Bellary News: ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಮೂರನೇ ವಾರ್ಡಿನ ಕೆಲವು ಕೇರಿಗಳಲ್ಲಿ ನೀರು ಬಿಟ್ಟ ಸಂದರ್ಭದಲ್ಲಿ ನಲ್ಲಿಗಳಲ್ಲಿ ರಕ್ತದ ನೀರು ಬಂದಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಜಾಮಿಯಾ ಮಸೀದಿ ಹತ್ತಿರದ ಕಮಾಲ್ ಸಾಬ್ ಓಣಿ, ವಲಿಪೀರ್ ಸಾಬ್ ಅವರ ಓಣಿಯ ಕೆಲವು ನಲ್ಲಿಯಲ್ಲಿ ಏಕಾಏಕಿ ರಕ್ತ ಹಾಗೂ ರಕ್ತದ ಗಡ್ಡೆಗಳು ಬಂದಿದ್ದು ಯುವಕರು ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ತಕ್ಷಣವೇ ಪಟ್ಟಣ ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪಂಚಾಯಿತಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು ನೀರು ಬಿಟ್ಟ ಸಂದರ್ಭದಲ್ಲಿ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ.
ಆದರೆ ಇಂದು ಹತ್ತು ನಿಮಿಷಗಳವರೆಗೆ ರಕ್ತಮಿಶ್ರಿತ ನೀರು ಬಂದಿದ್ದರಿಂದ ಮಹಿಳೆಯರು ನೀರು ಹಿಡಿಯದೆ ಆತಂಕಕ್ಕಗೊಳಗಾಗಿದ್ದಾರೆ. ನಲ್ಲಿ ನೀರಿನಲ್ಲಿ ರಕ್ತ ಬಂದಿರುವುದರಿಂದ ಪಂಚಾಯಿತಿಯವರು ಬಂದು ನೋಡಿ ಹೋದರು, ಆದರೆ ನೀರು ಬಳಕೆಗೆ ಯೋಗ್ಯವೋ ಅಲ್ಲವೋ ಎಂಬ ಬಗ್ಗೆ ತಿಳಿಸಿಲ್ಲ. ಈ ನೀರು ಏನು ಮಾಡಬೇಕು? ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಅಂಬಾನಿಗೆ ಬೆದರಿಕೆ ಹಾಕಿದ್ದೂ ಬೇರೆ ಯಾರೂ ಅಲ್ಲ, ಆತಂಕ ಮೂಡಿಸಿದೆ ಈ ವಿದ್ಯಾರ್ಥಿಗಳ ನಡೆ..!
ಲೋಕಸಭಾ ಚುನಾವಣೆಗೆ ಕೈ ಭರ್ಜರಿ ತಯಾರಿ: ಮುಖ್ಯಮಂತ್ರಿ ಮನೆಯಲ್ಲಿ ಸಚಿವರ ಸಭೆ