Sunday, September 8, 2024

Latest Posts

ಗಣೇಶ್ ಪರಶುರಾಮ್ ಹೊಸ ಸಿನಿಮಾ; ನಹುಷ್ ಚಕ್ರವರ್ತಿ ಸ್ಯಾಂಡಲ್ ವುಡ್ ಗೆ ಎಂಟ್ರಿ.

- Advertisement -

ಕಿರು ಚಿತ್ರಗಳ ಮುಕಾಂತರ ಗಮನಸೆಳೆದ ಶ್ರೀ ಗಣೇಶ್ ಪರಶುರಾಮ್ ರವರು ಬೆಳ್ಳಿತೆರೆಗೆ ಮೊದಲ ಬಾರಿ ‘ಬ್ಯಾಂಗ್‌’ ಸಿನಿಮಾ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿರು. ಈ ಸಿನಿಮಾ 48 ಗಂಟೆಗಳಲ್ಲಿ ನಡೆಯುವ ಘಟನೆಯೊಂದನ್ನು ವಿಭಿನ್ನವಾಗಿ ಹೇಳುವ ಕಥೆ.

ಇದೀಗ ಸಿನಿ ಪಯಣದಲ್ಲಿ ಶ್ರೀ ಗಣೇಶ್ ಪರಶುರಾಮ್, ಅವರ ಎರಡನೇ ಸಿನಿಮಾ ಮಾಡಲಿದ್ದು, ಈ ಸಿನಿಮಾದಲ್ಲಿ ನಟಿ ನಭಾ ನಟೇಶ್ ಅವರ ಸಹೋದರ ನಹುಷ್ ಚಕ್ರವರ್ತಿ ನಾಯಕ ನಟನಾಗಿ ಮೊದಲ ಬಾರಿಗೆ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಹುಷ್ ಥಿಯೇಟರ್ ಆರ್ಟ್ ರಿಸರ್ಚ್‌ಗಾಗಿ ಆದಿಶಕ್ತಿ ಪ್ರಯೋಗಾಲಯದಲ್ಲಿ ನಟನಾ ತರಬೇತಿಯನ್ನು ಪಡೆದಿದ್ದಾರೆ. ಅದಷ್ಟೇ ಅಲ್ಲದೆ ನೃತ್ಯ ಮತ್ತು ಸಾಹಸಗಳಲ್ಲಿ ಸ್ವತಃ ತರಬೇತಿ ಪಡೆದಿದ್ದು, ಸಂಕಷ್ಟ ಕರ ಗಣಪತಿ, ಮತ್ತು ಫ್ಯಾಮಿಲಿ ಪ್ಯಾಕ್ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದಾರೆ.

ಇನ್ನು ಜುಲೈ 12 ರಂದು ನಹುಷ್ ಹುಟ್ಟುಹಬ್ಬ ಇರುವ ಕಾರಣ ಅಂದೇ ಈ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುವುದು. ಈ ಚಿತ್ರವನ್ನು ಗೀತರಚನೆಕಾರ, ಕಿರುಚಿತ್ರ ನಿರ್ಮಾಪಕ ಹಾಗೂ ‘ಬ್ಯಾಂಗ್’ ಖ್ಯಾತಿಯ ಗಣೇಶ್ ಪರಶುರಾಮ್ ನಿರ್ದೇಶಿಸಿಸುತ್ತಿದ್ದಾರೆ.

ಈ ಸಿನಿಮಾ ರೊಮ್ಯಾಂಟಿಕ್, ಆಕ್ಷನ್ ಮತ್ತು ಎಂಟರ್‌ಟೈನರ್ ಸಿನಿಮಾವಾಗಿದ್ದು, ಇನ್ನೂ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಹಾಗೂ ಈ ಸಿನಿಮಾದ ಛಾಯಾಗ್ರಹಣವನ್ನು ಉದಯ್ ಲೀಲಾ ನಿರ್ವಹಿಸಲಿದ್ದು, ರಿಥ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಷ್ಟೇ ಅಲ್ಲದೆ ವಿಜೇತ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ 

 

 

 

 

- Advertisement -

Latest Posts

Don't Miss