Nagpur News: ಪ್ರತಿಭಟನೆ ನಡೆಯುತ್ತಿರುವ ವೇಳೆ ಸಿಕ್ಕಿದ್ದೆ ಚಾನ್ಸು, ಯಾರಿಗೂ ಏನೂ ಗೊತ್ತಾಾಗಲ್ಲ ಅಂತಾ, ಓರ್ವ ವ್ಯಕ್ತಿ, ಮಹಿಳಾ ಪೊಲೀಸ್ ಅಧಿಕಾರಿಯ ಮೈ ಕೈ ಮುಟ್ಟಿ, ಅಸಭ್ಯ ವರ್ತನೆ ತೋರಿದ್ದಾನೆ. ಆದರೆ ಈತನ ಕಿತಾಪತಿ ವೀಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರತಿಭಟನೆ, ಗಲಾಟೆ ನಡೆಯುವಾಗ, ಅಲ್ಲಿ ಯಾರಿಗೂ ತೊಂದರೆಯಾಗದಿರಲಿ ಎಂದು ಪೊಲೀಸರನ್ನು ನೇಮಿಸಲಾಗುತ್ತದೆ. ಆದರೆ ಇಲ್ಲಿ ಮಹಿಳಾ ಪೊಲೀಸ್‌ಗೆನೇ ತೊಂದರೆಯಾಗಿದೆ. ನಾಗ್ಪುರದಲ್ಲಿ ನಡೆದ ಘಟನೆ ಇದಾಗಿದ್ದು, ಪ್ರತಿಭಟನೆ ನಡೆಯುತ್ತಿದ್ದ ವೇಳೆ ಮಹಿಳಾ ಪೊಲೀಸ್ ಸೇರಿ, ಎಲ್ಲ ಪೊಲೀಸರು ಪ್ರತಿಭಟನಾಕಾರರು ಗಲಾಟೆ ಮಾಡದಂತೆ ತಡೆಯುತ್ತಿದ್ದರು.
ಈ ವೇಳೆ ಓರ್ವ ವ್ಯಕ್ತಿಯನ್ನು ಎಳೆದುಕೊಂಡು ಹೋಗುವಾಗ, ಜೋರಾಗಿರುವ ಗಲಾಟೆ ಮದ್ಯೆ ವ್ಯಕ್ತಿಯೋರ್ವ ಮಹಿಳಾ ಪೊಲೀಸ್ ಅಧಿಕಾರಿಯ ಸೊಂಟಕ್ಕೆ ಕೈ ಹಾಕಿ ಅಸಭ್ಯ ವರ್ತನೆ ತೋರಿದ್ದಾನೆ. ಆದರೆ ಅದಾಗಲೇ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿ, ಹಿಂದಿರುಗಿ, ಆತನನ್ನು ನೂಕಿ, ಏಟು ಕೊಟ್ಟಿದ್ದಾರೆ. ಅಲ್ಲದೇ, ಆತನನ್ನು ಬಂಧಿಸಿ ಎಳೆದೊಯ್ದಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಹಲವರು ಈತನ ವರ್ತನೆಗೆ ಆಕ್ರೋಶ ಹೊರಹಾಕಿದ್ದಾರೆ. ಮಹಿಳಾ ಪೊಲೀಸರಿಗೆ ರಕ್ಷಣೆ ಇಲ್ಲವೆಂದ ಮೇಲೆ ಸಾಮಾನ್ಯ ಮಹಿಳೆಯರ ಗತಿ ಏನು..? ಇಂಥ ಕಾಮುಕರಿಂದ ತಪ್ಪಿಸಿಕೊಳ್ಳಲು ಮಹಿಳೆಯರು ತ್ರಿಶೂಲ ಹಿಡಿದು ಓಡಾಡಬೇಕು ಎಂದು ಹೇಳಿದ್ದಾರೆ.