Monday, December 23, 2024

Latest Posts

ವಿಜಯೇಂದ್ರ ಬದಲು ಯತೀಂದ್ರ ಹೆಸರು: ಭಾಷಣದುದ್ದಕ್ಕೂ ಸಚಿವ ಸಂತೋಷ್ ಲಾಡ್ ಯಡವಟ್ಟು

- Advertisement -

Hubli Political News: ಹುಬ್ಬಳ್ಳಿ: ನಗರದ ರೈಲ್ವೆ ಮೈದಾನದಲ್ಲಿ ನಡೆದ ಸರ್ಕಾರದ ಗ್ಯಾರಂಟಿ ಸಮಾವೇಶದಲ್ಲಿ ಸಚಿವ ಸಂತೋಷ್ ಲಾಡ್ ಯಡವಟ್ಟು ಮಾಡಿಕೊಂಡಿದ್ದಾರೆ.

ಪಾಪ ಯತೀಂದ್ರ ಹುಬ್ಬಳ್ಳಿಗೆ ಬಂದು ಸರ್ಕಾರ ಪತನ‌ ಆಗುತ್ತೆ ಅಂತಾರೆ. ವಿಜಯೇಂದ್ರ ಬದಲು ಯತೀಂದ್ರ ಹೆಸರು ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ. ಅದೇ ರೀತಿಯಾಗಿ ಡಾಲರ್ ಕುರಿತು ಮಾತನಾಡುವಾಗಲೂ ನಳೀನ‌ ಕುಮಾರ್ ಕಟೀಲು‌ ಎನ್ನುವ ಬದಲು‌ ನವೀನ ಕಟೀಲು ಎಂದು ಹೇಳುವ ಮೂಲಕ ಭಾಷಣದುದ್ದಕ್ಕೂ ಸಂತೋಷ್ ಲಾಡ್ ಯಡವಟ್ಟು ಮಾಡಿಕೊಂಡಿದ್ದಾರೆ. ಆಹಾರ ಭದ್ರತೆ ಕಾನೂನು ತಂದಿದ್ದು ಮನಮೋಹನ್ ಸಿಂಗ್ ಸರ್ಕಾರ. ಅಕ್ಕಿ ಕೊಡುತ್ತೇವೆ ಅಂತಿರಲ್ಲ, ಆ ಕಾನೂನು ತಂದಿದ್ದು ನಾವು ಎಂದು ಹೇಳಿದ್ದಾರೆ.

ನರೇಗಾ ಕಾರ್ಯಕ್ರಮ ಯಾವ ಪಕ್ಷ ಮಾಡಿಲ್ಲ ಅದನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ. ನಾವು ಚರ್ಚೆಗೆ ಸಿದ್ದ. ನಮ್ಮ ದೇಶದಲ್ಲಿ 2019 ರಿಂದ 2021 ರ ವರೆಗೆ 1347000 ನಮ್ಮ ಅಕ್ಕ ತಂಗಿಯರು ಕಾಣೆಯಾಗಿದ್ದಾರೆ. ಇದು ನಾನು ಹೇಳೋದಲ್ಲ, ನ್ಯಾಷನಲ್ ಕ್ರೈಂ ರಿಪೋರ್ಟ್ ಕೊಟ್ಟಿರುವುದು. ಇದರ ಬಗ್ಗೆ ಬಿಜೆಪಿಯವರು ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್

- Advertisement -

Latest Posts

Don't Miss