Sunday, December 22, 2024

Latest Posts

‘ಶಿಕ್ಷಣ ಸಚಿವರೇ.. ನೀವು ಈ ಕೆಲಸ ಮಾಡಿದ್ರೆ ನಾನು ಉಪವಾಸ ಸತ್ಯಾಗ್ರಹ ಮಾಡ್ತೇನೆ..’

- Advertisement -

ನಾಡೋಜ ಡಾ. ಮಹೇಶ್ ಜೋಶಿ. ಚಂದನದಲ್ಲಿ ಬರುವ ಹಲವು ಕಾರ್ಯಕ್ರಮಗಳಲ್ಲಿ ನಾವು ನೀವು ಇವರನ್ನ ನೋಡಿದ್ದೇವೆ. ಇದೀಗ ಇವರು ಕನ್ನಡಕ್ಕಾಗಿ ನನ್ನ ನಿರಂತರ ಕಾಳಜಿ ಎಂಬ ಅಭಿಯಾನ ಶುರು ಮಾಡಿದ್ದಾರೆ.

ಐವತ್ತು ವರ್ಷಗಳಿಂದ ನಡೆಯುತ್ತಿದ್ದ ಕನ್ನಡ ಶಾಲೆಯೊಂದನ್ನ ಶಿಕ್ಷಕರಿಲ್ಲದ ಕಾರಣ ಮುಚ್ಚಲಿದ್ದಾರೆಂಬ ವರದಿ ನೋಡಿದ ನಾಡೋಜ ಡಾ. ಮಹೇಶ್ ಜೋಶಿಯವರು, ಯಾವುದೇ ಕಾರಣಕ್ಕೂ ಕನ್ನಡ ಶಾಲೆ ಮುಚ್ಚಬಾರದೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಶಾಲೆ ಮುಚ್ಚಿದ್ದಲ್ಲಿ, ಉಪವಾಸ ಸತ್ಯಾಗ್ರಹ ಮಾಡುವುದಾಗಿಯೂ ಹೇಳಿದ್ದರು.

ಈ ಬಗ್ಗೆ ಮಾತನಾಡಿರುವ ಜೋಶಿ, ಕನ್ನಡದ ನೆಲ ಜಲ ಭಾಷೆಗೆ ಕುಂದು ಬಂದರೆ ಅದಕ್ಕೆ ಪ್ರತಿಕ್ರಿಯಿಸುವುದು ನನ್ನ ಗುಣ, ನಾನು ಹೆಮ್ಮೆಯ ಕನ್ನಡಿಗನೆಂದು ಹೇಳಲು ನನಗೆ ಸಂತೋಷವಾಗುತ್ತದೆ. ಇತ್ತೀಚಿಗೆ ಕಳಸ ತಾಲೂಕಿನ ಇಡಕಣಿ ಗ್ರಾಮ ಪಂಚಾಯ್ತಿಯಲ್ಲಿ ಬರುವಂಥ ಕೋಟೆಮಕ್ಕಿ ಅನ್ನುವಂಥ ಕನ್ನಡ ಶಾಲೆ 50 ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದ್ರೆ ಅಲ್ಲಿ ಶಿಕ್ಷಕರಿಲ್ಲದೇ ಶಾಲೆ ಮುಚ್ಚುವಂಥ ಪರಿಸ್ಥಿತಿ ಎದುರಾಗಿದೆ ಎಂಬ ವರದಿಯನ್ನು ನೋಡಿದೆ. ತಕ್ಷಣ ಶಿಕ್ಷಣ ಸಚಿವರಿಗೆ ಈ ಬಗ್ಗೆ ತಿಳಿಸಿ, ಶಾಲೆ ಮುಚ್ಚಿದರೆ ನಾನು ಉಪವಾಸ ಸತ್ಯಾಗ್ರಹ ಮಾಡುತ್ತೇನೆಂದು ಹೇಳಿದೆ. ಈ ಬಗ್ಗೆ ಪರಿಶೀಲಿಸಿ,ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರು ಯಾವುದೇ ಆತಂಕ ಬೇಡ, ಶಾಲೆ ಮುಚ್ಚಲಾಗುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಜೋಶಿ ಹೇಳಿದರು.

- Advertisement -

Latest Posts

Don't Miss