America News: ನೇಲ್ ಪಾಲೀಶ್ ರಿಮೂವರ್ ಬಳಸುವಾಗ, ಎದುರಿಗೆ ಕ್ಯಾಂಡಲ್ ಹಚ್ಚಿಟ್ಟ ಪರಿಣಾಮ, ನೇಲ್ ಪಾಲೀಶ್ ರಿಮೂವರ್ ಬಾಟಲಿ ಬ್ಲಾಸ್ಟ್ ಆದ ಪರಿಣಾಮ, ಓರ್ವ ಬಾಲಕಿಯ ಮೈ ಕೈ, ಕೂದಲು ಸುಟ್ಟು ಹೋಗಿದೆ.
ಅಮೆರಿಕದ ಓಹಿಯೋ ಎಂಬಲ್ಲಿ ಈ ಘಟನೆ ನಡೆದಿದ್ದು, ಕೆನಡಿ(14) ಎಂಬ ಬಾಲಕಿಯ ಕೂದಲು ಮತ್ತು ದೇಹದ ಕೆಲವು ಭಾಗ ಸುಟ್ಟು ಹೋಗಿದೆ. ಈಕೆ ಮೇಣದ ಬತ್ತಿ ಹಚ್ಚಿಟ್ಟು, ಅದರ ಪಕ್ಕ ಕುಳಿತು, ತನ್ನ ಉಗುರಿಗೆ ಹಚ್ಚಿದ ನೇಲ್ ಪೇಂಟ್ ರಿಮೂವ್ ಮಾಡಲು ಹೋಗಿದ್ದಾಳೆ. ಈ ವೇಳೆ ಬೆಂಕಿ ಹತ್ತಿ ಈ ಅವಘಡ ನಡೆದಿದೆ. ತಕ್ಷಣವೇ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಸ್ಯಾನಿಟೈಸರ್, ಪರ್ಫ್ಯೂಮ್, ನೇಲ್ ಪೇೆಂಟ್ ರಿಮೂವರ್ ಸೇರಿದಂತೆ ಆಲ್ಕೋಹಾಲ್ ಕಂಟೆಂಟ್ ಇರುವ ಯಾವುದೇ ವಸ್ತುವನ್ನು ಬೆಂಕಿಯ ಬಳಿ ಕೊಂಡೊಯ್ದರೆ, ಅದು ಖಂಡಿತವಾಗಿಯೂ ಸ್ಪೋಟವಾಗುತ್ತದೆ.
ಬಿಗ್‌ಬಾಸ್ ಸ್ಪರ್ಧಿ ಮಾಡಿದ್ದ ರೀಲ್ಸ್‌ನಿಂದ ಕಳೆದು ಹೋಗಿದ್ದ ಪುರುಷ, ಮಂಗಳಮುಖಿಯಾಗಿ ಪತ್ತೆ