Monday, October 6, 2025

Latest Posts

ನಾಗಚೈತನ್ಯ ಎಂಗೇಜ್‌ಮೆಂಟ್ ಬಗ್ಗೆ ನಾಗಾರ್ಜುನ್ ಮೊದಲ ಪ್ರತಿಕ್ರಿಯೆ

- Advertisement -

Tollywood News: ಮೊನ್ನೆಯಷ್ಟೇ ಟಾಲಿವುಡ್ ನಟ ನಾಗಚೈತನ್ಯ ಮತ್ತು ನಟಿ ಶೋಭಿತಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ, ನಾಗಚೈತನ್ಯ ಸಮಂತಾ ಜೊತೆ ಡಿವೋರ್ಸ್ ಪಡೆದು, ದೂರವಾಗಿದ್ದರು. ಶೋಭಿತಾ ಜೊತೆ ಡೇಟ್ ಮಾಡುತ್ತಿದ್ದಾರೆ ಅನ್ನೋ ಗುಸು ಗುಸು ಕೇಳಿಬಂದಿದ್ದರೂ ಕೂಡ, ಸಮಂತಾ ಫ್ಯಾನ್ಸ್ ಮಾತ್ರ ಇದ್ನನು ನಂಬಿರಲಿಲ್ಲ.

ಸಮಂತಾ ಮತ್ತು ನಾಗ್ ಮತ್ತೆ ಒಂದಾಗ್ತಾರೆ ಅಂತಾನೇ ತಿಳಿದುಕೊಂಡಿದ್ದರು. ಆದರೆ ಸಮಂತಾ ಫ್ಯಾನ್ಸ್‌ಗೆ ಇದ್ದಕ್ಕಿದ್ದಂತೆ ಶಾಕ್ ಕೊಟ್ಟಿರುವ ನಾಗ್, ನಟಿ ಶೋಭಿತಾ ಜೊತೆ ಆಗಸ್ಟ್ 8ರಂದು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

ಈ ಬಗ್ಗೆ ನಾಗ್ ತಂದೆ ಅಕ್ಕಿನೇನಿ ನಾಗಾರ್ಜುನ್‌ಗೆ ಸಮಾಧಾನವಿದೆ ಅನ್ನೋದು ಅವರ ಮೊದಲ ಪ್ರತಿಕ್ರಿಯೆಯಿಂದಲೇ ತಿಳಿದಿದೆ. ಯಾಕಂದ್ರೆ ಮಗನ ಎಂಗೇಜ್‌ಮೆಂಟ್ ಬಗ್ಗೆ ಮೊದಲ ರಿಯಾಕ್ಷನ್ ಕೊಟ್ಟಿರುವ ನಾಗಾರ್ಜುನ್, ಮಗ ಸಮಂತಾ ದೂರವಾದ ಬಳಿಕ, ಡಿಪ್ರೆಶನ್‌ಗೆ ಹೋಗಿದ್ದ. ಆದರೆ ಈಗ ಖುಷಿಯಾಗಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸಮಂತಾ ಮತ್ತು ನಾಗ್ ಇಬ್ಬರೂ ಡಿವೋರ್ಸ್ ಪಡೆದಾಗ, ನಾಗ್ ಡಿಪ್ರೆಶನ್‌ಗೆ ಹೋಗಿದ್ದ. ಆದರೆ ಅವನು ತನ್ನ ಭಾವನೆಯನ್ನು ಯಾರಲ್ಲೂ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಅವನ ಮನಸ್ಸಿನಲ್ಲಿ ಅದೆಷ್ಟು ಬೇಸರವಿದೆ ಎಂದು ನಮಗೆ ಗೊತ್ತಾಗುತ್ತಿತ್ತು. ಆದರೆ ಇದೀಗ ಖುಷಿಯಾಗಿದ್ದಾನೆ. ಶೋಭಿತಾ ಮತ್ತು ನಾಗ್ ಪರಸ್ಪರ ತುಂಬಾ ಪ್ರೀತಿಸುತ್ತಾರೆ ಎಂದು ನಾಗ್ ಹೇಳಿದ್ದಾರೆ.

ಇನ್ನು ಸಡನ್ ಆಗಿ ಎಂಗೇಜ್‌ಮೆಂಟ್ ಆಗಿದ್ದಕ್ಕೆ ಕಾರಣವೇನೆಂದು ಹೇಳಿರುವ ನಾಗಾರ್ಜುನ್, ಆಗಸ್ಟ್ 8 ಎಂಗೇಜ್‌ಮೆಂಟ್‌ಗೆ ಅತ್ಯುತ್ತಮ ದಿನವಾಗಿತ್ತು. ಹಾಗಾಗಿ ಎರಡೂ ಮನೆಯವರು ಇದಕ್ಕೆ ಒಪ್ಪಿಗೆ ನೀಡಿ, ಎಂಗೇಜ್‌ಮೆಂಟ್ ಮಾಡಿ ಬಿಟ್ಟೆವು. ಆದರೆ ಮದುವೆ ಇಷ್ಟು ಬೇಗ, ಇಷ್ಟು ಗಡಿಬಿಡಿಯಲ್ಲಿ ಮಾಡುವುದಿಲ್ಲವೆಂದು ಹೇಳಿದ್ದಾರೆ.

- Advertisement -

Latest Posts

Don't Miss