Sunday, April 20, 2025

Latest Posts

‘ನನ್ನ ಮೇಲೆ ನಂಬಿಕೆ ಇಟ್ಟು, ನನಗೆ ಈ ಜವಾಬ್ದಾರಿ ವಹಿಸಿದ್ದಕ್ಕೆ, ವಿನಮ್ರ ಕೃತಜ್ಞತೆಗಳು’

- Advertisement -

Political News: ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ತಯಾರಿ ನಡೆಸಿದ್ದು, ಬಿಜೆಪಿಯ ನೂತನನ ಪದಾಧಿಕಾರಿಗಳ ಪಟ್ಟಿ ರಿಲೀಸ್ ಮಾಡಿದೆ. ಈ ಲೀಸ್ಟ್‌ನಲ್ಲಿ ಬಿಜೆಪಿ ನಾಯಕ ಪ್ರೀತಂ ಗೌಡ ಅವರಿಗೂ ಸ್ಥಾನ ಸಿಕ್ಕಿದ್ದು, ಈ ಕಾರಣಕ್ಕೆ ಪ್ರೀತಂ ಬಿಜೆಪಿಗೆ ಧನ್ಯವಾದ ತಿಳಿಸಿದ್ದಾರೆ.

ಬಿಜೆಪಿ ಕರ್ನಾಟಕ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ವಹಿಸಿದೆ, ನನ್ನ ವಿನಮ್ರ ಕೃತಜ್ಞತೆ. ಈ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ ಬಿಜೆಪಿ ಕರ್ನಾಟಕ ಅಧ್ಯಕ್ಷರಾದ ಶ್ರೀ ಬಿವೈ ವಿಜಯೇಂದ್ರ,ಬಿಜೆಪಿ ಕರ್ನಾಟಕ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ಜಿವಿ ಅವರಿಗೆ ನನ್ನ ಪ್ರಾಮಾಣಿಕ ಧನ್ಯವಾದ ಎಂದಿದ್ದಾರೆ.

ನೂತನವಾಗಿ ನೇಮಕಗೊಂಡಿರುವ ಎಲ್ಲಾ ರಾಜ್ಯ ಪದಾಧಿಕಾರಿಗಳಿಗೆ ನನ್ನ ಅಭಿನಂದನೆಗಳು. ಹಿರಿಯ ನಾಯಕರ ಮಾರ್ಗದರ್ಶನ ಮತ್ತು ಪಕ್ಷದ ಅಧ್ಯಕರ ನಾಯಕತ್ವದಲ್ಲಿ ಎಲ್ಲರೊಂದಿಗೆ ಜತೆಗೂಡಿ ಕೇಂದ್ರ ಮತ್ತು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಲಿದ್ದೇವೆ ಎಂದು ಪ್ರೀತಂ ಭರವಸೆ ನೀಡಿದ್ದಾರೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರು ಶ್ರೀ ಜೆಪಿ ನಡ್ಡಾ, ಹಿರಿಯ ನಾಯಕ ಶ್ರೀ ಅಮಿತ್ ಶಾ, ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಶ್ರೀ ಬಿಎಲ್ ಸಂತೋಷ್ ಅವರ ಮಾರ್ಗದರ್ಶನ ಪಡೆದು, ಪಕ್ಷ ಸಂಘಟನೆ ಮಾಡಲು ಬದ್ಧನಾಗಿದ್ದೇನೆ. ಸದಾ ಮಾರ್ಗದರ್ಶನ, ಬೆಂಬಲ ನೀಡುವ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್‌ ಯಡಿಯೂರಪ್ಪನವರಿಗೆ ನಾನು ಆಭಾರಿ ಎಂದು ಪ್ರೀತಂ ಗೌಡ ಹೇಳಿದ್ದಾರೆ.

ರಾಜ್ಯಾದಂತ ಇರುವ ದೇವದುರ್ಲಭ ಕಾರ್ಯಕರ್ತೆಲ್ಲರೂ ಒಟ್ಟಾಗಿ ಸೇರಿ ಮುಂಬರುವ ದಿನದಲ್ಲಿ ಒಗ್ಗಟ್ಟಿನಿಂದ ಶ್ರಮಿಸಿ, ಕೇಂದ್ರ ಮತ್ತು ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವತ್ತ ಕೈಜೋಡಿಸೋಣ ಎಂದು ಪ್ರೀತಂಗೌಡ ಹೇಳಿದ್ದಾರೆ.

ಲೋಕಸಭೆಗೆ ಸ್ಪರ್ಧಿಸಲು ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ – ಸಚಿವ ಸಂತೋಷ್ ಲಾಡ್

ಕಿವಿಗೆ ಪೆಟ್ಟು ಬೀಳುವಷ್ಟು ಕೆಟ್ಟದಾಗಿ ಪತ್ನಿಗೆ ಹೊಡೆದ್ರಾ ವಿವೇಕ್ ಬಿಂದ್ರಾ..?

ಭಜರಂಗ್ ಪುನಿಯಾ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ವೀರೇಂದ್ರ ಸಿಂಗ್

- Advertisement -

Latest Posts

Don't Miss