Mysuru News: ಹೇಗಿರಲಿದೆ ಈ ಬಾರಿ ಮೈಸೂರು ದಸರಾ..? ಯಾರ್ಯಾರು ಬರಲಿದ್ದಾರೆ..?

Mysuru News: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಜಂಬೂಸವಾರಿಯಲ್ಲಿ ಈ ಬಾರಿ ಚಿನ್ನದ ಅಂಬಾರಿಯನ್ನು ಹೊರುವ ಪ್ರಧಾನ ಆನೆಯಾಗಿ ಅನುಭವಿ ‘ಪ್ರಶಾಂತ್’ ಆನೆಯನ್ನು ಆಯ್ಕೆ ಮಾಡಲಾಗಿದೆ.

54 ವರ್ಷ ವಯಸ್ಸಿನ ಪ್ರಶಾಂತ್ ಕಳೆದ 18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, ಅನುಭವ, ಆರೋಗ್ಯ, ಶಾಂತ ಸ್ವಭಾವ ಹಾಗೂ ಅಂಬಾರಿ ಹೊರುವ ಸಾಮರ್ಥ್ಯವನ್ನು ಪರಿಶೀಲಿಸಿ ಆಯ್ಕೆ ಮಾಡಲಾಗಿದೆ. ಆನೆಗಳ ಆರೋಗ್ಯ, ಸುರಕ್ಷತೆ, ಪೌಷ್ಟಿಕ ಆಹಾರ ಮತ್ತು ವಿಶ್ರಾಂತಿಗೆ ವಿಶೇಷ ಆದ್ಯತೆ ನೀಡಲಾಗಿದೆ.

ಅಂಬಾರಿ ಹೊರುವ ಮೀಸಲು ಆನೆಯಾಗಿ ಧನಂಜಯ, ನಿಶಾನೆ ಆನೆಯಾಗಿ ಅಭಿಮನ್ಯು, ನೌಪತ್ ಆನೆಯಾಗಿ ಗೋಪಿ ಹಾಗೂ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪ ಆಯ್ಕೆಯಾಗಿದ್ದಾರೆ. ಏಕಲವ್ಯ, ಸುಗ್ರೀವ, ಲಕ್ಷ್ಮೀ, ಶ್ರೀಕಂಠ, ಶ್ರೀರಾಮ ಹಾಗೂ ಮಹೇಂದ್ರ ಆನೆಗಳು ಸಾಲಾನೆ ತಂಡದಲ್ಲಿರಲಿವೆ.

ಈ ಬಾರಿಯ ದಸರಾಗೆ ಕೇರಳ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸಲು ಸಮ್ಮತಿ ಸೂಚಿಸಿದ್ದು, ಸುಮಾರು 40 ಪ್ರಸಿದ್ಧ ಸಿನಿಮಾ ಕಲಾವಿದರು ಭಾಗವಹಿಸುವ ನಿರೀಕ್ಷೆಯಿದೆ. ನಾಡಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

About The Author