Saturday, December 28, 2024

Latest Posts

ಈ ದೇವರನ್ನು ನಂಬಿದ್ದಕ್ಕೆ ನನ್ನ ಪತಿ ಚುನಾವಣೆಯಲ್ಲಿ ಗೆದ್ದಿದ್ದರು: ಭವಾನಿ ರೇವಣ್ಣ

- Advertisement -

Hassan News: ಹಾಸನ: ಹಾಸನದ ಹೊಳೆನರಸೀಪುರ ತಾಲೂಕಿನ, ಮಾವಿನಕೆರೆ ಬೆಟ್ಟದಲ್ಲಿ ಶ್ರೀ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಕುಟುಂಬ‌ ಸಮೇತರಾಗಿ ಭಾಗಿಯಾಗಿ ನಂತರ ಭವಾನಿರೇವಣ್ಣ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಪತಿಯ ಬಗ್ಗೆ ಮಾತನಾಡಿದ್ದಾರೆ.

ಚುನಾವಣೆಗಿಂತ ಮುಂಚೆ ಅವರು ಹೇಳಿರುವುದು ನಾನು ನೋಡಿರುವುದಲ್ಲ. ಎಂಎಲ್‌ಎ ಆಗುವ ಮೊದಲು ರೇವಣ್ಣ ಅವರಿಗೆ ಒಂದು ಪಕ್ಷದ ಟಿಕೆಟ್ ತಪ್ಪುವ ಮುಂಚೆ ಸೈಕಲ್‌ನಲ್ಲಿ ಬರುವಾಗ ರಂಗನಾಥಸ್ವಾಮಿ ದಿವ್ಯ ದರ್ಶನ ಕೊಟ್ಟಿದ್ದರಂತೆ. ಅದನ್ನು ನೋಡಿ ಅವರು ಆಯಾ ತಪ್ಪಿ ಕೆಳಗೆ ಬಿದ್ದರಂತೆ. ನಂತರ ಎಚ್ಚರವಾಗಿ ನೋಡಿದ ಬಳಿಕ ಬೃಹತ್ ಆಕಾರವಾಗಿ ದೇವರು ಬೆಳೆಯಿತ್ತಂತೆ. ಆಗ ಅವರು ಮನೆಗೆ ಬಂದು ನಮ್ಮ ಅತ್ತೆ ಬಳಿ ಹೇಳಿಕೊಂಡರಂತೆ. ಆಗ ಅವರು ಪರ್ವಾಗಿಲ್ಲ ಇಂಡಿಪೆಂಡೆಂಟ್ ಆಗಿ ನಿಲ್ಲು ಎಂದರಂತೆ, ಅದರಂತೆ ನಿಂತು ಗೆದ್ದರು. ಆಗಿನಿಂದ ನಾವು ಬಹಳವಾಗಿ ಈ ದೇವರನ್ನು ನಂಬುತ್ತೇವೆ. ಬಹಳ ಶಕ್ತಿಯಿದೆ, ಇದುವರೆಗೂ ಕೇಳಿಕೊಂಡಿದ್ದು, ಮನಸ್ಸಿನಲ್ಲಿ ಅಂದು ಕೊಂಡಿದ್ದನ್ನು ಭಗವಂತ ಈಡೇರಿಸಿದ್ದಾನೆ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.

1994 ರಲ್ಲಿ ಪ್ರಥಮ ಬಾರಿ ಎಂಎಲ್‌ಎ ಆದರೂ, ಆಲ್ಲಿಯವರೆಗೂ ನಾನು ಬೆಟ್ಟ ಹತ್ತಿಕೊಂಡು ಬರುತ್ತಿದ್ದೆ. ನನ್ನ ಮಕ್ಕಳನ್ನು ಎತ್ತಿಕೊಂಡು ಮೊದಲ ಶ್ರಾವಣದಲ್ಲಿ ಬೆಟ್ಟ ಹತ್ತಿಕೊಂಡು ಬರುತ್ತಿದ್ದೆ. ಆದಾದ ನಂತರ ಬೆಟ್ಟ ಹತ್ತಲು ಎಲ್ಲರಿಗೂ ತೊಂದರೆ ಇತ್ತು, ಕುಡಿಯುವ ನೀರಿಗೂ ತೊಂದರೆ ಇತ್ತು. ಮುಡಿಕೊಟ್ಟರು ಸ್ನಾನ ಮಾಡಲು ನೀರು ಇರಲಿಲ್ಲ. 1994 ರಲ್ಲಿ ರೇವಣ್ಣ ಅವರು ಎಂಎಲ್‌ಎ ಆದಾಗ ಮೊದಲು ಕೈಗೊಂಡ ಕಾರ್ಯಕ್ರಮ. ಬೋರ್‌ವೆಲ್ ಕೊರೆಸಿ ನೀರಿನ ವ್ಯವಸ್ಥೆ ಮಾಡಿದೆವು. ನಂತರ ನಮ್ಮ ಮನಸ್ಸಿನಲ್ಲಿ ಇರುವುದನ್ನು ಮಾಡಲು ಆಗಲಿಲ್ಲ. ಅದಾದ ಬಳಿಕ ರೇವಣ್ಣ ಅವರು ಮಂತ್ರಿಯಾದಾಗ ರಸ್ತೆ ಮಾಡಿಸಿದ್ರು. ಈಗ ಎಲ್ಲಾ ವಯೋಮಾನದವರು ಆರಾಮಾಗಿ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ. ಇದಕ್ಕೆ ಕಾರಣರಾದ ರೇವಣ್ಣ ಅವರನ್ನು ಹೊಗಳುತ್ತಿದ್ದಾರೆ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರಹಾಕಿದ ಬಾಲಿವುಡ್ ಸೆಲೆಬ್ರಿಟಿಗಳು..

ಮನೆಯಲ್ಲೇ ಗಾಂಜಾ ಸೇವಿಸುವಾಗ ಸಿಕ್ಕಿಬಿದ್ದ ಬಿಗ್‌ಬಾಸ್ ಸ್ಪರ್ಧಿ

ತ್ರಿಷಾ ವಿರುದ್ಧ 25 ಲಕ್ಷ ಪಡೆದ ಆರೋಪ ಹಾಕಿದ್ದ ಮುಖಂಡನ ವಿರುದ್ಧ ಕಾನೂನು ಸಮರ..

- Advertisement -

Latest Posts

Don't Miss