರು ನಕಲಿ ಹೋರಾಟಗಾರರು ಎಷ್ಟು ಜನರ ಜೀವ ಉಳಿಸಿದ್ದಾರೆ ಎನ್ನುವುದನ್ನು ಹೇಳಿ. ಸರ್ಕಾರಿ ಶಾಲೆಗಳಿಗೆ ಕಲಿಯುವ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದರೆ ತಿಳಿಸಲಿ. ಜನರ ಕಷ್ಟಕ್ಕೆ ಸ್ಪಂದಿಸದೆ ತಮ್ಮ ತಪ್ಪು ಮುಚ್ಚಿಕೊಳ್ಳಲು ಅನ್ಯ ದಾರಿ ಹಿಡಿದಿರುವ ಇವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಮಾನೆ ವಾಗ್ದಾಳಿ ನಡೆಸಿದ್ದಾರೆ.

ತಾಲೂಕ ಆಸ್ಪತ್ರೆಗೆ ಸ್ವಂತ ಮತ್ತು ದಾನಿಗಳ ಹಣದಿಂದ ವೆಂಟಿಲೇಟರ್ ವ್ಯವಸ್ಥೆ ಮಾಡಿದ್ದೇವೆ. ಗುಣಮಟ್ಟದ ಚಿಕಿತ್ಸೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಮಧ್ಯರಾತ್ರಿಯ ಸಂದರ್ಭದಲ್ಲಿ ನಮ್ಮವರು ಧಾವಿಸಿ ನೆರವಿಗೆ ನಿಲ್ಲುತ್ತಾರೆ.

ಹಾವೇರಿ ಜಿಲ್ಲಾ ಆಸ್ಪತ್ರೆ ಹುಬ್ಬಳ್ಳಿಯು ನಮ್ಮ ತಂಡದವರು ರೋಗಿಗಳ ಕಾಳಜಿ ಮಾಡುತ್ತಿದ್ದಾರೆ. ಇವರೇನು ಮಾಡಿದ್ದಾರೆ ಎನ್ನುವುದನ್ನು ಮೊದಲು ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

About The Author