Hubli News: ಹುಬ್ಬಳ್ಳಿ: ಹುಬ್ಬಳ್ಳಿ – ಪಾಕ್ ಘೋಷಣೆ ಪ್ರಕರಣದ ಎಫ್ ಐ ಆರ್ ನಲ್ಲಿ ನಾಸಿರ್ ಹುಸೇನ್ ಹೆಸರು ಸೇರಿಸಬೇಕು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಆಗ್ರಹಿಸಿದ್ದಾರೆ.
ಮೊದಲು ಕಾಂಗ್ರೆಸ್ ಅಲ್ಲಗಳೆಯುವ ಕೆಲಸ ಮಾಡಿತು. ಈಗ ಮೂವರ ಬಂಧನ ಆಗಿದೆ.ನಾಸಿರ್ ಹುಸೇನ್ ಟೀಮ್ ಘೋಷಣೆ ಕೂಗಿರೋದು ಖಾತ್ರಿಯಾಗಿದೆ. ಆರೋಪಿಗೆ ಸಪೋರ್ಟ್ ಮಾಡುವುದೂ ಆರೋಪವೇ. ಎಫ್ ಐ ಆರ್ ನಲ್ಲಿ ನಾಸಿರ್ ಸೇರಿಸಬೇಕು. ಅವರಿಗೆ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಡಬಾರದು. ರಾಜ್ಯಸಭಾ ಸಭಾಪತಿಗಳಿಗೆ ದೂರು ನೀಡೋ ಕುರಿತು ಸಮಾಲೋಚಿಸುತ್ತೇವೆ. ರಾಜ್ಯಾಧ್ಯಕ್ಷರು, ಕೋರ್ ಕಮಿಟಿ ಸದಸ್ಯರು ಈ ಕುರಿತು ತೀರ್ಮಾನಿಸ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಇಂತಹ ಘಟನೆ ನಡೆಯುತ್ತಿವೆ ಎಂದು ಮಹೇಶ್ ಟೆಂಗಿನಕಾಯಿ ಹರಿಹಾಯ್ದಿದ್ದಾರೆ.
ಅಭಿವೃದ್ಧಿಯ ಇನ್ನೊಂದೆ ಹೆಸರೇ ಬಿಜೆಪಿ. ನಮಗೆ ಪಾಕಿಸ್ತಾನ, ಅಫಘಾನಿಸ್ತಾನ್ ಹೆಸರು ಬೇಕಿಲ್ಲ. ಮಂಡ್ಯದಲ್ಲಿ ಎರಡು ವರ್ಷದ ಹಿಂದೆ ನಡೆದ ಘಟನೆಗೆ ಈಗ ಕೇಸ್ ಹಾಕ್ತಿದಾರೆ. ಬಿಜೆಪಿ ಯವರು ತಪ್ಪು ಮಾಡಿದ್ದರು ಕೇಸ್ ಹಾಕಿ, ಕ್ರಮ ಕೈಗೊಳ್ಳಿ. ನಿಮ್ಮದೇ ಸರ್ಕಾರವಿದೆ, ತನಿಖೆ ಮಾಡಿ. ಯಾರೇ ಮಾಡಿದ್ರು ತಪ್ಪು. ನಿಜವಾದ ಅಪರಾಧಿಗಳನ್ನು ಬಂಧಿಸೋ ತಾಕತ್ತು ಇಲ್ಲ. ದೇಶ ಪ್ರೇಮಿ ಯಾರು ಅಂತಾ ಇಡೀ ದೇಶಕ್ಕೆ ಗೊತ್ತಿದೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಟಿಕೆಟ್ ಗೆ ದುಡ್ಡು ಕೊಡಬೇಕೆಂಬ ರವೀಂದ್ರ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಹೇಶ್ ಟೆಂಗಿನಕಾಯಿ, ಈ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರೇ ಉತ್ತರಿಸಬೇಕು. ಲೋಕಾ ಟಿಕೆಟ್ ವಿಳಂಬವಾಗಿಲ್ಲ. ಆಯಾ ರಾಜ್ಯಗಳಲ್ಲಿ ಅಭ್ಯರ್ಥಿಗಳ ಕುರಿತು ಚರ್ಚೆಯಾಗ್ತಿದೆ. ಎರಡು ಮೂರು ದಿನದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತೆ.
ಸೋಮಶೇಖರ್, ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿದ ಮಹೇಶ್ ಟೆಂಗಿನಕಾಯಿ, ಕಾಂಗ್ರೆಸ್ ನ ಹಲವಾರು ನಾಯಕರು ಬಿಜೆಪಿ ಕದ ತಟ್ಟುತ್ತಿದ್ದಾರೆ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ. ತಮ್ಮ ಡ್ಯಾಮೇಜ್ ಕಂಟ್ರೋಲ್ ಗೆ ಹೀಗೆ ಹೇಳುತ್ತಿದ್ದಾರೆ ಎಂದು ಹೇಳಿದರು.
ನಟಿ ಕಾಜಲ್ ಅಗರ್ವಾಲ್ ಜೊತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿ: ನೆಟ್ಟಿಗರ ಆಕ್ರೋಶ
ನೀರಿನ ಸಮಸ್ಯೆ ಪರಿಹರಿಸಲು BWSSB ಚೇರ್ಮನ್‌ರನ್ನು ಭೇಟಿಯಾಗಿ ಸಲಹೆ ನೀಡಿದ ಸಂಸದ ತೇಜಸ್ವಿ ಸೂರ್ಯ