ನಾ ನಾಯಕಿ : ಮನೆ ಒಳಗೆ ಕರೆದುಕೊಳ್ಳೋಕೆ ಜಾತಿ ನೋಡಿದ್ರು: Najma Nazeer Chikkanerale Podcast

Special Interview: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಬಾಲ್ಯದಲ್ಲಿ ನಡೆದ ಘಟನೆಯ“ಂದರ ಬಗ್ಗೆ ವಿವರಿಸಿದ್ದಾರೆ.

5 ನೇ ಕ್ಲಾಸಿನಲ್ಲಿರುವಾಗ ಹೊಗೆಸ“ಪ್ಪಿಗೆ ಗೊಬ್ಬರ ಹಾಕಲು ಮಕ್ಕಳನ್ನು ಕರೆಯುತ್ತಿದ್ದರು. ಹಾಗೆ ನಜ್ಮಾ ಕೆಲಸಕ್ಕೆ ಹೋದಾಗ, ಕೈ ಗಲೀಜಾಗಿದೆ ಎಂದು ಕೈ ಕ್ಲೀನ್ ಮಾಡಲು ಹೋಗಿ ಬಾವಿಯಲ್ಲಿ ಬಿದ್ದಿದ್ದರು. ಆಗ ಅವರನ್ನು ಓರ್ವ ವ್ಯಕ್ತಿ ಕಾಪಾಡಿದ್ದರು.

ಈ ಬಗ್ಗೆ ಪ್ರಶ್ನಿಸಿರುವ ನಜ್ಮಾ, ನಮ್ನನ್ನು ಉಳಿಸಲು, ನಮಗೆ ವಿದ್ಯೆ ನೀಡಲು, ಕೆಲಸ ಮಾಡಲು ಈ ಎಲ್ಲ ವಿಚಾರಗಳಲ್ಲೂ ಜಾತಿ ಧರ್ಮದ ವಿಚಾರ ಬರುವುದಿಲ್ಲ. ಆದರೆ ಮನೆಗೆ ಬರಲು, ಮನೆಗೆ ಹೋಗಲು, ತಿನ್ನುವ ವಿಷಯ ಬಂದಾಗ, ಸ್ಪರ್ಶಿಸುವ ವಿಷಯ ಬಂದಾಗ ಮಾತ್ರ, ಜಾತಿ-ಧರ್ಮದ ಬಗ್ಗೆ ಯಾಕೆ ಕೇಳುತ್ತಾರೆ ಎಂದು ನಜ್ಮಾಗೆ ಪ್ರಶ್ನೆ ಬಂದಿತ್ತಂತೆ.

ಬಳಿಕ ತನ್ನ ಮನೆಯಿಂದಲೇ ತಾರತಮ್ಯ ತೆಗೆದು ಹಾಕುವ ಪ್ರಯತ್ನವನ್ನು ನಜ್ಮಾ ಮಾಡಿದರಂತೆ. ನಂತರ ಶಾಲಾ- ಕಾಲೇಜು ದಿನಗಳಲ್ಲಿ ನವ ಕರ್ನಾಟಕ ಪತ್ರಿಕೆಯ ಕೆಲ ಪುಸ್ತಕಗಳನ್ನು ಓದುವ ಮೂಲಕ, ಹಲವು ವಿಷಯಗಳನ್ನು, ಚಿಂತನೆಗಳ ಬಗ್ಗೆ ತಿಳಿದುಕ“ಂಡರು. ರಾಜಕೀಯಕ್ಕೆ ಬರಬೇಕು ಎಂದು ನಜ್ಮಾ ಎಂದಿಗೂ ಯೋಚಿಸಿರಲಿಲ್ಲವಂತೆ. ಆದರೆ ಕಾರಣಾಂತರಗಳಿಂದ ರಾಜಕೀಯಕ್ಕೆ ಬಂದಿದ್ದು ಅಂತಾರೆ ನಜ್ಮಾ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author